ಅಯ್ಯೋ ಕಾಗೆಯನ್ನು ಮುಟ್ಟಿದರೆ ಅಪಶಕುನ ಎನ್ನುವವರು ನಮ್ಮ ಸುತ್ತಮುತ್ತಲೇ ಸಾಕಷ್ಟು ಜನರಿದ್ದಾರೆ. ಆದರೆ ಮಕ್ಕಳು ಮನಸ್ಸು ನಿಷ್ಕಲ್ಮಶ, ಅದರಲ್ಲಿ ಯಾವುದೇ ಅಸೂಯೆ , ಕ್ರೂರತನವಿರುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನವೆಂಬಂತೆ ಇಲ್ಲೊಬ್ಬ ಪುಟ್ಟ ಹುಡುಗ ಶಾಲೆಯ ಕ್ರೀಡಾ ಆವರಣದ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಗೆಯನ್ನು ಬಲೆಯಿಂದ ಬಿಡಿಸಿ ಹಾರಲು ಬಿಟ್ಟಿದ್ದಾನೆ. ಕಾಗೆಯನ್ನು ಬಲೆಯಿಂದ ಸಾಕಷ್ಟು ಕಷ್ಟ ಪಡುತ್ತಿರುವುದನ್ನು ಜೊತೆಗೆ ಆತನ ಸಹಪಾಠಿ ನಿಂತು ನೋಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗಾ ಟ್ವಿಟರ್‌ನಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಸಬಿತಾ ಚಂದಾ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಶೀರ್ಷಿಕೆಯಲ್ಲಿ, “ಕರುಣಾಮಯಿ ಹೃದಯವು ಅಸಂಖ್ಯಾತ ಜೀವನವನ್ನು ಸ್ಪರ್ಶಿಸುತ್ತದೆ” ಎಂದು ಬರೆದಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.
A compassionate heart touches countless lives.❤️? pic.twitter.com/93XKNckU0n
— Sabita Chanda (@itsmesabita) March 1, 2023
ಇದನ್ನು ಓದಿ: ಈ ಶ್ವಾನದ ದೇಶಪ್ರೇಮ ನೋಡಿ, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ
ಶಾಲಾ ಸಮವಸ್ತ್ರವನ್ನು ಧರಿಸಿರುವ ಹುಡುಗ ಕಾಗೆಯನ್ನು ನೆಟ್‌ನಿಂದ ಬಿಡಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಹುಡುಗ ನಿಧಾನವಾಗಿ ಹಕ್ಕಿಯನ್ನು ಬಿಡುಗಡೆ ಮಾಡಿ ತನ್ನ ಅಂಗೈಗಳಲ್ಲಿ ಹಿಡಿಯುತ್ತಾನೆ. ಅವನ ಸ್ನೇಹಿತರು ಅವನನ್ನು ಸುತ್ತುವರಿದಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಎರಡು ದಿನಗಳ ಹಿಂದೆ ಶೇರ್ ಮಾಡಲಾಗಿತ್ತು. ಪೋಸ್ಟ್ ಮಾಡಿದ ನಂತರ, ಇದು 2,000 ಕ್ಕೂ ಹೆಚ್ಚು ಬಾರಿ ಲೈಕ್ ಪಡೆದುಕೊಂಡಿದೆ. ಜೊತೆಗೆ 88 ಸಾವಿರ ವೀಕ್ಷಣೆ ಪಡೆದುಕೊಂಡಿದೆ. ಈ ಪುಟ್ಟ ಬಾಲಕನಿಗೆ ಸದಾ ದೇವರ ಆರ್ಶೀವಾದ ಇರಲಿ ಎಂದು ಸಾಕಷ್ಟು ಬಳಕೆದಾರರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:28 pm, Fri, 3 March 23