Viral Video: ಚುಂಬನವೃತ್ತಾಂತ; ಆಕೆ ಕೊಟ್ಟಿದ್ದನ್ನು ಆಕೆಗೇ ಮರಳಿಸಿತು ಹಾವು, ಮುಂದೆ?

Snake : ಹಾವಿನ ಬಗ್ಗೆ ಕುತೂಹಲ ಮೂಡಿತೋ ಸರಿ, ನೋಡಿ ಸುಮ್ಮನೆ ಇರಬೇಕಿತ್ತಲ್ಲವೆ, ಹೀಗೇಕೆ ಮಾಡಿದಳು? ಪ್ರಾಣಿಪ್ರೇಮ ಅತಿಯಾದರೆ ಏನಾಗುತ್ತದೆ ನೋಡಿ ಎಂದು ಈ ವಿಡಿಯೋ ನೋಡಿದ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Viral Video: ಚುಂಬನವೃತ್ತಾಂತ; ಆಕೆ ಕೊಟ್ಟಿದ್ದನ್ನು ಆಕೆಗೇ ಮರಳಿಸಿತು ಹಾವು, ಮುಂದೆ?
ಹಾವಿಗೆ ಮುತ್ತಿಡಲು ಹೋದ ಯುವತಿಗೆ ಹಾವು ವಾಪಾಸು ಕಚ್ಚಿದಾಗ

Updated on: Aug 04, 2023 | 6:29 PM

Kissing : ಪ್ರವಾಸಕ್ಕೆ ಹೋದ ಯುವತಿಯೊಬ್ಬಳಿಗೆ ಅಲ್ಲಿ ನೋಡಿದ ಹಾವಿನ ಬಗ್ಗೆ ಕುತೂಹಲ ಹುಟ್ಟಿದೆ. ಹಾವಿನ ಪೋಷಕ ಆಕೆಯ ತುಟಿಯ ಬಳಿ ಹಾವನ್ನು (Snake) ತೆಗೆದುಕೊಂಡು ಹೋಗಿದ್ದಾನೆ. ಆಕೆ ಅದನ್ನು ಚುಂಬಿಸುತ್ತಿದ್ದಂತೆ ಅದು ವಾಪಾಸ್ ಆಕೆಯ ತುಟಿಯನ್ನು ಚುಂಬಿಸಿಬಿಟ್ಟಿದೆ! ಆಕೆ ಚಿಟ್ಟನೇ ಚೀರಿದ್ದಾಳೆ. ಅಲ್ಲಿಗೆ ಈ ವಿಡಿಯೋ ಮುಕ್ತಾಯಗೊಂಡಿದೆ. ಇದು ಹಳೆಯ ವಿಡಿಯೋ. ಮತ್ತೀಗ ವೈರಲ್ ಆಗಿದೆ. ಪ್ರಾಣಿಪ್ರೇಮ ಕೆಲವರಲ್ಲಿ ಅತಿಯಾಗಿರುತ್ತದೆ. ಆದರೆ ಜೀವಕ್ಕೆ ಅಪಾಯ ತಂದುಕೊಳ್ಳುವಷ್ಟರ ಮಟ್ಟಿಗೆ ಸಲ್ಲದು ಅಲ್ಲವೆ? ನೋಡಿ ಆ ವಿಡಿಯೋ.

ಹಾವಿಗೆ ಚುಂಬಿಸಿದ ಮತ್ತು ಚುಂಬಿಸಲು ಪ್ರಯತ್ನಿಸಿದ ಅನೇಕರ ವಿಡಿಯೋಗಳನ್ನು ಈಗಾಗಲೇ ನೋಡಿದ್ದೀರಿ. ಕೆಲವರು ಇದರಲ್ಲಿ ಯಶಸ್ವಿಯಾಗಿದ್ದಾರೆ ಇನ್ನೂ ಕೆಲವರಿಗೆ ಈ ಯುವತಿಗಾದ ಗತಿಯಾಗಿದೆ. ಆದರೆ ಅವರೆಲ್ಲರಲ್ಲಿ ಹೆಚ್ಚಿನಪಾಲು ಜನರು ವೃತ್ತಿಪರ ಹಾವು ಹಿಡಿಯುವವರು. ಆದರೆ ಈಕೆ ಪ್ರವಾಸಕ್ಕೆಂದು ಹೋದಾಕೆ. ಈಕೆ ಪ್ರಾಣಾಪಾಯದಿಂದ ಪಾರಾಗಿದ್ದರೆ ಹಾವು ಎನ್ನುವುದು ಈಕೆಗೆ ಜನ್ಮಪೂರ್ತಿ ದುಃಸ್ವಪ್ನವೇ!

ಇದನ್ನೂ ಓದಿ :Viral Video: ‘ಭಾರತವನ್ನು ತೊರೆಯುವ ಕನಸು’; ಟ್ರೋಲ್​ಗೆ ಒಳಗಾದ ವಿದ್ಯಾರ್ಥಿನಿಗೆ ಟ್ರ್ಯೂಕಾಲರ್ ಸಿಇಒ ಉದ್ಯೋಗ ಭರವಸೆ

I ಈ ವಿಡಿಯೋ ಅನ್ನು ಈತನಕ ಸುಮಾರು 13 ಲಕ್ಷ ಜನರು ನೋಡಿದ್ದಾರೆ. 12.6 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನನಗೆ ಪ್ರಾಣಿಗಳೆಂದರೆ ಇಷ್ಟ. ಆದರೆ ವನ್ಯಜೀವಿಗಳನ್ನು ನಾನು ಎಂದೂ ನಂಬುವುದಿಲ್ಲ ಎಂದಿದ್ದಾರೆ ಒಬ್ಬರು. ನನ್ನ ಬಳಿ ಇರುವ ಹಾವಿಗೆ ಚುಂಬಿಸಿ ಅದು ವಾಪಾಸು ಕಚ್ಚುವುದಿಲ್ಲ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಚಲಿಸುವ ಜೀಪಿನ ಬಾನೆಟ್ ಮೇಲೆ ಕುಳಿತ ಯುವತಿ ಹೋಷಿಯಾರಪುರದ ಪೊಲೀಸರ ಅತಿಥಿ

ಈಕೆ ಹತ್ತಿರ ಹೋಗಿ ದೊಡ್ಡ ತಪ್ಪು ಮಾಡಿದಳು. ಹತ್ತಿರ ಹೋಗಲಿ ಆದರೆ ಮುತ್ತನ್ನು ಕೊಡುವ ಹುಚ್ಚುತನಕ್ಕೆ ಏಕೆ ಹೋಗಬೇಕಿತ್ತು? ಎಂದು ಕೇಳಿದ್ದಾರೆ ಮತ್ತೊಬ್ಬರು. ಪ್ರಾಣಿಗಳ ಬಗ್ಗೆ ಎಷ್ಟೇ ಪ್ರೀತಿ ಇರಲಿ ನಮ್ಮ ಹುಷಾರಿನಲ್ಲಿ ನಾವಿರುವುದು ಒಳ್ಳೆಯದು.

ಏನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:27 pm, Fri, 4 August 23