AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಸೂಪರ್ ಮಾರ್ಕೆಟ್​​ನಲ್ಲಿ ಅಂಡರ್ ವೇರ್ ಕಳಚಿ, ಫುಡ್ ಟ್ರೇಗೆ ಎಸೆದ ಮಹಿಳೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನೋಡುಗರನ್ನು ಮುಜುಗರಕ್ಕೆ ತಳ್ಳುತ್ತವೆ ಜೊತೆಗೆ ನೆಟ್ಟಿಗರ ಕೋಪಕ್ಕೂ ಗುರಿಯಾಗುತ್ತವೆ. ಇದೀಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಬ್ರಿಟೀಷ್ ಮಾಡೆಲ್ ಒಬ್ಬಳು ಸೂಪರ್ ಮಾರ್ಕೆಟ್ ಒಂದರಲ್ಲಿ ತನ್ನ ಒಳ ಉಡುಪನ್ನು ಕಳಚಿ, ಬಳಿಕ ಅದನ್ನು ಫುಡ್ ಟ್ರೇ ನಲ್ಲಿ ಬಚ್ಚಿಟ್ಟಿದ್ದಾಳೆ. ಈ ದೃಶ್ಯವನ್ನು ಕಂಡು ಆಕೆ ತಿನ್ನೋ ಆಹಾರಕ್ಕೆ ಅವಮಾನ ಮಾಡಿದ್ದಾಳೆ ಎಂದು ಆಕೆಯ ವಿರುದ್ಧ ನೆಟ್ಟಿಗರಂತೂ ಫುಲ್ ಗರಂ ಆಗಿದ್ದಾರೆ.

Video : ಸೂಪರ್ ಮಾರ್ಕೆಟ್​​ನಲ್ಲಿ ಅಂಡರ್ ವೇರ್ ಕಳಚಿ, ಫುಡ್ ಟ್ರೇಗೆ ಎಸೆದ ಮಹಿಳೆ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Aug 20, 2024 | 5:53 PM

Share

ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ರೀಲ್ಸ್‌ ಹುಚ್ಚಿಗೆ ಬಿದ್ದು ಯುವಜನತೆ ಚಿತ್ರ ವಿಚಿತ್ರ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಲೈಕ್ಸ್, ವೀವ್ಸ್, ಫಾಲೋವರ್ಸ್ ಗಾಗಿ ಹುಚ್ಚು ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಇಂತಹ ವಿಡಿಯೋಗಳು ವೈರಲ್ ಆಗುವುದು ಮಾತ್ರವಲ್ಲದೆ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗುತ್ತವೆ. ಇದೀಗ ಇಲ್ಲೊಬ್ಬ ಬ್ರಿಟೀಷ್ ಮಾಡೆಲ್ ಕೂಡಾ ಇದೇ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಆಕೆ ಸೂಪರ್ ಮಾರ್ಕೆಟ್ ಒಂದರಲ್ಲಿ ತಾನು ಧರಿಸಿದ್ದ ಅಂಡರ್ ವೇರ್ ಕಳಚಿ ಅದನ್ನು ಅಲ್ಲಿದ್ದ ಫುಡ್ ಟ್ರೇಯಲ್ಲಿ ಬಚ್ಚಿಡುವ ವಿಡಿಯೋವೊಂದನ್ನು ಮಾಡಿದ್ದಾಳೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಆಕೆ ತಿನ್ನೋ ಆಹಾರಕ್ಕೆ ಅವಮಾನ ಮಾಡಿದ್ದಾಳೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಬ್ರಿಟಿಷ್ ಮಾಡೆಲ್ ಹಾಗೂ ಇನ್ಫ್ಯೂಯೆನ್ಸರ್ ಆಗಿರುವ ಕ್ಲೋಯ್ ಲೋಪೆಜ್ ಎಂಬಾಕೆ ಇತ್ತೀಚಿಗೆ ಸ್ಪೇನ್‌ನ ಮರ್ಕಡೋನಾ ಸೂಪರ್‌ಮಾರ್ಕೆಟ್‌ನಲ್ಲಿ ತಾನು ಧರಿಸಿದ್ದ ಅಂಡರ್ ವೇರ್ ಬಿಚ್ಚಿ ಅದನ್ನು ಫುಡ್ ಟ್ರೇ ನಲ್ಲಿ ಬಚ್ಚಿಡುವ ಒಂದು ವಿಡಿಯೋವನ್ನು ಮಾಡಿದ್ದಾಳೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು ಸ್ವತಃ ಮಾಡೆಲ್ (chloejadelopez) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ವೈರಲ್ ವಿಡಿಯೋದಲ್ಲಿ ಸಣ್ಣ ಸ್ಕರ್ಟ್ ಮತ್ತು ಟಾಪ್ ಧರಿಸಿ ಸೂಪರ್ ಮಾರ್ಕೆಟ್ ಗೆ ಎಂಟ್ರಿ ಕೊಟ್ಟ ಈ ಮಾಡೆಲ್ ಅಲ್ಲೇ ತಾನು ಧರಿಸಿದ್ದ ಅಂಡರ್ ವೇರ್ ಕಳಚಿ, ಆ ಒಳ ಉಡುಪನ್ನು ಬ್ರೆಡ್ ಗಳ ರಾಶಿಯಿದ್ದ ಫುಡ್ ಟ್ರೇ ನಲ್ಲಿ ಬಚ್ಚಿಡುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕರೆಂಟ್ ಇಲ್ಲದೆ ಜನರೇಟರ್ ಮೂಲಕ ಮೊಬೈಲ್ ಚಾರ್ಜ್ ಮಾಡಿದ ಜನರು

ಆಗಸ್ಟ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ತಮಾಷೆಯ ವಿಷಯವಲ್ಲ, ತಿನ್ನೋ ಆಹಾರಕ್ಕೆ ಗೌರವ ಕೊಡುವುದನ್ನು ಕಲಿಯಿರಿ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇಂತಹ ಹೀನ ಕೃತ್ಯ ಮಾಡಿದ್ದಕ್ಕಾಗಿ ಆಕೆ ಯಾಕೆ ಇನ್ನೂ ಜೈಲಿಗೆ ಹೋಗಿಲ್ಲ’ ಎಂದು ಕೇಳಿದ್ದಾರೆ. ಇನ್ನೂ ಅನೇಕರು ಆಕೆ ಆಹಾರಕ್ಕೆ ಅಗೌರವಕ್ಕೆ ತೋರಿದ್ದಾಳೆ ಎಂದು ಕಿಡಿಕಾರಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?