ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ

Viral Video : ಮುಗ್ಗರಿಸಿಕೊಂಡು ಬಿದ್ದರೂ, ನಾಯಿ ದರದರನೆ ಇವನನ್ನು ಎಳೆದುಕೊಂಡು ಹೋದರೂ ಈತ ಮಾತ್ರ ನಾಯಿಯನ್ನು ನಿಯಂತ್ರಿಸುವುದನ್ನು ಬಿಡುವುದಿಲ್ಲ. ಮಿಲಿಯನ್​ಗಟ್ಟಲೆ ಜನ ನೋಡಿದ ಈ ವಿಡಿಯೋ ಇಲ್ಲಿದೆ.

ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ
ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್​ ಹೊರಟಾಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 29, 2022 | 4:59 PM

Viral Video : ಈ ರಸ್ತೆ ದಟ್ಟವಾದ ಹಿಮದಿಂದ ಆವರಿಸಿದೆ. ರಾತ್ರಿ ಸಮಯ ಬೇರೆ. ಆದರೂ ಈ ವ್ಯಕ್ತಿಗೆ ತನ್ನ ನಾಯಿಯೊಂದಿಗೆ ವಾಕಿಂಗ್​ ಮಾಡಬೇಕೆನ್ನಿಸಿದೆ. ಅಂತೂ ರಸ್ತೆಗಿಳಿದಿದ್ದಾನೆ. ತನ್ನ ನಡಿಗೆಗೆ ಅದರ ನಡಿಗೆಯನ್ನು ನಿಯಂತ್ರಿಸಲು ಆತ ನೋಡುತ್ತಿದ್ದಾನೆ. ಆದರೆ ನಾಯಿಯೋ ತನ್ನದೇ ಲೋಕದಲ್ಲಿ ಓಡುತ್ತಿದೆ. ರಸ್ತೆಯ ತಿರುವು ದಾಟಿಕೊಂಡು ಬರುವ ಹೊತ್ತಿಗೆ ಬೆಕ್ಕೋ ನಾಯಿಯೋ ಒಟ್ಟಿನಲ್ಲಿ ಒಂದು ಪ್ರಾಣಿ ಓಡಿಹೋಗುತ್ತಿದ್ದಂತೆ ನಾಯಿಗೆ ಹುಕಿ ಬಂದು ಓಡಲು ಶುರುಮಾಡುತ್ತದೆ. ಪೋಷಕನನ್ನು ದರದರನೆ ಎಳೆದೊಯ್ಯುತ್ತದೆ.

ಆನ್​ಲೈನ್​ನಲ್ಲಿ ಮಂದಿ ಇದನ್ನು ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಬೇಕಿತ್ತಾ ಇಂಥ ರಾತ್ರಿಯಲ್ಲಿ ವಾಕಿಂಗ್​ ಎಂದು ಕೇಳುತ್ತಿದ್ದಾರೆ. ಸಾಕಿದ ಮಾತ್ರಕ್ಕೆ ನಾಯಿ ನಿಮ್ಮ ಮಾತು ಕೇಳಲೇಬೇಕು ಅಂತಿಲ್ಲ. ಅದನ್ನು ನಿಯಂತ್ರಿಸಲು ಹೋದರೆ ಏನಾಗುತ್ತದೆ ನೋಡಿ ಎಂದಿದ್ದಾರೆ ಒಬ್ಬರು. ಒಂದಲ್ಲ ಎರಡು ಮೂರು ಸಲ ಬಿದ್ದು ಎದ್ದು ನಾಯಿಯ ಹಿಂದೆ ಓಡಿದ್ದಾಯ್ತಲ್ಲ, ಇನ್ನೊಮ್ಮೆ ಹೀಗೆ ಚಳಿಯಲ್ಲಿ, ಹಿಮದಲ್ಲಿ ನಾಯಿಯನ್ನು ವಾಕಿಂಗ್​ ಕರೆದುಕೊಂಡು ಬರುತ್ತೀಯಾ ಎಂದು ಈ ವ್ಯಕ್ತಿಗೆ ಒಬ್ಬರು ಕೇಳಿದ್ದಾರೆ. ಇಂಥ ಹುಚ್ಚಾಟಗಳಿಗೆ ಬೀಳಬೇಡಿ ಇದು ಅಪಾಯ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ಅನ್ನು ಈಗಾಗಲೇ 2 ಮಿಲಿಯನ್​ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು 70,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ