
ರೈಲು (Train) ಹತ್ತುವಾಗ ಜನರು ಅನೇಕ ತೊಂದರೆಗಳನ್ನು ಎದುರಿಸುಬವುದನ್ನು ನಾವು ನೋಡಿದ್ದೇವೆ. ಮುಂಬೈನ ಜೀವನವೇ ರೈಲು ಎಂದು ಹೇಳಲಾಗುತ್ತದೆ. ಇಲ್ಲಿ ಜನರು ಲೋಕಲ್ ರೈಲಿನಲ್ಲಿಯೇ ಹೆಚ್ಚು ಸಂಚರಿಸುವುದರೊಂದಿಗೆ ಅದನ್ನೆ ಅವಲಂಬಿಸಿದ್ದಾರೆ. ರೈಲಿನಲ್ಲಿ ಜನಸಂದಣಿಯಿಂದಾಗಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಮಹಿಳೆಯೊಬ್ಬರು ರೈಲಿನಿಂದ ಇಳಿಯಲು ಹೋಗಿ ಕಾಲು ಜಾರಿ ಪ್ಲಾಟ್ಫಾರ್ಮ್ ಮೇಲೆ ಬಿದ್ದಿದ್ದಾಳೆ. ಆಗ ಸ್ಥಳದಲ್ಲಿದ್ದ ಗೃಹ ರಕ್ಷಕ ಅಲ್ತಾಫ್ ಶೇಖ್ ಮಹಿಳೆಯನ್ನು ರಕ್ಷಿಸಿದ್ದು, ಭಾರೀ ಅನಾಹುತ ತಪ್ಪಿದೆ. ಚಲಿಸುತ್ತಿರುವ ರೈಲಿನಿಂದ ಓರ್ವ ಮಹಿಳೆ ಕೆಳಗಿದ ಬೆನ್ನಲ್ಲೇ ಮತ್ತಿಬ್ಬರೂ ಮಹಿಳೆಯರು ಜಿಗಿದಿದ್ದಾರೆ. ಅದೃಷ್ಟವತಾಶ್ ಅವರಿಬ್ಬರಿಗೆ ಯಾವುದೇ ರೀತಿಯ ಅಪಘಾತವಾಗಿಲ್ಲ.
ಗೃಹರಕ್ಷಕ ದಳದ ಜವಾನ ಮಹಿಳೆಗೆ ಹೇಗೆ ಸಹಾಯ ಮಾಡಿದ್ದಾನೆ ಎಂಬುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು. ಸಾಮಾಜಿಕ ಜಾಲತಾಣಗಳಲ್ಲೂ ಅಲ್ತಾಫ್ರನ್ನು ಜನ ಶ್ಲಾಘಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಮಹಾರಾಷ್ಟ್ರ ಪೊಲೀಸರು ಬಹುಮಾನ ನೀಡುತ್ತಿದ್ದಾರೆ. ಈ ವೀಡಿಯೋ ನೋಡಿದ ಜನರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.
ವೈರಲ್ ವಿಡಿಯೋವನ್ನು ಕೈಸರ್ ಖಾಲಿದ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಲ್ತಾಫ್ ಶೇಖ್ ತುಂಬಾ ಧೈರ್ಯದಿಂದ ಮಹಿಳೆಯ ಜೀವವನ್ನು ಉಳಿಸಿದ. ಅವರ ಧೈರ್ಯ, ಸಮರ್ಪಣಾ ಮನೋಭಾವವನ್ನು ಗಮನಿಸಿ ಸರ್ಕಾರದಿಂದ ಸನ್ಮಾನಿಸಿದೆ ಎಂದು ಬರೆದುಕೊಳ್ಳಲಾಗಿದೆ.
ಇದನ್ನೂ ಓದಿ;
ಪಿಎಸ್ ಐ ನೇಮಕಾತಿ ಹಗರಣದಲ್ಲಿ ಆರೋಪಿಯ ಮನೆಗೆ ಹೋಗಿದ್ದ ಗೃಹ ಸಚಿವರಿಗೆ ನೊಟೀಸ್ ನೀಡಿಲ್ಲ ಯಾಕೆ? ಡಿಕೆ ಶಿವಕುಮಾರ