ಗಣಿತ ಶಿಕ್ಷಕರು ಬೇಕಾಗಿದ್ದಾರೆ; ಸಂಚಲನ ಮೂಡಿಸಿದ ಗುಜರಾತ್​ ಶಾಲೆಯ ವಿಶಿಷ್ಟ ಜಾಹೀರಾತು

| Updated By: ಶ್ರೀದೇವಿ ಕಳಸದ

Updated on: Jan 23, 2023 | 3:15 PM

Gujarat : ಈ ಜಾಹೀರಾತು ಗಣಿತಪ್ರಿಯರೆಲ್ಲರನ್ನೂ ಬಡಿದೆಬ್ಬಿಸಿದೆ. ತುಂಡುಪೇಪರ್​ಗಳ ಮೇಲೂ ಸಮೀಕರಣ ಬಿಡಿಸಿ ಮೊಬೈಲ್​ ನಂಬರ್ ಕಂಡುಹಿಡಿದಿದ್ಧಾರೆ ಅನೇಕರು. ಶಕುಂತಲಾದೇವಿ, ರಾಮಾನುಜನ್​ರನ್ನು ಹುಡುಕುತ್ತಿದೆಯೇ ಈ ಶಾಲೆ?

ಗಣಿತ ಶಿಕ್ಷಕರು ಬೇಕಾಗಿದ್ದಾರೆ; ಸಂಚಲನ ಮೂಡಿಸಿದ ಗುಜರಾತ್​ ಶಾಲೆಯ ವಿಶಿಷ್ಟ ಜಾಹೀರಾತು
ಗುಜರಾತಿನ ಶಾಲೆ ನೀಡಿದ ಜಾಹೀರಾತು
Follow us on

Viral News : ಉದ್ಯೋಗಾವಕಾಶಕ್ಕೆ ಸಂಬಂಧಿಸಿ ಯಾವುದೇ ಜಾಹೀರಾತು ನೀಡಿದರೂ ಸಂಪರ್ಕ ವಿಳಾಸ, ಮೇಲ್​ ಐಡಿ ಅಥವಾ ದೂರವಾಣಿ ಸಂಪರ್ಕ, ಮೊಬೈಲ್​ ನಂಬರ್​ ಅನ್ನು ಕಡ್ಡಾಯವಾಗಿ ನಮೂದಿಸಿರುತ್ತಾರೆ. ಆದರೆ ಇದೀಗ ವೈರಲ್ ಆಗುತ್ತಿರುವ ಈ ಜಾಹೀರಾತು ಗಮನಿಸಿ, ಬಹಳ ವಿಶೇಷವಾಗಿದೆ. ಗುಜರಾತಿನ ಶಾಲಯೊಂದು ಗಣಿತ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆದರೆ ಸಂಪರ್ಕಿಸಬೇಕಾದ ನಂಬರ್​ ಬದಲಾಗಿ ಸಮೀಕರಣವನ್ನು ನೀಡಲಾಗಿದೆ. ಅಂದರೆ, ಈ ಸಮೀಕರಣವನ್ನು ಬಿಡಿಸಿದರೆ ಸಂಪರ್ಕಿಸಬೇಕಾದ ಮೊಬೈಲ್​ ನಂಬರ್​ ದೊರೆಯುತ್ತದೆ. ಈ ಹುದ್ದೆಗೆ  ಹೀಗೊಂದು ಸವಾಲಾತ್ಮಕ ಜಾಹೀರಾತನ್ನು ಶಾಲೆಯವರು ನೀಡಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಉದ್ಯಮಿ ಹರ್ಷ ಗೋಯೆಂಕಾ ಈ ಟ್ವೀಟ್ ಮಾಡಿದ್ದಾರೆ. ಈತನಕ ಈ ಪೋಸ್ಟ್​ ಅನ್ನು 1.8 ಮಿಲಿಯನ್​ ಜನರು ನೋಡಿದ್ಧಾರೆ. 21,000 ಕ್ಕಿಂತಲೂ ಹೆಚ್ಚು ಇಷ್ಟಪಟ್ಟಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಸಮೀಕರಣ ಬಿಡಿಸಿ ಫೋನ್ ನಂಬರ್ ಪತ್ತೆ ಹಚ್ಚಿದ್ದಾರೆ. ಲೆಕ್ಕದ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ. ಉತ್ತರ 9428163811.

ಇದನ್ನೂ ಓದಿ : ಇಲ್ಲಿ ಅಡಗಿರುವ ಬೆಕ್ಕನ್ನು ಹರ್ಷ ಗೋಯೆಂಕಾರಿಗೆ ಕೊಡಬೇಕಿದೆ, ನಿಮಗಿರುವ ಸಮಯ 10 ಸೆಕೆಂಡುಗಳು

ಕೆಲವರು ಕ್ಯಾಲ್ಕ್ಯುಲೇಟರ್​ ಉಪಯೋಗಿಸದೇ ಸಿಕ್ಕ ತುಂಡು ಪೇಪರ್ ಮೇಲೆ ಉತ್ತರ ಕಂಡುಕೊಂಡಿದ್ದಾರೆ. ಹಾಗಾಗಿ ಬಹುಮಾನ ನನಗೆ ಕೊಡಬೇಕು ಎಂದಿದ್ದಾರೆ. ಬಹುಶಃ ಈ ಶಾಲೆಯು ರಾಮಾನುಜನ್ ಮತ್ತು ಶಕುಂತಲಾದೇವಿಯವರನ್ನು ಹುಡುಕುತ್ತಿದೆ ಎಂದು ಯಾರೋ ಒಬ್ಬರು ತಮಾಷೆ ಮಾಡಿದ್ದಾರೆ. ಈ ಉಪಾಯ ಬಹಳ ಆಕರ್ಷಕವಾಗಿದೆ. ಖಂಡಿತ ಬುದ್ಧಿವಂತ ಶಿಕ್ಷಕರೇ ಸಿಗುತ್ತಾರೆ ಈ ಶಾಲೆಗೆ ಎಂದಿದ್ಧಾರೆ ಕೆಲವರು.

ನೀವೇನಂತೀರಿ ಇದನ್ನು ಓದಿ?

ಮತ್ತಷ್ಟೂ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ