
ಕೆಲವರಿಗೆ ಅಕ್ಕ ಪಕ್ಕದವರ ಮನೆಯ ವಿಷ್ಯ ಮಾತಾಡದೇ ಹೋದ್ರೆ ತಿಂದ ಅನ್ನ ಜೀರ್ಣ ಅಗೋಲ್ಲ. ಹೀಗಾಗಿ ತಮ್ಮ ಮನೆಯಲ್ಲಿ ಬೇಕಾದ್ರೂ ಸಮಸ್ಯೆಯಿದ್ರು ಅಕ್ಕಪಕ್ಕದವರ (neighbours) ಸುದ್ದಿಯನ್ನು ಮಾತಾಡೋದ್ರಲ್ಲಿ ಏನೋ ಖುಷಿ. ಭಾರತೀಯ ಮಹಿಳೆಯರು ಈ ವಿಷ್ಯದಲ್ಲಿ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ. ಕೆಲವೊಮ್ಮೆ ತಮ್ಮ ಅಕ್ಕಪಕ್ಕದ ಮನೆಯಲ್ಲಿ ಏನಾದ್ರೂ ಗಲಾಟೆಗಳು ನಡೆದು ಹೋದ್ರೆ ಮುಗಿದೇ ಹೋಯ್ತು. ಎರಡು ಕಿವಿ ಅಗಲಿಸಿ ಏನಾಗ್ತಿದೆ ಎಂದು ಕೇಳುತ್ತ ನಿಂತೇ ಬಿಡುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಈ ಮಹಿಳೆಯದ್ದು ಇದೇ ಕೆಲಸ. ತಮ್ಮ ನೆರೆಮನೆಯ ಬಾಗಿಲಿನ ಪಕ್ಕದಲ್ಲಿ ನಿಂತು ಒಳಗೆ ಏನಾಗುತ್ತಿದೆ ಎಂದು ಆಲಿಸುತ್ತಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇಂತಹ ಮಹಾನುಭಾವರು ಅಕ್ಕ ಪಕ್ಕದಲ್ಲಿದ್ರೆ ನಮ್ಮ ಜೀವನ ಉದ್ಧಾರ ಎಂದು ಹೇಳಿದ್ದಾರೆ.
bharatonyourfeed ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮಾಡುತ್ತಿರುವ ಕೆಲಸವನ್ನು ನೋಡಬಹುದು. ಇದೊಂದು ಅಪಾರ್ಟ್‌ಮೆಂಟ್‌ನಂತಿದ್ದು, ಮಹಿಳೆಯೊಬ್ಬಳು ತನ್ನ ಮನೆಯ ಮುಂಭಾಗದಲ್ಲಿರುವ ಕಾರಿಡಾರ್‌ನಲ್ಲಿ ಅತ್ತಿಂದ ಇತ್ತ ಅಡ್ಡಾಡುತ್ತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಅಕ್ಕ ಪಕ್ಕದ ಮನೆಯಿಂದ ಜೋರಾದ ಧ್ವನಿಯೂ ಕೇಳಿಬರುತ್ತಿದೆ. ಇದೇ ವೇಳೆ ಕುತೂಹಲದಿಂದ ಆ ಮನೆಯ ಬಾಗಿಲ ಬಳಿ ನಿಂತು ಏನು ನಡೆಯುತ್ತಿದೆ ಎಂದು ನೋಡುತ್ತಾ ಅವರ ಮಾತುಗಳನ್ನು ಕದ್ದು ಕೇಳಿಸಿಕೊಳ್ಳುತ್ತಿದ್ದಾಳೆ. ಆ ಬಳಿಕ ತನ್ನ ಮನೆಯೊಳಗೆ ಹೋಗಿದ್ದಾಳೆ. ಈ ದೃಶ್ಯವು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಒಬ್ಬನ ಮೇಲೆ ಇಬ್ಬರ ಲವ್; ನೆರೆಮನೆಯ ಯುವಕನೊಂದಿಗೆ ಓಡಿಹೋದ ಒಂದೇ ಮನೆಯ ಸೊಸೆಯಂದಿರು
ಈ ವಿಡಿಯೋ 1.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ನಮ್ಮ ನೆರೆಮನೆಯಲ್ಲಿ ಇಂತಹದ್ದೇ ಒಬ್ಬರು ಆಂಟಿ ಇದ್ದರು. ಆಕೆ ಯಾವಾಗಲೂ ತಮ್ಮ ಟೆರೇಸ್‍ನಲ್ಲಿ ನಿಂತು ಅವರ ಗಮನ ಇದ್ದದು ಅಕ್ಕಪಕ್ಕದ ಮನೆಗಳ ಕಡೆಗೆ. ನಾವೆಲ್ಲೇ ಹೋಗಿ ಬಂದರೂ ನಮ್ಮನ್ನೇ ನೋಡುತ್ತಿದ್ದರು. ಹೀಗಾಗಿ ಅವರಿಗೆ ನಾವು ಚಿಪ್ಕಿಲಿ ಎಂದು ಹೆಸರಿಟ್ಟಿದ್ದೆವು ಎಂದು ನೆನಪಿಸಿಕೊಂಡಿದ್ದಾರೆ. ನನ್ನ ಅಮ್ಮನು ಹೀಗೆಯೇ ಒಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೊಬ್ಬರು ಆಂಟಿ ನಿಜಕ್ಕೂ ಫೇಮಸ್ ಆದ್ಲು ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ನಗುವ ಇಮೋಜಿ ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Thu, 4 September 25