Viral News: ಸತತ 3 ದಶಕಗಳ ಕಾಲ ಕೋಮಾದಲ್ಲಿದ್ದ ಪತ್ನಿಗಾಗಿ ನಿಷ್ಠೆಯಿಂದ ಕಾಯುತ್ತಿದ್ದ ಪತಿ ಈಗ ಒಬ್ಬಂಟಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 18, 2023 | 5:46 PM

ಭೀಕರ ಕಾರು ಅಪಘಾತದಿಂದ ಕಳೆದ 31 ವರ್ಷಗಳಿಂದ ಕೋಮಾದಲ್ಲಿದ್ದ ಮಹಿಳೆ, ಆಕೆಯ ಪತಿಯನ್ನು ಒಂಟಿ ಮಾಡಿ ಇಹಲೋಕ ತ್ಯಜಿಸಿದ್ದಾರೆ. ಈ ಘಟನೆ ಇಟಲಿಯಲ್ಲಿ ನಡೆದಿದೆ.

Viral News: ಸತತ 3 ದಶಕಗಳ ಕಾಲ ಕೋಮಾದಲ್ಲಿದ್ದ ಪತ್ನಿಗಾಗಿ ನಿಷ್ಠೆಯಿಂದ ಕಾಯುತ್ತಿದ್ದ ಪತಿ ಈಗ ಒಬ್ಬಂಟಿ
ವೈರಲ್​​ ಫೋಟೋ
Follow us on

ಮದುವೆಯಾದ ಒಂದುವರೆ ವರ್ಷದ ನಂತರ ರಸ್ತೆ ಅಪಘಾತಕ್ಕೆ ತುತ್ತಾಗಿ ಕೋಮಾದಲ್ಲಿದ್ದ ಮಹಿಳೆಯೊಬ್ಬರು 31 ವರ್ಷಗಳ ನಂತರ ಸಾವನ್ನಪ್ಪಿದ್ದಾರೆ. ತನ್ನ ಹೆಂಡತಿ ಬದುಕುಳಿಯುತ್ತಾಳೆ ಎಂದು ಇಷ್ಟು ದಿನ ನಂಬಿದ್ದ ಗಂಡನ ನಿರೀಕ್ಷೆ ಹುಸುಯಾಗಿದೆ. ಈ ದುರಂತ ಪ್ರೇಮ ಕಥೆ ನಡೆದಿರುವುದು ಇಟಲಿಯಲ್ಲಿ. ವೆನೆಟೊ ನಗರದ ಮಿರಿಯಮ್ ವಿಸಿಂಟಿನ್ ಎಂಬ ಮಹಿಳೆ ಡಿಸ್ಕೋದಲ್ಲಿ ಏಂಜೆಲೊ ಫರೀನಾ ಅವರನ್ನು ಭೇಟಿಯಾದರು. ಕೆಲಕಾಲಗಳ ಕಾಲ ಪ್ರೀತಿಸುತ್ತಿದ್ದ ಇವರಿಬ್ಬರು 1990 ರಲ್ಲಿ ವಿವಾಹವಾದರು. ಆದರೆ ಅವರಿಬ್ಬರ ಅನ್ಯೋನ್ಯತೆಯನ್ನು ನೋಡಿ ವಿಧಿ ಅಸೂಯೇ ಪಟ್ಟಿತು ಅನಿಸುತ್ತದೆ. ಮದುವೆಯಾಗಿ ಕೇವಲ ಒಂದು ವರ್ಷದ ಬಳಿಕ ಅಂದರೆ 1991 ರಲ್ಲಿ ಕ್ರಿಸ್ಮಸ್ ಇವಾ ಪಾರ್ಟಿಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಅವರ ಕಾರು ಅಪಘಾತಕ್ಕಿಡಾಗಿ, ಮಿರಿಯಮ್ ವಿಸಿಂಟಿನ್ ಮೆದುಳಿಗೆ ತೀವ್ರವಾದ ಪೆಟ್ಟು ಬಿದ್ದು, ಆ ಮಹಿಳೆ ಕೋಮಾ ಸ್ಥಿತಿ ತಳುಪಿದಳು.

ಬಳಿಕ ಮಿರೊಯಮ್ ವಿಸಿಂಟಿನ್ ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ವೈದ್ಯರು ಅಪಘಾತದ ದಿನದಂದು ಅವರ 33 ವರ್ಷದ ಪತಿ ಏಂಜೆಲೋ ಫರೀನಾಗೆ ತಿಳಿಸಿದರು. ಆದರೆ ತನ್ನ ಹೆಂಡತಿ ಬದುಕುಳಿಯುತ್ತಾಳೆ ಎಂದು ಫರೀನಾ ಅಚಲವಾಗಿ ನಂಬಿಕೆಯನ್ನಿಟ್ಟಿದ್ದರು. ತನ್ನ ಪತ್ನಿಯ ಕಷ್ಟಗಳು ಮತ್ತು ಕ್ಲೇಶಗಳಲ್ಲಿ ಆಕೆಯ ಜೊತೆಯಾಗಿರುತ್ತೇನೆ ಎಂದು ಮದುವೆಯ ವೇಳೆ ಮಾಡಿದ ಪ್ರತಿಜ್ಞೆಗೆ ಅವರು ಬದ್ಧರಾಗಿದ್ದರು. ಇದೇ ಕಾರಣದಿಂದ ಕೋಮಾ ಸ್ಥಿತಿಯಲ್ಲಿರುವ ಪತ್ನಿಗೆ ಹಲವು ವರ್ಷಗಳಿಂದ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಾರೆ. ಪ್ರತಿದಿನ ಆಫೀಸಿನ ಊಟದ ಸಮಯದಲ್ಲಿ ಅಲ್ಲಿಗೆ ಹೋಗಿ ಹೆಂಡತಿಯನ್ನು ನೋಡಿ ಬರುತ್ತಿದ್ದರು. ಕೆಲವೊಮ್ಮೆ ಸಾಯಂಕಾಲ ಹೆಂಡತಿಯ ಬಳಿಯೇ ಉಳಿಯುತ್ತಿದ್ದರು. ಈ ರೀತಿಯಾಗಿ ಪತ್ನಿಯ ಆರೈಕೆಯಲ್ಲಿ ತೊಡಗಿದ್ದರು.

ಇದನ್ನೂ ಓದಿ: Viral Video: ಮಂಟಪದಿಂದ ನೇರ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉತ್ತರಪ್ರದೇಶದ ನವವಧು

ಮತ್ತೊಂದೆಡೆ 31 ವರ್ಷಗಳಿಂದ ಕೋಮಾದಲ್ಲಿದ್ದ ಮಿರಿಯಮ್ ವಿಸಿಂಟಿನ್ ಅವರ ಶ್ವಾಸಕೋಶದಲ್ಲಿ ಎರಡು ತಿಂಗಳ ಹಿಂದೆ ನೀರು ಕಂಡುಬAದಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಯಾನ್ ಬಾಸ್ಸಿಯಾನೊದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೇ 10 ರಂದು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಈ ವಿಷಯ ತಿಳಿದು ಆಕೆಯ ಪತಿ ಏಂಜೆಲೋ ಫರೀನಾಗೆ ಪತ್ನಿಯ ಸಾವಿಯ ಸಂಗತಿಯನ್ನು ಸಹಿಸಲಾಗಲಿಲ್ಲ. ಕೊನೆಗೂ ಆಕೆಗೆ ಸಮಧಾನವಾಗಿದ್ದು, ಆಕೆ ಸ್ವರ್ಗಕ್ಕೆ ಹೋಗಿದ್ದಾಳೆ ಎಂದು ತಮ್ಮನ್ನು ತಾವು ಸಮಧಾನಪಡಿಸಿಕೊಳ್ಳುತ್ತಾರೆ.

ಜೊತೆಯಾಗಿ ಅನೇಕ ಕೆಲಸಗಳನ್ನು ಮಾಡುವ ಕನಸು ಕಂಡಿದ್ದೆವು, ಆದರೆ ಮದುವೆಯಾಗಿ ಒಂದುವರೆ ವರ್ಷ ಕಳೆಯುವ ಮೊದಲೇ ವಿಧಿ ನಮ್ಮ ಬದುಕಿನಲ್ಲಿ ಆಟವಾಡಿತು ಎಂದು ಪತ್ನಿಯ ಅಂತ್ಯ ಸಂಸ್ಕಾರದ ವೇಳೆ ಏಂಜೆಲೊ ಫರೀನಾ ತಮ್ಮ ದುಃಖವನ್ನು ತೋಡಿಕೊಳ್ಳುತ್ತಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 5:46 pm, Thu, 18 May 23