ವಿಶೇಷವಾಗಿ ಹೆಂಗಳೆಯರಿಗೆ ಸೀರಿಯಲ್ ಎಂದರೆ ಅಚ್ಚುಮೆಚ್ಚು. ಧಾರಾವಾಗಿ ನೋಡಲು ಕೂತರೆ ಪ್ರಪಂಚವೇ ಮುಳುಗಿ ಹೋದರೂ ಅವರಿಗೆ ಗೊತ್ತಾಗುವುದಿಲ್ಲ. ಅಷ್ಟು ಇಷ್ಟಪಟ್ಟು ಮಹಿಳೆಯರು ತಮ್ಮ ನೆಚ್ಚಿನ ಸೀರಿಯಲ್‌ಗಳನ್ನು ನೋಡುತ್ತಾರೆ. ಆದರೆ ಇಲ್ಲೊಂದು ಸ್ವಾರಸ್ಯಕರ ಘಟನೆ ನಡೆದಿದ್ದು, ಮನೆಯೊಳಗೆ ಬಂದ ಹಾವೊಂದು ಎಡೆ ಎತ್ತಿ ಕುಳಿತು ಸತತ ಎರಡು ಗಂಟೆಗಳ ಕಾಲ ಒಂದು ಚೂರು ಅಲ್ಲಾಡದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್‌ಗಳನ್ನು ಕುತೂಹಲದಿಂದ ವೀಕ್ಷಿಸಿದೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಬಹುಶಃ ಇದು ಹೆಣ್ಣು ಹಾವು ಇರಬೇಕು, ಹಾಗಾಗಿ ಸೀರಿಯಲ್ ನೋಡುತ್ತಾ ಕುಳಿತಿದೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಸ್ನೇಕ್ ಶಿವು (snakeshivu) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಜೀ ಟಿವಿ ಅಭಿಮಾನಿ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಮನೆಯೊಳಗೆ ನುಗ್ಗಿದ ಹಾವೊಂದು ಎಡೆ ಎತ್ತಿ ಕುಳಿತು ಸೀರಿಯಲ್ ವೀಕ್ಷಿಸುತ್ತಿರುವ ದೃಶ್ಯವನ್ನು ಕಾಣಬಹುದು. ಮನೆ ಯಜಮಾನಿ ಸ್ನೇಕ್ ಶಿವು ಅವರ ಬಳಿ ಬರೋಬ್ಬರಿ ಒಂದುವರೆ ಗಂಟೆಯಿಂದ ಒಂದು ಚೂರು ಅಲ್ಲಾಡದೆ ಟಿವಿ ನೋಡುತ್ತಾ ಕುಳಿತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ರೀಲ್ಸ್ಗಾಗಿ ಧಮ್ ಹೊಡೆದ ಹುಡ್ಗಿ, ಮನೆಯಲ್ಲಿ ಬೆಲ್ಟ್ ಏಟು: ವಿಡಿಯೋ ನೋಡಿ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಬಹುಶಃ ನಾಗಿಣಿ ಸೀರಿಯಲ್‌ಗೆ ಆಡಿಷನ್ ಕೊಡಲು ಬಂದಿರಬೇಕು ಎಂದು ನೋಡುಗರು ತಮಾಷೆಯ ಕಾಮೆಂಟ್ಸ್‌ಗಳನ್ನು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ