Viral Video: ತನ್ನ ಒಡತಿಯ ಜನ್ಮದಿನಕ್ಕೆ ಚಪ್ಪಾಳೆ ತಟ್ಟಿ ಶುಭಾಶಯ ಹೇಳಿದ ಶ್ವಾನ; ಮುದ್ದಾದ ವಿಡಿಯೋ ಇಲ್ಲಿದೆ

Trending Video: ಪ್ರೀತಿಯಿಂದ ಸಾಕಿದ ಶ್ವಾನವೊಂದು ನಿಮ್ಮ ಹುಟ್ಟುಹಬ್ಬಕ್ಕೆ ಕೈತಟ್ಟಿ ಶುಭಾಶಯ ಸಲ್ಲಿಸಿದರೆ ಹೇಗಿದ್ದೀತು? ಅಂಥದ್ದೇ ಒಂದು ಅಪರೂಪದ ವಿಡಿಯೋ ಇಲ್ಲಿದೆ. ನೋಡಿ.

Viral Video: ತನ್ನ ಒಡತಿಯ ಜನ್ಮದಿನಕ್ಕೆ ಚಪ್ಪಾಳೆ ತಟ್ಟಿ ಶುಭಾಶಯ ಹೇಳಿದ ಶ್ವಾನ; ಮುದ್ದಾದ ವಿಡಿಯೋ ಇಲ್ಲಿದೆ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Edited By:

Updated on: Dec 17, 2021 | 3:44 PM

ಆನ್​ಲೈನ್​ನಲ್ಲಿ ವಿವಿಧ ಮಾದರಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಪ್ರಾಣಿಗಳಿರುವ ವಿಡಿಯೋಗಳೆಂದರೆ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಬಹಳಷ್ಟು ಜನ ತಾವು ಸಾಕಿದ ಸಾಕುಪ್ರಾಣಿಗಳ ಮುದ್ದಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ವಿಡಿಯೋಗಳು ಜನರಿಗೆ ನೋಡುಗರ ಮುಖದಲ್ಲಿ ನಗು ಮೂಡಿಸೋದು ಸುಳ್ಳಲ್ಲ. ಸದ್ಯ ಅಂತರ್ಜಾಲದಲ್ಲಿ ಮನೆಯಲ್ಲಿ ಸಾಕಿದ ಮುದ್ದಾದ ಶ್ವಾನವೊಂದರ ಪ್ರೀತಿ ಎಲ್ಲರ ಮನಸೆಳೆದಿದೆ. ವಿಡಿಯೋ ನೋಡಿದ ಜನರು ನಾಯಿಯ ಬುದ್ಧಿಮತ್ತೆಗೆ ಫಿದಾ ಆಗಿದ್ದಾರೆ. ಅಷ್ಟಕ್ಕೂ ಏನು ಸಮಾಚಾರ ಅಂತೀರಾ? ಮುಂದೆ ಓದಿ.

ಮನೆಯಲ್ಲಿ ಸಾಕಿದ ಶ್ವಾನವೊಂದು ತನ್ನ ಒಡತಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ. ಹೌದು. ಆ ಮಹಿಳೆಗೆ ನೆರೆದಿರುವ ಎಲ್ಲರೂ ಶುಭಾಶಯ ಹೇಳುತ್ತಿರುವಂತೆಯೇ ಶ್ವಾನ ಕೂಡ ಎದ್ದು ನಿಂತು ತನ್ನ ಮುಂದಿನ ಕಾಲುಗಳನ್ನು ತಟ್ಟಿ ಪ್ರೀತಿ ತೋರಿದೆ. ಅಷ್ಟೇ ಅಲ್ಲದೇ, ತನ್ನ ಒಡತಿಗೆ ಶುಭಾಶಯ ಹೇಳುವಂತೆ ಸಂಭ್ರಮದಲ್ಲಿ ಭಾಗಿಯಾಗಿದೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ದು, ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ಆಗಿರುವ ವಿಡಿಯೋ:

ಫೇಸ್​ಬುಕ್​ನಲ್ಲಿ ಆರುಣಿಮಾ ಎಂಬ ಖಾತೆಯಿಂದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ವೈರಲ್ ಆಗಿರುವ ಈ ವಿಡಿಯೋ ನೋಡಿ, ಪ್ರಾಣಿಪ್ರಿಯರು ಅಚ್ಚರಿ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ, ಆ ಶ್ವಾನದ ಬುದ್ಧಿ ಮತ್ತೆಗೆ ಶಹಬ್ಬಾಸ್ ಅಂದಿದ್ದಾರೆ.

ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ, ‘‘ಯಾರು ಹೇಳಿದ್ದು, ಅವನಿಗೆ ಚಪ್ಪಾಳೆ ತಟ್ಟಲು ಬರೋದಿಲ್ಲ ಅಂತಾ…’ ಎಂದು ಕ್ಯಾಪ್ಶನ್ ಬರೆಯಲಾಗಿದೆ. ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಸುಮಾರು ಇಪ್ಪತ್ತು ಸಾವಿರ ಇಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಸುಮಾರು ಇಷ್ಟೇ ಸಂಖ್ಯೆಯ ಜನರು ವಿಡಿಯೋವನ್ನು ಹಂಚಿಕೊಂಡು ಪ್ರೀತಿ ತೋರಿದ್ದಾರೆ. ಇದನ್ನು ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ:

ಸಿಂಹದಂತೆ ಘರ್ಜಿಸಿದ ರಾಯನ್​ ರಾಜ್​ ಸರ್ಜಾ; ಚಿರು ಪುತ್ರನ ವಿಡಿಯೋ ವೈರಲ್​

ಕಾಡುಕುರಿಯನ್ನು ಹೊಂಚು ಹಾಕಿ ಭೇಟೆಯಾಡಿದ ಚಿರತೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ

Published On - 3:43 pm, Fri, 17 December 21