ಸಾಮಾನ್ಯವಾಗಿ ದೇಶ ವಿದೇಶಗಳನ್ನು ಪ್ರಯಾಣ ಮಾಡುವಾಗ ಸಾಕಷ್ಟು ಬೆಲೆ ಬಾಳುವ ಹಾಗು ತಮ್ಮ ಅಗತ್ಯದ ಕೆಲವೊಂದು ಡಾಕ್ಯುಮೆಂಟ್ ಗಳನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯವಾಗಿದೆ. ಆದರೆ ಇಲ್ಲೊಂದು ವೈರಲ್ ಆಗಿರುವ ಚಿತ್ರ ಸಾಕಷ್ಟು ಜನರಲ್ಲಿ ಭಯಭೀತಗೊಳ್ಳುವಂತೆ ಮಾಡಿದೆ.
ವಿಮಾನ ಪ್ರಯಾಣಿಕನ ಸೂಟ್‌ಕೇಸ್ ವಿಮಾನ ನಿಲ್ದಾಣಕ್ಕೆ ತಲುಪುವ ಸಮಯದಲ್ಲಿ ಸಂಪೂರ್ಣವಾಗಿ ಹಾನಿಯಾಗಿರುವ ವೈರಲ್ ಚಿತ್ರ ನೆಟ್ಟಿಗರನ್ನು ಆತಂಕಕ್ಕೀಡು ಮಾಡುತ್ತಿದೆ.
ಹೌದು ಇಲ್ಲೊಂದು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರೊಬ್ಬರ ಸೂಟ್‌ಕೇಸ್ ಸಂಪೂರ್ಣವಾಗಿ ಸುಟ್ಟು ಹೋಗಿರುವ ಚಿತ್ರ ಇಂಟರ್ ನೆಟ್ ನಲ್ಲಿ ಸಕ್ಕತ್ತ್ ವೈರಲ್ ಆಗಿದೆ. ಈ ಚಿತ್ರವನ್ನು ಪ್ರಯಾಣಿಕರ ಸೋದರಳಿಯ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದ್ದರಿಂದ ನೆಟ್ಟಿಗರು ತಮ್ಮ ಲಗೇಜ್‌ಗಳ ಸುರಕ್ಷತೆಯ ಬಗ್ಗೆ ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ. ಅಂದಿನಿಂದ ಪ್ರಪಂಚದಾದ್ಯಂತದ ಪ್ರಯಾಣಿಕರು ತಮ್ಮ ಲಗೇಜ್‌ಗಳ ಸುರಕ್ಷತೆಯ ಬಗ್ಗೆ ಭಯಪಡುತ್ತಿದ್ದಾರೆ.
ಈ ಚಿತ್ರವನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿರುವ ವ್ಯಕ್ತಿ ವಿಮಾನ ಪ್ರಯಾಣದ ನಂತರ ನನ್ನ ಚಿಕ್ಕಪ್ಪನ ಸೂಟ್‌ಕೇಸ್ ನ ಸ್ಥಿತಿ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಇಲ್ಲಿ ಈ ರೀತಿಯ ವಿಮಾನ ಸಿಬ್ಬಂದಿಯ ಅಸಡ್ಡೆಯನ್ನು ನೋಡಿದಾಗ, ನಿಮ್ಮ ಲಗೇಜ್‌ನ ಸುರಕ್ಷತೆಯ ಬಗ್ಗೆ ನೀವು ಭಯಪಡುವಿರಿ.
ಈ ಚಿತ್ರ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಗೆ 97 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು 4,600 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಚರ್ಚೆಗೆ ಒಳಗಾಗಿದೆ.
Published On - 10:13 pm, Fri, 4 November 22