ತಾಯಿ ಪ್ರೀತಿಯೆಂದರೆ ಹಾಗೇ ಎಲ್ಲಕ್ಕಿಂತ ಶ್ರೇಷ್ಠವಾದುದು. ಅದು ಮನುಷ್ಯನೇ ಆಗಿರಲಿ ಅಥವಾ ಪ್ರಾಣಿಯಾಗಿರಲಿ ತಾಯಿಯಾದವಳು ಯಾವಾಗಲೂ ತನ್ನ ಮಗುವಿಗೆ ರಕ್ಷ ಕವಚವಾಗಿರುತ್ತಾಳೆ. ತನ್ನ ಮಗುವಿನ ತಂಟೆಗೆ ಬಂದರೆ ಅವರನ್ನು ಬಿಡುವ ಮಾತೇ ಇಲ್ಲ. ಅಂಥದ್ದೇ ಘಟನೆ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗಿದೆ.
ಈ ವಿಡಿಯೋ ಒಮ್ಮೆ ನೋಡಿದಾಗ ನಿಮಗೆ ಹಾಸ್ಯಾಸ್ಪದ ಎನಿಸದರೂ ಕೂಡ, ತಾಯಿ ಬಾತುಕೋಳಿ ತನ್ನ ಮರಿಗಳಿಗೆ ಹೇಗೆ ರಕ್ಷಣೆಯನ್ನು ನೀಡಿದ್ದಾಳೆ ಎಂಬುದನ್ನು ಇಲ್ಲಿ ಕಾಣಬಹುದು. ಈ ವಿಡಿಯೋವನ್ನು ನೀವೇ ಒಮ್ಮೆ ನೋಡಿ.
ಎರಡು ದೊಡ್ಡ ಬಾತುಕೋಳಿಗಳು ಜೊತೆಗೆ ಅದರ ಮರಿಗಳು ರಸ್ತೆ ಬದಿಯಲ್ಲಿ ಅವರ ಪಾಡಿಗೆ ಗುಂಪಾಗಿ ಹೋಗುತ್ತಿದೆ. ಇದನ್ನು ನೋಡಿದ ವ್ಯಕ್ತಿಯೊಬ್ಬ ಮರಿಗಳನ್ನು ಮುಟ್ಟಲು ಹೋಗುತ್ತಾನೆ. ಮರಿಗಳನ್ನು ಮುಟ್ಟಲು ಬಂದ ವ್ಯಕ್ತಿಯನ್ನು ನೋಡಿದ ಕೂಡಲೇ ದೊಡ್ಡ ಬಾತುಕೋಳಿಗಳೆರಡು ವ್ಯಕ್ತಿಯನ್ನು ರೋಡಿನಲ್ಲಿ ಕುಕ್ಕಿ, ಅಟ್ಟಾಡಿಸಿ ಓಡಾಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನು ಓದಿ: ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ
ಇಲ್ಲಿ ತಾಯಿ ಬಾತುಕೋಳಿ ತನ್ನ ಮರಿಗಳನ್ನು ಯಾರೋ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದು ಗಾಬರಿಗೊಂಡು ತನ್ನ ಮರಿಗಳನ್ನು ಮುಟ್ಟಲು ಬಂದ ವ್ಯಕ್ತಿಯ ಮೇಲೆ ಕೋಪಗೊಂಡು ಸಾಕಷ್ಟು ದೂರದ ವರೆಗೆ ಆತನನ್ನು ಓಡಾಡಿಸಿಕೊಂಡು ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದಂತೆ ಸಾಕಷ್ಟು ವೀಕ್ಷಕರೂ ತಾಯಿಯ ಪ್ರೀತಿಯೇ ವಿಶೇಷವಾದುದು ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಪ್ರಾಣಿ ಪ್ರಿಯರೂ ತಮ್ಮ ಖಾತೆಗಳಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಚಿತ್ರೀಕರಿಸುತ್ತಿದ್ದ ಮಹಿಳೆ ಈ ಅನೀರಿಕ್ಷಿತ ಪ್ರಸಂಗವನ್ನು ಕಂಡು ನಗುತ್ತಿರುವುದು ವಿಡಿಯೋದ ಮೂಲಕ ಕೇಳಬಹುದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ: