New Born: ನೋಡು ಪುಟ್ಟಾ, ನೀನು ಈ ಜಗತ್ತಿಗೆ ಬಂದ ಮೇಲೆ ಯಾರ ಮೇಲೂ ಅವಲಂಬಿಸಬಾರದು. ನಿನ್ನ ಮನೋಬಲ ಮತ್ತು ತೋಳ್ಬಲದ ಮೇಲೆಯೇ ನೀನು ಬದುಕಿ ತೋರಿಸಬೇಕು. ನಿನ್ನನ್ನು ನಂಬು ನಿನ್ನ ಮನಸ್ಸನ್ನು ನಂಬು ನಿನ್ನ ಹೃದಯವನ್ನು ನಂಬು… ಈ ಕೂಸು ಹೊಟ್ಟೆಯಲ್ಲಿರುವಾಗ ಇದರ ತಾಯಿ ಇದಕ್ಕೆ ಹೀಗೆ ಉಪದೇಶ ಮಾಡಿದ್ದಳೋ ಏನೋ. ಅಥವಾ ಶಕ್ತಿಮಾನ್ (Shaktiman) ಛೋಟಾ ಭೀಮ್, ಕೃಷ್ಣಾ, ಸಿಂಘಮ್ ಕಾರ್ಟೂನ್ಗಳನ್ನು ನೋಡುತ್ತಿದ್ದಳೋ ಏನೋ. ಅಂತೂ ಇದು ಅಮ್ಮನ ಹೊಟ್ಟೆಯಿಂದ ಹೊರಬಂದು ಕಣ್ಬಿಡುವ, ಅಳುವ ಮೊದಲೇ ಸಾಹಸ ಪ್ರದರ್ಶನಕ್ಕೆ ಇಳಿದುಬಿಟ್ಟಿದೆ. ತನ್ನನ್ನು ಮಲಗಿಸಿದ್ದ ಟ್ರೇಯನ್ನೇ ಎತ್ತಿ ಹಿಡಿದುಕೊಂಡುಬಿಟ್ಟಿದೆ! ಆಹಾ ಕಲಿಯುಗದ ಕಂದಾ… ಇಡೀ ಜಗತ್ತು ನಿನ್ನ ಭವಿಷ್ಯದ ಕನಸು ಕಾಣುತ್ತಿದ್ದಾರೆ, ನಿನ್ನ ತೋಳ್ಬಲವನ್ನು ಕೊಂಡಾಡುತ್ತಿದ್ದಾರೆ. ನಡೀಲಿ ನಡೀಲಿ…
ಇದನ್ನೂ ಓದಿ : Viral Video: ಕಾವಾಲಾ ಕಾವು; ಉಗಾಂಡಾದ ಮಕ್ಕಳ ವಿಡಿಯೋ ಪೋಸ್ಟ್ ಮಾಡಿದ ಗಾಯಕಿ ಶಿಲ್ಪಾ ರಾವ್
5G Launch Baby ಎಂಬ ಶೀರ್ಷಿಕೆಯಡಿ ಈ ವಿಡಿಯೋ ಅನ್ನು ನಿನ್ನೆ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸದ್ಯ ಟ್ರೆಂಡಿಂಗ್ನಲ್ಲಿದೆ. ವಾಟ್ಯಾಪ್ನಲ್ಲಿಯೂ ಹರಿದಾಡುತ್ತಿದೆ. ಆದರೆ ಈ ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಲಾಗಿದೆ, ಮತ್ತು ಯಾವಾಗ ಎಂಬ ವಿವರಗಳು ತಿಳಿದುಬಂದಿಲ್ಲ. ಆದರೆ ಈ ವಿಡಿಯೋದಲ್ಲಿ ಕೇಳಿಬಂದಿರುವ ಧ್ವನಿಗಳ ಪ್ರಕಾರ ಈ ಮಗು ಉತ್ತರಭಾರತದಲ್ಲಿ ಜನಿಸಿದೆ ಎಂದು ಊಹಿಸಬಹುದು.
ತಾಯಿಯ ಗರ್ಭದಿಂದ ಹೊರಬರುವಾಗ ವೈದ್ಯರು ಮತ್ತು ನರ್ಸಗಳ ಬೆರಳನ್ನು ಹಿಡಿಯುವುದು, ವೈದ್ಯಕೀಯ ಉಪಕರಣಗಳನ್ನು ಹಿಡಿಯುವುದು, ಮತ್ತು ತನ್ನ ಬೆರಳನ್ನು ತಾನೇ ಚೀಪುವುದು… ಇಂಥ ವಿಡಿಯೋ, ಫೋಟೋಗಳನ್ನು ನೋಡಿದ್ದೀರಿ. ಆದರೆ ಹೀಗೆ ಲೋಹದ ಟ್ರೇಯನ್ನೇ ಇಷ್ಟೊತ್ತು ಹೊತ್ತು ಗಟ್ಟಿಯಾಗಿ ಹಿಡಿದ ಮಗುವನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಅಲ್ಲವೆ? ನೋಡಿ ಹಾಗಿದ್ದರೆ, ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ಈ ವಿಡಿಯೋ ಮುದ್ದಾಗಿದೆ.
ಇದನ್ನೂ ಓದಿ : Viral Video: ‘ಕಾನ್ಫಿಡೆನ್ಸ್ ಈಸ್ ಸೆಕ್ಸಿ’; ಮಾಡೆಲಿಂಗ್ ಕ್ಷೇತ್ರಕ್ಕೆ ಈಕೆ ಕಾಲಿಟ್ಟಾಗ ವಯಸ್ಸು 50!
ನೆಟ್ಟಿಗರಂತೂ ಈ ವಿಡಿಯೋ ಅನ್ನು ಭಾರೀ ಕುತೂಹಲದಿಂದ ನೋಡುತ್ತಿದ್ದಾರೆ. ಸಾಹಸಕ್ಷೇತ್ರದಲ್ಲಿ ಈ ಮಗು ಒಳ್ಳೆಯ ಹೆಸರನ್ನು ಮಾಡಲಿ ಎಂದು ಹಾರೈಸುತ್ತಿದ್ದಾರೆ. ಆದರೆ ಅದರ ತಾಯಿ-ತಂದೆ ಮತ್ತು ಮನೆಯವರು, ಅದು ಕಣ್ಣುಬಿಟ್ಟು ಒಮ್ಮೆ ಜೋರಾಗಿ ಅತ್ತುಬಿಡಲಿ, ಆ ಅಳುವನ್ನು ಕೇಳಿದರೆ ಸಾಕು ಎಂಬ ಕುತೂಹಲದಲ್ಲಿ ಹಂಬಲಿಸುತ್ತಿರಬಹುದು.
ಈ ವಿಡಿಯೋ ನೋಡಿದ ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:06 pm, Thu, 24 August 23