AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ವರ್ಷಗಳಷ್ಟು ಹಳೆಯ ಬೇವಿನ ಮರ ಕಡಿಯದೇ ಮನೆ ನಿರ್ಮಿಸಿದ ಕುಟುಂಬ

ಹಿಂದೂ ಧರ್ಮದಲ್ಲಿ ಬೇವಿನ ಮರಕ್ಕೆ ವಿಶೇಷವಾದ ಸ್ಥಾನವಿದೆ. ಆದರೆ ಮನೆ ನಿರ್ಮಾಣದ ಕಾರ್ಯಕ್ಕೆ ಮರವು ಅಡ್ಡಿಯಾದಾಗ ಸಹಜವಾಗಿ ಆ ಮರವನ್ನು ಕಡಿಯುತ್ತಾರೆ. ಓಂಗೋಲ್ ಕುಟುಂಬವೊಂದು ಬೇವಿನ ಮರವನ್ನು ಕಡಿಯದೇ ಅದರ ಸುತ್ತಲೂ ಮೂರು ಅಂತಸ್ತಿನ ಮನೆ ನಿರ್ಮಿಸಿದೆ. ಈ ಮರವೇ ಮನೆಗೆ ನೆರಳಾಗಿದೆ, ಈ ಕುರಿತಾದ ಸ್ಟೋರಿ ಇಲ್ಲಿದೆ.

100 ವರ್ಷಗಳಷ್ಟು ಹಳೆಯ ಬೇವಿನ ಮರ ಕಡಿಯದೇ ಮನೆ ನಿರ್ಮಿಸಿದ ಕುಟುಂಬ
ಬೇವಿನ ಮರImage Credit source: Social Media
ಸಾಯಿನಂದಾ
|

Updated on:Dec 10, 2025 | 2:09 PM

Share

ಆಂಧ್ರ ಪ್ರದೇಶ, ಡಿಸೆಂಬರ್ 10: ಮನೆ ಕಟ್ಟುವಾಗ ಆ ಸ್ಥಳದಲ್ಲಿರುವ ಮರಗಿಡಗಳನ್ನು ಕಡಿದು, ಮನೆ ನಿರ್ಮಾಣದಂತಹ ಕೆಲಸಕ್ಕೆ ಕೈಹಾಕಲಾಗುತ್ತದೆ. ಆದರೆ ಈ ಕುಟುಂಬ ಮಾತ್ರ ಹಾಗೆ ಮಾಡಿಲ್ಲ. ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಓಂಗೋಲ್ (Ongole in Prakasam district) ನಗರದ ಕುಟುಂಬವೊಂದು ನೂರು ವರ್ಷಗಳಷ್ಟು ಹಳೆಯ ಬೇವಿನ ಮರವನ್ನು (neem tree) ಕಡಿಯದೇ ಅಲ್ಲೇ ಮೂರು ಅಂತಸ್ತಿನ ಮನೆ ನಿರ್ಮಿಸಿದೆ. ಈ  ಮರವನ್ನು ಅತ್ಯಂತ ಶ್ರದ್ಧ ಭಕ್ತಿಯಿಂದ ಪೂಜಿಸಲಾಗುತ್ತಿದೆ. ನಿರ್ಮಾಣದ ಹೆಸರಿನಲ್ಲಿ ಹಸಿರು ಮರಗಳನ್ನು ಕಡಿಯಲಾಗುತ್ತಿರುವ ಈ ಕಾಲಘಟ್ಟದಲ್ಲಿ ರಾಮಚಂದ್ರ ರಾವ್ ಕುಟುಂಬವು ಮಾಡುತ್ತಿರುವ ಕೆಲಸ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.

ರಾಮಚಂದ್ರ ರಾವ್, ತನ್ನ ತಂದೆಯಿಂದ ಆನುವಂಶಿಕವಾಗಿ ಪಡೆದ ಜಾಗದಲ್ಲಿ ಮನೆ ನಿರ್ಮಿಸಲು ಮುಂದಾದರು. ಆದರೆ, ಸ್ವಚ್ಛಂದವಾಗಿ ಹರಡಿ ಕೊಂಡಿದ್ದ ಮರವನ್ನು ಕಡಿಯಲು ಇಷ್ಟ ಪಡದೇ ಬುದ್ಧಿ ಉಪಯೋಗಿಸಿ ಮನೆ ನಿರ್ಮಾಣದತ್ತ ಕೈ ಹಾಕಿದರು. ಒಂಗೋಲ್‌ನ ಸಾಯಿಬಾಬು ಮಂದಿರದ ಎದುರಿನ ಜಮ್ಮಿಚೆಟ್ಟುವೀಧಿಯಲ್ಲಿ ಬೇವಿನ ಮರದಿಂದ ಸುತ್ತುವರಿದ ವಿಶಿಷ್ಟ ಮನೆಯನ್ನು ಕಾಣಬಹುದು.

Neem Tree

ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಮೀಸೆಯಿಂದಲೇ ಫೇಮಸ್ ಈ ರೆಡ್ಡಿಯ್ಯ; ಈ ವ್ಯಕ್ತಿಯ ಉದ್ದನೆಯ ಮೀಸೆ ಹಿಂದಿದೆ ಈ ಗುಟ್ಟು

ಬೇವಿನ ಮರವು ನೆಲ ಮಹಡಿಯಲ್ಲಿ ಪ್ರಾರಂಭವಾಗಿ ಮೂರನೇ ಮಹಡಿಯಲ್ಲಿ ಕೊನೆಗೊಂಡಿದೆ. ಈ ಬೇವಿನ ಮರದ ರೆಂಬೆ ಕೊಂಬೆಗಳು ಟೆರೇಸ್‌ ಮೇಲೆ ಹರಡಿಕೊಂಡಿದ್ದು ನೆರಳು ನೀಡುತ್ತಿದೆ. ನೆರಳಿಗಾಗಿ ಮಾತ್ರವಲ್ಲದೆ, ಕುಟುಂಬವು ಬೇವಿನ ಮರವನ್ನು ದೇವರೆಂದು ಪೂಜಿಸುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:07 pm, Wed, 10 December 25