Video: ಮರಿ ಕೋತಿಯ ಬಾಯಲ್ಲಿದ್ದ ಆಹಾರವನ್ನು ಕಸಿದು ತಿಂದ ಕೋತಿ

ಚೇಷ್ಟೆ ಮಾಡುವುದರಲ್ಲಿ ಕೋತಿಗಳು ಎತ್ತಿದ ಕೈ. ಸೋಶಿಯಲ್ ಮೀಡಿಯಾದಲ್ಲಿ ಕೋತಿಗಳು ಮಾಡುವ ಚೇಷ್ಟೆಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಮರಿಕೋತಿಯ ಬಾಯಲ್ಲಿದ್ದ ಆಹಾರವನ್ನು ಕೋತಿಯೊಂದು ಕಸಿದು ತಿದ್ದಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮರಿ ಕೋತಿಯ ಬಾಯಲ್ಲಿದ್ದ ಆಹಾರವನ್ನು ಕಸಿದು ತಿಂದ ಕೋತಿ
ವೈರಲ್‌ ವಿಡಿಯೋ
Image Credit source: Instagram

Updated on: Jul 09, 2026 | 10:33 AM

ಮನುಷ್ಯರೇನಾದ್ರೂ ಅತಿಯಾಗಿ ಆಡಿದ್ರೆ, ಮಂಗನಂತೆ (Monkey) ವರ್ತಿಸಬೇಡ ಎಂದು ಹೇಳುತ್ತೇವೆ. ನೀವು ಸಾಮಾನ್ಯವಾಗಿ ಕೋತಿಗಳ ಚೇಷ್ಟೆಗಳನ್ನು ನೋಡಿರುತ್ತೀರಿ. ಅವುಗಳು ತಮ್ಮ ಬಳಗದಲ್ಲಿ ಜಗಳ ಮಾಡಿಕೊಳ್ಳುತ್ತವೆ. ಇದೀಗ ಇಂತಹದ್ದೇ ದೃಶ್ಯ ವೈರಲ್ ಆಗಿದೆ. ಕೋತಿ ಮರಿಯನ್ನು ಕೆಳಗೆ ಉರುಳಿಸಿ, ಅದರ ಬಾಯಲ್ಲಿ ಆಹಾರವನ್ನು ಕೋತಿಯೊಂದು ಕಸಿದು ತಿಂದಿರುವ ದೃಶ್ಯ ಇದಾಗಿದೆ.. ಈ ಕ್ಲಿಪಿಂಗ್ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಮಿಯುಕಿ (miyuki) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕೋತಿಯೊಂದು ಮರಿ ಕೋತಿಯನ್ನು ನೆಲಕ್ಕೆ ಉರುಳಿಸಿ, ತನ್ನ ದೇಹದ ಭಾರವನ್ನೆಲ್ಲಾ ಅದರ ಮೇಲೆ ಹಾಕಿದೆ. ಕೊನೆಗೆ ಕೋತಿ ಮರಿಯ ಬಾಯಲ್ಲಿದ್ದ ಆಹಾರವನ್ನು ಕಸಿದು ತಿಂದಿದೆ. ಆದರೆ ಈ ಪುಟಾಣಿ ಕೋತಿ ಮರಿ ಬಿಡಿಸಿಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದೆ ಸೋತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು

ಈ ವಿಡಿಯೋ ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ದೃಶ್ಯ ನೋಡಲು ಖುಷಿಯೆನಿಸಿದ್ರು ಹೊಟ್ಟೆ ತುಂಬಿಸಿಕೊಳ್ಳಲು ಇದು ದಿನನಿತ್ಯದ ಹೋರಾಟ ಎಂದು ಹೇಳಿದ್ದಾರೆ. ಇನ್ನೊಬ್ಬರು, ಹಸಿವು ಅಂದ್ರೆ ಹೀಗೇನೆ ಕಸಿದು ತಿನ್ನದೇ ಬೇರೆ ವಿಧಿಯಿಲ್ಲ ಎಂದಿದ್ದಾರೆ. ಮತ್ತೊಬ್ಬರು, ಪಾಪ ಈ ರೀತಿ ಮಾಡೋದು ಸರಿಯಲ್ಲ, ಮರಿ ಕೋತಿ ನೋಡಿ ಬೇಸರ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us