ಸಾಮಾನ್ಯವಾಗಿ ಜ್ವರ ನೆಗಡಿ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ಹೋಗುವವರಿಗಿಂತ ಮೆಡಿಕಲ್ನಿಂದ ಮಾತ್ರೆ ಖರೀದಿಸಿ ಕುಡಿಯುವವರೇ ಹೆಚ್ಚು. ಇದೀಗ ಇರಾಕ್ ನ ಮಹಿಳೆಯೂ ಹೀಗೆಯೇ ಮಾಡಿ ಆಕೆಯ ಸ್ಥಿತಿ ಗಂಭೀರವಾಗಿದ್ದು, ಐಸಿಯುಗೆ ದಾಖಲಿಸಲಾಗಿದೆ. ಮೆಡಿಕಲ್ನಿಂದ ಖರೀದಿಸಿದ ಮಾತ್ರೆಯನ್ನು ನುಂಗಿದ ಕೆಲ ಹೊತ್ತಿನಲ್ಲೇ ಮಹಿಳೆಯ ಮುಖ ಊದಿಕೊಳ್ಳಲು ಪ್ರಾರಂಭವಾಗಿದ್ದು, ಸ್ಥಿತಿ ಚಿಂತಾಜನಕವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಡೈಲಿ ಮೇಲ್ ವರದಿಯ ಪ್ರಕಾರ, ಮಹಿಳೆ ಜ್ವರಕ್ಕೆ ಮೆಡಿಕಲ್ನಿಂದ ಐಬುಪ್ರೊಫೇನ್(Ibuprofen) ಮಾತ್ರೆ ತೆಗೆದುಕೊಂಡಿದ್ದಾಳೆ. ಆದರೆ ಸಾಮಾನ್ಯವಾಗಿ ಐಬುಪ್ರೊಫೇನ್ ಮಾತ್ರೆ ನಕರಾತ್ಮಕ ಪರಿಣಾಮ ಬೀರಿವುದಿಲ್ಲ. ಇದು ನೋವು , ಜ್ವರ ಮತ್ತು ಉರಿಯೂತವನ್ನು ನಿವಾರಿಸಲು ಬಳಸಲಾಗುವ ನಾನ್ ಸ್ಟೆರೊಯ್ಡೆಲ್ ಉರಿಯೂತದ ಔಷಧ. ಇದು ಮುಟ್ಟಿನ ನೋವು , ಮೈಗ್ರೇನ್ಗಳು , ಮತ್ತು ಸಂಧಿವಾತಕ್ಕೆ ಸಾಮಾನ್ಯವಾಗಿ ತೆಗೆದುಕೊಳ್ಳುವ ಔಷಧಿ. ಆದರೆ ವೈದ್ಯರ ಸಲಹೆಯಿಲ್ಲದೆ ಅದನ್ನು ತೆಗೆದುಕೊಳ್ಳಬಾರದು ಎಂದು ವೈದ್ಯರು ಎಚ್ಚರಿಸುತ್ತಾರೆ.
ಇದನ್ನೂ ಓದಿ: ಪೊಲೀಸರನ್ನೇ ಕನ್ಫ್ಯೂಸ್ ಮಾಡುತ್ತಿದೆ ಈ ಹಕ್ಕಿ; ಇಂಟ್ರೆಸ್ಟಿಂಗ್ ವಿಡಿಯೋ ಇಲ್ಲಿದೆ ನೋಡಿ
ವೈದ್ಯರ ಸಲಹೆ ಇಲ್ಲದೇ ಈಕೆ 400 ಮಿಗ್ರಾಂ ಐಬುಪ್ರೊಫೇನ್ ಎರಡು ಮಾತ್ರೆಗಳನ್ನು ತೆಗೆದುಕೊಂಡಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆ ಹಾಗೂ ಆರೋಗ್ಯಕರ ಜೀವಕೋಶಗಳ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಇದರಿಂದ ಮುಖ ಸೇರಿದಂತೆ ದೇಹದಲ್ಲಿ ಗುಳ್ಳೆ ಮತ್ತು ಊತ ಕಂಡುಬಂದಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಅಪರೂಪದ ಸೋಂಕು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ