Viral Video: ಚಾಕು ತೋರಿಸಿ ಹೆದರಿಸಿದ ಕಳ್ಳನನ್ನು ಅಂಗಡಿಯೊಳಗೆ ಬಂಧಿಸಿದ ಮಾಲೀಕ
ಚಾಕು ಹಿಡಿದು ಬೆದರಿಸಿದ ದರೋಡೆಕೋರನನ್ನು ಅಂಗಡಿಯ ಮಾಲೀಕ ಉಪಾಯದಿಂದ ಅಂಗಡಿಯೊಳಗೆ ಬಂಧಿಸಿದ್ದಾನೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗಾ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಈ ಕುರಿತಾದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅಂತಹ ಘಟನೆಗಳಿಗೆ ಪೂರಕ ಎಂಬಂತೆ ಇಲ್ಲೊಂದು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಲ್ಲಿದೆ. ಚಾಕು ಹಿಡಿದು ಬೆದರಿಸಿದ ದರೋಡೆಕೋರನನ್ನು ಅಂಗಡಿಯ ಮಾಲೀಕ ಉಪಾಯದಿಂದ ಅಂಗಡಿಯೊಳಗೆ ಬಂಧಿಸಿದ್ದಾನೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗಾ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಅಂಗಡಿ ಮಾಲೀಕನ ಸಮಯ ಪ್ರಜ್ಞೆ ಹಾಗೂ ಧೈರ್ಯಕ್ಕೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ.
ವಿಡಿಯೋದಲ್ಲಿ ದರೋಡೆಕೋರ ಜನ ಸಾಮಾನ್ಯರಂತೆ ಸಾಮಾಗ್ರಿ ಖರೀದಿಸಲು ಬಂದಿರುವುದನ್ನು ಕಾಣಬಹುದು. ಕೆಲಹೊತ್ತಿನಲ್ಲೇ ಬಿಲ್ ಕೌಂಟರ್ಗೆ ಬಿಲ್ ಮಾಡಲು ಬಂದಿದ್ದಾನೆ. ಇದಕ್ಕಿದ್ದ ಹಾಗೆ ಜೇಬಿನಿಂದ ಚಾಕು ತೆಗೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜೊತೆಗೆ ಅಂಗಡಿ ಮಾಲೀಕನಿಗೆ ಚಾಕು ತೋರಿಸಿ ಹೆದರಿಸಿರುವುದು ಕಾಣಬಹುದು. ಸ್ಪಲ್ಪ ಹೊತ್ತಿನಲ್ಲೇ ಅಂಗಡಿ ಮಾಲೀಕ ಹೊರಗೆ ಓಡಿ ಅಂಗಡಿಯ ಬಾಗಿಲು ಹಾಕಿದ್ದಾನೆ. ತಪ್ಪಿಸಲು ಯತ್ನಿಸಿದ ಕಳ್ಳ ಬಾಗಿಲಿನ ಎಡೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವೀಡಿಯೊವನ್ನು ಜೂನ್ 15 ರಂದು ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ, ವಿಡಿಯೋ ಸುಮಾರು 46,000 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜೊತೆಗೆ 1,100 ಕ್ಕೂ ಹೆಚ್ಚು ಲೈಕುಗಳನ್ನು ಕಾಣಬಹುದು. ವೀಡಿಯೋಗೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅಂಗಡಿ ಮಾಲೀಕನ ಧೈರ್ಯಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: