Viral Video: ಭಕ್ತಕಳ್ಳ; ಹನುಮಾನ್ ಚಾಲೀಸಾ ಪಠಿಸಿ ಕಾಣಿಕೆ ಡಬ್ಬಿಯಿಂದ ರೂ. 5,000 ಕದ್ದ ಕಳ್ಳ

|

Updated on: Jul 12, 2023 | 10:51 AM

Thief : 64 ಕಲೆಗಳಲ್ಲಿ ಚೋರವೃತ್ತಿಯೂ ಒಂದು. ಕಳ್ಳನೂ ಮನುಷ್ಯನೇ. ಹಿಡಿದ ಕೆಲಸ ಪೂರ್ಣಗೊಳ್ಳಲು ದೇವರ ಮೊರೆ ಹೋಗಿದ್ದಾನೆ ಎಂದು ಸುಮ್ಮನಿರುತ್ತೀರೋ ಅಥವಾ ಇವನಿಗೆ ಶಿಕ್ಷೆಯಾಗಲೇಬೇಕು ಎನ್ನುತ್ತೀರೋ?

Viral Video: ಭಕ್ತಕಳ್ಳ; ಹನುಮಾನ್ ಚಾಲೀಸಾ ಪಠಿಸಿ ಕಾಣಿಕೆ ಡಬ್ಬಿಯಿಂದ ರೂ. 5,000 ಕದ್ದ ಕಳ್ಳ
ಹರಿಯಾಣಾದ ಹಳ್ಳಿಯೊಂದರಲ್ಲಿ ಹನುಮಂತ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿರುವ ಕಳ್ಳ.
Follow us on

Haryana : ಈ ಘಟನೆ ಹರಿಯಾಣದ ರೇವಾರಿ (Rewari) ಜಿಲ್ಲೆಯ ಧರುಹೇರಾದ ಹನುಮಂತನ ದೇವಸ್ಥಾನವೊಂದರಲ್ಲಿ ನಡೆದಿದೆ. ಈ ಕಳ್ಳ ಹನುಮಂತನ ಮೂರ್ತಿಯೆದುರು ಕುಳಿತು ಕೆಲ ನಿಮಿಷಗಳ ಕಾಲ ಹನುಮಾನ್​ ಚಾಲೀಸಾ (Hanuman Chalisa) ಪಠಿಸಿದ್ದಾನೆ. ನಂತರ ರೂ. 10 ಅನ್ನು ಹನುಮಂತನಿಗೆ ಅರ್ಪಿಸಿ, ಕಾಣಿಕೆ ಡಬ್ಬಿಯಲ್ಲಿದ್ದ ರೂ. 5,000 ಅನ್ನು ಕದ್ದು ಪರಾರಿಯಾಗಿದ್ದಾನೆ. ಇದು ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇವನ ಕುತೂಹಲಕಾರಿ ಘಟನೆ ಸಾಕಷ್ಟು ಚರ್ಚೆಗೆ ಈಡಾಗುತ್ತಿದೆ. ಈ ಕೆಳಗಿನ ವಿಡಿಯೋ ವೀಕ್ಷಿಸಿ.

ಮೊದಲಿಗೆ ಅವನು ಹನುಮಂತನೆದುರು ಕೆಲ ನಿಮಿಷಗಳ ಕಾಲ ಕುಳಿತುಕೊಳ್ಳುತ್ತಾನೆ. ಚಾಲೀಸಾ ಪಠಿಸಿ ಧ್ಯಾನಿಸುತ್ತಾನೆ. ನಂತರ ಹನುಮಂತನ ಪಾದಗಳ ಮೇಲೆ ರೂ. 10 ಇಡುತ್ತಾನೆ. ಜಾಗರೂಕತೆಯಿಂದ ಕಾಣಿಕೆ ಪೆಟ್ಟಿಗೆಯನ್ನು ತೆರೆದು ಅಲ್ಲಿದ್ದ ನೋಟುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಾನೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಆಫ್ರೀನ್​ ಆಫ್ರೀನ್​; ಮಿಲಿಯನ್​ಗಟ್ಟಲೆ ಜನರನ್ನು ತಲುಪಿದೆ ಈ ಪುರುಷಜೋಡಿ

ರಾತ್ರಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿಕೊಂಡು ಮನೆಗೆ ಹೋದ ಅರ್ಚಕರಿಗೆ ಮಾರನೆಯ ದಿನ ದೇವಸ್ಥಾನಕ್ಕೆ ಬಂದಾಗ ಕಾಣಿಕೆ ಡಬ್ಬಿಯ ಬೀಗ ಮುರಿದಿರುವುದು ಅರಿವಿಗೆ ಬಂದಿದೆ. ಪೊಲೀರು ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಅವನನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ : Viral:70 ವರ್ಷದ ನನ್ನ ತಾಯಿ ನನಗಾಗಿ ಹಾಸಿಗೆ ಅಣಿಗೊಳಿಸುತ್ತಾರೆ; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಕಳ್ಳನ ಈ ಕುತೂಹಲಕಾರಿ ನಡೆ ಅನೇಕರಿಗೆ ಅಚ್ಚರಿಯನ್ನುಂಟು ಮಾಡಿದೆ. ಈ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ. ಈ ಘಟನೆಯನ್ನು ಹೇಗೆ ಗ್ರಹಿಸಬೇಕು ಎಂದು ಕೆಲವರು ಗೊಂದಲಕ್ಕೆ ಬಿದ್ದಿದ್ದಾರೆ. ಇನ್ನೂ ಕೆಲವರು ಏನೇ ಮಾಡಿದರೂ ಇದು ಕಳ್ಳತನವೇ, ಅಪರಾಧಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದಾರೆ. ದೇವರ ಹಣವನ್ನು ಕದ್ದ ಅವನಿಗೆ ತಕ್ಕ ಶಾಸ್ತಿಯನ್ನು ದೇವರೇ ಮಾಡುತ್ತಾನೆ ಎಂದು ಒಂದಿಷ್ಟು ಜನ ಹೇಳುತ್ತಿದ್ಧಾರೆ. ದೇವರನ್ನು ಬದಿಗಿರಿಸಿ ಕಾನೂನಾತ್ಮಕವಾಗಿ ಈ ಪ್ರಕರಣವನ್ನು ನೋಡಬೇಕು ಎನ್ನುತ್ತಿದ್ದಾರೆ ಅನೇಕರು.

ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 10:31 am, Wed, 12 July 23