Uttar Pradesh : ರೀಲಿಗರ ಹುಚ್ಚಾಟಗಳಿಗೆ ಎಣೆಯೇ ಇಲ್ಲದಂತಾಗಿದೆ. ವಿನಾಕಾರಣ ತಮ್ಮನ್ನೂ ಮತ್ತಿತರರನ್ನೂ ಅಪಾಯಕ್ಕೆ ಒಡ್ಡಿಕೊಳ್ಳುವ ಇವರ ಆಟಗಳನ್ನು ನೋಡಿ ನೋಡಿ ನೆಟ್ಟಿಗರಂತೂ ಕೆಂಡಾಮಂಡಲವಾಗುತ್ತಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಪೊಲೀಸರ ಗಮನಕ್ಕೂ ತರುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವಕನೊಬ್ಬ ಪೆಟ್ರೋಲ್ ಬಂಕ್ನಲ್ಲಿ ತನ್ನ ಬೈಕ್ಗೆ ಸ್ವತಃ ಪೆಟ್ರೋಲ್ ತುಂಬಿಸಿಕೊಂಡದ್ದಲ್ಲದೇ ಬೈಕ್ ಅನ್ನು ಪೆಟ್ರೋಲ್ನಿಂದ ತೊಳೆದಿದ್ದಾನೆ. ಅವನ ಈ ಸಾಹಸಕ್ಕೆ ಅಮ್ರೋಹ್ (Amroha) ಪೊಲೀಸರು ಕಂಬಿಯ ಹಿಂದೆ ವಿಶೇಷ ಆತಿಥ್ಯವನ್ನು ನೀಡಿ ಸನ್ಮಾನಿಸುತ್ತಿದ್ದಾರೆ.
Reel के लिए इसने अपनी बाइक को पेट्रोल से नहला दिया। वहां बड़ा हादसा भी हो सकता था।@amrohapolice बढ़िया इलाज कीजिए। pic.twitter.com/IscuE16o9k
ಇದನ್ನೂ ಓದಿ— Sachin Gupta (@SachinGuptaUP) July 27, 2023
ಈ ಯುವಕ ನೀರಿನ ಪೈಪ್ನಂತೆ ಪೆಟ್ರೋಲ್ ಪೈಪ್ ಅನ್ನು ಬೈಕಿಗೆ ಹಿಡಿದು ತನ್ನ ಬೈಕನ್ನು ಸ್ಚಚ್ಛ ತೊಳೆದುಕೊಂಡಿದ್ದಾನೆ. ಈ ವಿಡಿಯೋ ಅನ್ನು ಸಚಿನ್ ಗುಪ್ತಾ ಎನ್ನುವವರು ಜು. 27ರಂದು ಟ್ವೀಟ್ ಮಾಡಿ ಅಮ್ರೋಹ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಪರಿಣಾಮವಾಗಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಈ ಯುವಕನ ಬೈಕ್ ಸಾಹಸದ ಇನ್ನೊಂದು ವಿಡಿಯೋ ಅನ್ನು ಸಚಿನ್ ಟ್ವೀಟ್ ಮಾಡಿದ್ದಾರೆ.
Hello @amrohapolice
इसी हवाबाज की एक और Video वायरल है। लगता है इसे पुलिस का खौफ नहीं बचा। pic.twitter.com/ROEXTLpHgy
— Sachin Gupta (@SachinGuptaUP) July 28, 2023
‘ಈ ಯುವಕನೊಂದಿಗೆ ಈ ಕೃತ್ಯವನ್ನು ವಿರೋಧಿಸದ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನೂ ಮತ್ತು ಇನ್ನೊಂದು ವಿಡಿಯೋದಲ್ಲಿ ಈ ಯುವಕನೊಂದಿಗೆ ಮಡ್ಗಾರ್ಡ್ ಮೇಲೆ ಕುಳಿತ ಸಹಚರನನ್ನು ಕೂಡ ಬಂಧಿಸಲಾಗಿದೆ. ಅಲ್ಲದೇ ಈತನ ಬೈಕ್ ಅನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಅಮ್ರೋಹ್ ಪೊಲೀಸರು ಇದೇ ಟ್ವೀಟಿನಡಿ ಸಾಕ್ಷಿ ಸಮೇತ ಟ್ವೀಟ್ ಮಾಡಿದ್ದಾರೆ.
— Amroha Police (@amrohapolice) July 28, 2023
ಪೆಟ್ರೋಲ್ ಮಾಲೀಕರು ಹೇಗೆ ಇವನಿಗೆ ಹೀಗೆಲ್ಲ ಮಾಡಲು ಅನುಮತಿ ಕೊಟ್ಟಿದ್ದಾರೆ? ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಗಮನ ಸೆಳೆಯಲು ಇಂಥವರು ಏನನ್ನೂ ಮಾಡಲು ತಯಾರು. ಜೈಲಿಗೆ ಹೋಗಿ ಬಂದರೂ ಇವರಿಗೆ ಅವಮಾನ ಎನ್ನುವುದೇ ಇರುವುದಿಲ್ಲ ಅಂತೆಲ್ಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:43 am, Tue, 1 August 23