Viral Video: ಧೈರ್ಯಂ ಸರ್ವತ್ರ ಸಾಧನಂ, ದೈವದ ಮುಂದೆ ಈ ಪುಟ್ಟ ಬಾಲಕನ ಧೈರ್ಯಕ್ಕೆ ಮೆಚ್ಚಲೇಬೇಕು
ದೈವ ತನ್ನ ಮುಂದೆ ಮುಂದೆ ಬಂದರು ಭಯ ಪಡದೆ, ಆ ಸ್ಥಳದಿಂದ ಕದಲದೆ ಅಲ್ಲೇ ನಿಂತಿದ್ದ ಬಾಲಕವೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಟ್ಟ ಬಾಲಕನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೈವ ತನ್ನ ಮುಂದೆ ಮುಂದೆ ಬಂದರು ಭಯ ಪಡದೆ, ಆ ಸ್ಥಳದಿಂದ ಕದಲದೆ ಅಲ್ಲೇ ನಿಂತಿದ್ದ ಬಾಲಕವೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಟ್ಟ ಬಾಲಕನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇರಳದ ಭಾಗದಲ್ಲಿ ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಮಕ್ಕಳು ಹೆಚ್ಚಿನ ವಿಷಯಗಳಿಗೆ ಭಯ ಪಡುತ್ತಾರೆ. ಮತ್ತು ಜಾತ್ರೆಗಳಲ್ಲಿ ಬಣ್ಣ ಬಣ್ಣದ ವೇಷ ಹಾಕಿ ಓಡಾಡುತ್ತಿರುತ್ತಾರೆ. ಅವರನ್ನು ಕಂಡರಂತು ಕೆಲವು ಮಕ್ಕಳು ಅಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಧೈರ್ಯ ಸ್ವಲ್ಪ ಕಮ್ಮಿ. ಎರಡು ಪದ ಜೋರಾಗಿ ಮಾತನಾಡಿದರೆ ಸಾಕು ಮಕ್ಕಳು ಸುಮ್ಮನಾಗಿ ಬಿಡುತ್ತಾರೆ. ಕೆಲವೊಂದು ಚೂಟಿ ಮತ್ತು ಚುರುಕಾಗಿರುವ ಮಕ್ಕಳು ಭಯ ಪಡುವುದು ಸ್ವಲ್ಪ ಕಮ್ಮಿ. ಯಾರಾದರೂ ಅವರಿಗೆ ಜೋರು ಮಾಡಿದರೆ, ಜೋರು ಮಾಡಿದವರಿಗೆನೆ ಆ ಮಕ್ಕಳು ತಿರುಗಿಸಿ ಬೈದು ಬಿಡುತ್ತವೆ. ಇನ್ನೂ ದೈವ ಮತ್ತು ದೇವರುಗಳ ವಿಷಯಗಳಿಗೆ ಬಂದಾಗ ನಾವೆಲ್ಲರೂ ಭಯ ಭಕ್ತಿಯಿಂದ ತಲೆ ಬಾಗುತ್ತೇವೆ. ಮಕ್ಕಳಿಗೂ ಕೂಡಾ ಅದೇ ಸಂಸ್ಕಾರ ಇರುತ್ತವೆ.
ಧೈರ್ಯಂ ಸರ್ವತ್ರ ಸಾಧನಂ ಎಂಬ ಮಾತಿಗೆ ಹೇಳಿ ಮಾಡಿಸಿದಂತಹ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಒಬ್ಬ ಪುಟ್ಟ ಬಾಲಕ ದೈವವನ್ನು ನೋಡುತ್ತಾ ನಿಂತಿರುತ್ತಾನೆ. ಅಲ್ಲಿ ನಿಂತಿದ್ದ ಬಾಲಕನನ್ನು ಕಂಡು ಅವನ ಬಳಿಗೆ ಬರುತ್ತದೆ. ಆದರೆ ಬಾಲಕ ಸ್ವಲ್ಪ ಕೂಡ ಭಯ ಪಡಲಿಲ್ಲ ಅದರ ಜೊತೆಗೆ ತಾನು ನಿಂತ ಸ್ಥಳದಿಂದ ಸ್ಪಲ್ಪ ಕೂಡಾ ಅಲ್ಲಡಲಿಲ್ಲ.
View this post on Instagram
ಇದನ್ನೂ ಓದಿ: Viral Video: ಸರ್ ನನಗೆ ರಜಾ ಬೇಕಂದ್ರೆ ಬೇಕಷ್ಟೆ, ಈ ಮಾಡರ್ನ್ ಲೀವ್ ಲೆಟರ್ ನೋಡಿದ್ರೆ ಖಂಡಿತ ನಗ್ತೀರಿ
ಈ ಬಾಲಕ ಧೈರ್ಯ ಮತ್ತು ಭಕ್ತಿಯಿಂದ ಆ ದೈವವನ್ನೇ ನೋಡುತ್ತಾ ನಿಂತಿರುವುದನ್ನು ತೋರಿಸುತ್ತದೆ. ಬಾಲಕನ ಧೈರ್ಯಕ್ಕೆ ಸಾಮಾಜಿಕ ಜಾಲತಾನದಲ್ಲಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇನ್ಟಾಗ್ರಾಮ್‌ನ ಪೇಜ್ ಒಂದರಲ್ಲಿ ಹಂಚಿಕೊಂಡಿರುವ ಈ ವಿಡಿಯೊ 80 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಯನ್ನು ಪಡೆದು ಹೆಚ್ಚಿನ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ.
Published On - 1:52 pm, Sat, 4 March 23




