Life Journey: ‘ಎರಡು ವರ್ಷದವನಿದ್ದಾಗ ನನಗೆ ಟ್ಯೂಮರ್ ಆಯಿತು. ವೈದ್ಯರು ಅದನ್ನು ನ್ಯೂರೋಫೈಬ್ರೋಮೆಟಾಸಿಸ್ (Neurofibromatosis) ಎಂದು ಗುರುತಿಸಿದರು. ಇದು ಎಂದಿಗೂ ವಾಸಿಯಾಗುವುದೂ ಇಲ್ಲವೆಂದರು. ಸದಾ ನೋವು, ಹಾಗಾಗಿ ಸರಿಯಾಗಿ ಉಣ್ಣಲು ತಿನ್ನಲು ಆಗುತ್ತಿರಲಿಲ್ಲ. ನನಗೆ ತಬಲಾ ನುಡಿಸುವುದು ಮತ್ತು ಕ್ರಿಕೆಟ್ ಆಡುವುದು ಎಂದರೆ ಬಹಳ ಇಷ್ಟ. ಆದರೆ ಕುರೂಪಿಯಾದ ನನ್ನನ್ನು ಶಾಲೆಯಲ್ಲಿ ಯಾರೂ ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ ಒಬ್ಬಂಟಿಯಾಗಿಯೇ ಇರುತ್ತಿದ್ದೆ. ಆದರೆ ನನ್ನ ಕುಟುಂಬ ಸದಾ ನನ್ನೊಂದಿಗಿತ್ತು.’
ಇದನ್ನೂ ಓದಿ : Viral Video: ಕಾಡಿನ ರಾಜ ಕಾರುಗಳ ಮಧ್ಯೆ ಕಾರುಬಾರು ಮಾಡದೇ ಹೋದ ವಿಡಿಯೋ ವೈರಲ್
‘ಪಿಯಾಲಿ ನನ್ನ ಕೈಹಿಡಿಯಲು ನಿರ್ಧರಿಸಿದಳು. ಮದುವೆಗೆ ಸಂಬಂಧಿಕರ್ಯಾರೂ ಬರಲಿಲ್ಲ, ಆದರೂ ಎಲ್ಲವೂ ಚೆನ್ನಾಗಿಯೇ ನೆರವೇರಿತು. ಆರಂಭದಲ್ಲಿ ನಾನು ಅವಳೆದುರು ಮುಖ ಮುಚ್ಚಿಕೊಳ್ಳುತ್ತಿದ್ದೆ. ಆಕೆ ಸಹಜವಾಗಿ ಇರಲು ಸಹಕರಿಸಿದಳು. ಒಟ್ಟು 23 ಸರ್ಜರಿಗಳ ನಂತರ ನಾನು ನಕಲಿ ಕಣ್ಣು (Fake Eye) ಹಾಕಿಕೊಂಡೆ. ಇನ್ನೆಂದೂ ನನ್ನ ಬಗ್ಗೆ ನಾನು ಅಸಹ್ಯ ಪಟ್ಟುಕೊಳ್ಳಬಾರದು ಎಂದು ನನ್ನಷ್ಟಕ್ಕೆ ನಾನು ಪ್ರಮಾಣ ಮಾಡಿಕೊಂಡೆ’ ಅಮಿತ್ ಘೋಷ್.
ಒಂದು ಗಂಟೆಯ ಹಿಂದೆ ಇನ್ಸ್ಟಾಗ್ರಾಂನ @Officialpeopleofindia ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 1 ಲಕ್ಷ ಜನರು ನೋಡಿದ್ದಾರೆ. 38,000ಕ್ಕಿಂತಲೂ ಹೆಚ್ಚು ಲೈಕ್ ಮಾಡಿದ್ದಾರೆ. ಈ ಪೇಜ್ ಅನ್ನು ಫಾಲೋ ಮಾಡಲು ಶುರುಮಾಡಿದಾಗಿನಿಂದ ನನ್ನ ನೋವು ಇಲ್ಲಿರುವ ಜನರಿಗಿಂತ ದೊಡ್ಡದಲ್ಲ ಎಂದು ನಾನು ಅರಿತುಕೊಂಡಿದ್ದೇನೆ. ನಿಜಕ್ಕೂ ಈ ಕಥೆಗಳು ಸ್ಫೂರ್ತಿದಾಯಕ ಎಂದಿದ್ದಾರೆ ಒಬ್ಬರು. ನೂರಾರು ಜನರು ಅಮಿತ್ ಘೋಷ್ ವಿಡಿಯೋಗೆ ಪ್ರತಿಕ್ರಿಯಿಸಿ ಅವರ ಪತ್ನಿ ಪಿಯಾಲಿಗೆ ದೊಡ್ಡ ಗೌರವ ಸಲ್ಲಬೇಕು ಎಂದಿದ್ದಾರೆ.
ಪಿಯಾಲಿ ನಿಮ್ಮ ಬಾಹ್ಯಸೌಂದರ್ಯ ನೋಡದೆ ನಿಮ್ಮ ಹೃದಯವನ್ನು ಮೆಚ್ಚಿ ಮದುವೆಯಾಗಿದ್ದಾಳೆ, ಇಬ್ಬರಿಗೂ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ. ನಿಜವಾದ ಪ್ರೀತಿ ಯಾವುದು ಎಂದು ಯಾರಾದರೂ ಕೇಳಿದರೆ, ನಾನು ಇಂಥ ಜನರನ್ನು ತೋರಿಸುತ್ತೇನೆ ಎಂದಿದ್ದಾರೆ ಒಂದಿಷ್ಟು ಜನ.
ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ