Viral Video: ಹೆಬ್ಬಾವು ಆಕಳಿಸುವುದನ್ನು ನೋಡಿದ್ದೀರಾ? ವಿಡಿಯೋ ಇಲ್ಲಿದೆ ನೋಡಿ

ನೀವು ಹೆಬ್ಬಾವು ಆಕಳಿಸುವುದನ್ನು ನೋಡಿದ್ದೀರಾ? ಇದೀಗ ವಿಡಿಯೋವೊಂದು ವೈರಲ್​​ ಆಗಿದ್ದು, ಇದರಲ್ಲಿ ಹೆಬ್ಬಾವು ಆಕಳಿಸುತ್ತಿರುವುದು ಸೆರೆಯಾಗಿದೆ. ಹೆಬ್ಬಾವು ಹೇಗೆ ಆಕಳಿಸುತ್ತದೆ ಎಂಬುದನ್ನು ಇದರಲ್ಲಿ ನೋಡಬಹುದು. ವಿಡಿಯೋ ಇಲ್ಲಿದೆ ನೋಡಿ.

Viral Video: ಹೆಬ್ಬಾವು ಆಕಳಿಸುವುದನ್ನು ನೋಡಿದ್ದೀರಾ? ವಿಡಿಯೋ ಇಲ್ಲಿದೆ ನೋಡಿ
Snake Yawn
Follow us
ಅಕ್ಷತಾ ವರ್ಕಾಡಿ
|

Updated on: Aug 20, 2024 | 5:22 PM

ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಅವು ಇತರ ಜೀವಿಗಳನ್ನು ಬೇಟೆಯಾಡುವ, ಮುಂಗುಸಿ, ಗಿಡುಗಗಳ ಜೊತೆ ಕಾದಾಡುವ ವೀಡಿಯೋಗಳನ್ನು ಆಗಾಗ ಅಂತರ್ಜಾಲದಲ್ಲಿ ನೋಡುತ್ತಿರುತ್ತೇವೆ. ಇದೀಗಾ ಹೆಬ್ಬಾವೊಂದರ ಅಪರೂಪದ ವಿಡಿಯೋವೊಂದು ಎಲ್ಲೆಡೆ ಭಾರೀ ವೈರಲ್​​ ಆಗಿದೆ.

ನೀವು ಹೆಬ್ಬಾವು ಆಕಳಿಸುವುದನ್ನು ನೋಡಿದ್ದೀರಾ? ಇದೀಗ ವಿಡಿಯೋವೊಂದು ವೈರಲ್​​ ಆಗಿದ್ದು, ಇದರಲ್ಲಿ ಹೆಬ್ಬಾವು ಆಕಳಿಸುತ್ತಿರುವುದು ಸೆರೆಯಾಗಿದೆ. ಹೆಬ್ಬಾವು ಹೇಗೆ ಆಕಳಿಸುತ್ತದೆ ಎಂಬುದನ್ನು ಇದರಲ್ಲಿ ನೋಡಬಹುದು. ವೈರಲ್​​ ಆಗಿರುವ ವಿಡಿಯೋದಲ್ಲಿ ಹಾವು ನಿಧಾನವಾಗಿ ಬಾಯಿ ತೆರೆದು ಮನುಷ್ಯನಂತೆ ಆಕಳಿಸುವುದು ಸೆರೆಯಾಗಿದೆ. ಹಾವುಗಳಂತಹ ಜೀವಿಗಳು ಕೂಡ ಆಕಳಿಸುತ್ತವೆಯೇ ಎಂದು ಅನೇಕ ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿ

@AMAZlNGNATURE ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಆಗಸ್ಟ್​​​ 17 ಹಂಚಿಕೊಂಡಿರುವ ವಿಡಿಯೋ ಕೇವಲ ಮೂರು ದಿನದಲ್ಲಿ 15.3 ಮಿಲಿಯನ್​​ ಅಂದರೆ ಒಂದು ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ