Video: ಬೆನ್ನು ತಟ್ಟಿ ಕಂದಮ್ಮನನ್ನು ಮಲಗಿಸಿದ ತಾಯಿ ಗೊರಿಲ್ಲಾ

ಮನುಷ್ಯರೇ ಆಗಿರಲಿ, ಪ್ರಾಣಿಗಳೇ ಆಗಿರಲಿ ತಾಯಿ ಪ್ರೀತಿ ಮಾತ್ರ ಬದಲಾಗಲ್ಲ. ಪ್ರಾಣಿಗಳು ತಮ್ಮ ಕಂದಮ್ಮನನ್ನು ಕಾಳಜಿ ವಹಿಸುವ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಇದೀಗ ಗೊರಿಲ್ಲಾವೊಂದು ತನ್ನ ತೋಳಿನಲ್ಲಿ ಮರಿಯನ್ನು ಮಲಗಿಸಿದ್ದು, ತಾಯಿ ಪ್ರೀತಿಯನ್ನು ಸಾರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Video: ಬೆನ್ನು ತಟ್ಟಿ ಕಂದಮ್ಮನನ್ನು ಮಲಗಿಸಿದ ತಾಯಿ ಗೊರಿಲ್ಲಾ
ವೈರಲ್‌ ವಿಡಿಯೋ
Image Credit source: Instagram

Updated on: Dec 10, 2025 | 4:00 PM

ತಾಯಿ (mother) ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳನ್ನು ಲಾಲನೆ ಪಾಲನೆ ಮಾಡುತ್ತಾ ಮಕ್ಕಳಿಗೆ ಸದಾ ನೆರಳಾಗಿರುವ ಜೀವವೇ ಈ ಅಮ್ಮ. ಈ ವಿಷ್ಯದಲ್ಲಿ ಪ್ರಾಣಿಗಳು ಹೊರತಾಗಿಲ್ಲ. ತನ್ನ ಕಂದಮ್ಮನ ಮೇಲೆ ವಿಶೇಷ ಕಾಳಜಿ ವಹಿಸುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ತಾಯಿ ಗೊರಿಲ್ಲಾ(Gorilla) ತನ್ನ ಕಂದಮ್ಮನ ಬೆನ್ನು ತಟ್ಟಿ ಮಲಗಿಸುವ ದೃಶ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.

javierbaldeolivar ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತಾಯಿ ಗೊರಿಲ್ಲಾ ತನ್ನ ಮರಿಯನ್ನು ತೋಳಿನಲ್ಲಿ ಬಿಗಿದಪ್ಪಿಕೊಂಡು ಮಲಗಿಸುತ್ತಿರುವುದನ್ನು ಕಾಣಬಹುದು. ತಾಯಿ ಮಗುವಿನ ಬಾಂಧವ್ಯ ಸಾರುವ ವಿಡಿಯೋ ಇದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಓಡ್ಬೇಡ ಕಂದಮ್ಮ, ಬಿದ್ದೋಗ್ತೀಯಾ; ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಓಡುತ್ತಿರುವ ಕಂದನನ್ನು ಬೀಳದಂತೆ ತಡೆದ ತಾಯಾನೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮನುಷ್ಯ ಆಗ್ಲಿ, ಪ್ರಾಣಿಗಳೇ ಆಗ್ಲಿ ತಾಯಿ ಪ್ರೀತಿ ಒಂದೇ ಎಂದು ಹೇಳಿದ್ದಾರೆ. ಇನ್ನೊಬ್ಬರು, ತಾಯಿ ಸ್ಥಾನವನ್ನು ಯಾರು ತುಂಬಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಾಯಿ ಯಾವತ್ತಿದ್ರೂ ತಾಯೀನೇ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ