ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಅವು ಇತರ ಜೀವಿಗಳನ್ನು ಬೇಟೆಯಾಡುವ, ಮುಂಗುಸಿ, ಗಿಡುಗಗಳ ಜೊತೆ ಕಾದಾಡುವ ವೀಡಿಯೋಗಳನ್ನು ಆಗಾಗ ಅಂತರ್ಜಾಲದಲ್ಲಿ ನೋಡುತ್ತಿರುತ್ತೇವೆ. ಇದೀಗಾ ಹೆಬ್ಬಾವೊಂದರ ಅಪರೂಪದ ವಿಡಿಯೋವೊಂದು ಎಲ್ಲೆಡೆ ಭಾರೀ ವೈರಲ್ ಆಗಿದೆ.
ನೀವು ಹೆಬ್ಬಾವು ಆಕಳಿಸುವುದನ್ನು ನೋಡಿದ್ದೀರಾ? ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಹೆಬ್ಬಾವು ಆಕಳಿಸುತ್ತಿರುವುದು ಸೆರೆಯಾಗಿದೆ. ಹೆಬ್ಬಾವು ಹೇಗೆ ಆಕಳಿಸುತ್ತದೆ ಎಂಬುದನ್ನು ಇದರಲ್ಲಿ ನೋಡಬಹುದು. ವೈರಲ್ ಆಗಿರುವ ವಿಡಿಯೋದಲ್ಲಿ ಹಾವು ನಿಧಾನವಾಗಿ ಬಾಯಿ ತೆರೆದು ಮನುಷ್ಯನಂತೆ ಆಕಳಿಸುವುದು ಸೆರೆಯಾಗಿದೆ. ಹಾವುಗಳಂತಹ ಜೀವಿಗಳು ಕೂಡ ಆಕಳಿಸುತ್ತವೆಯೇ ಎಂದು ಅನೇಕ ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ.
‘Yawn’ of a snake pic.twitter.com/3IRCpRxIWx
— Nature is Amazing ☘️ (@AMAZlNGNATURE) August 17, 2024
ಇದನ್ನೂ ಓದಿ: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿ
@AMAZlNGNATURE ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಆಗಸ್ಟ್ 17 ಹಂಚಿಕೊಂಡಿರುವ ವಿಡಿಯೋ ಕೇವಲ ಮೂರು ದಿನದಲ್ಲಿ 15.3 ಮಿಲಿಯನ್ ಅಂದರೆ ಒಂದು ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ