
ಗಂಡು ಮಕ್ಕಳ ಜೀವನ ಹೇಳಿದ್ದಷ್ಟು ಸುಲಭ. ಎಷ್ಟೇ ಕಷ್ಟ ಆದ್ರೂ ಹೇಳಿಕೊಳ್ಳೋ ಆಗಿಲ್ಲ. ಜವಾಬ್ದಾರಿಗಳ ನಡುವೆ ಯಾರಿಗೂ ತೋರಿಸಿಕೊಳ್ಳದೇ ಸಹಿಸಿಕೊಂಡು ಹೋಗಬೇಕಷ್ಟೇ. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ಕೂಲಿ ಮಾಡುವ ಯುವಕನೊಬ್ಬ (young man) ಕದ್ದು ಮುಚ್ಚಿ ಊಟ ಮಾಡುತ್ತಿರುವ ದೃಶ್ಯವು ಕರುಳು ಹಿಂಡುವಂತಿದೆ. ಇದರ ಹಿಂದಿನ ಕಾರಣ ತಿಳಿದ್ರೆ ನಿಮ್ಮ ಕರುಳು ಚುರ್ ಅನ್ನುತ್ತೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ತುಂಬಿ ಬಂದಿದೆ.
ರುದ್ರ ಯಾಧವ್ (Rudra Yadav) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತನ್ನ ಬಡತನ ಮುಚ್ಚಿಡಲು ಯುವಕನೊಬ್ಬ ಮಾಡಿದ ಕೆಲಸವನ್ನು ಕಾಣಬಹುದು. ಕೂಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಹೊಟ್ಟೆ ಹಸಿವಿನಿಂದ ಊಟ ಮಾಡಲು ಮುಂದಾಗಿದ್ದಾನೆ. ಇದೇ ವೇಳೆ ಆತನ ಹತ್ತಿರ ಮಾಲೀಕನು ಬಂದಿದ್ದು, ಕೈಯಲ್ಲಿದ್ದ ಆಹಾರವನ್ನು ಮುಚ್ಚಿಟ್ಟಿದ್ದಾನೆ. ಓನರ್ ಏನು ತಿನ್ನುತ್ತಿದ್ದೀಯಾ, ತೋರಿಸು?, ಎಂದು ಕೇಳಿದ್ದಾರೆ. ತನ್ನ ಕೈಯಲ್ಲಿದ್ದ ಒಣ ರೊಟ್ಟಿ ಹಾಗೂ ಹಸಿ ಈರುಳ್ಳಿಯನ್ನು ತೋರಿಸಿ ಮುಖ ಸಣ್ಣಗೆ ಮಾಡಿದ್ದಾನೆ.
मर्दों की जिंदगी भी कितनी कठिन होती है💔
ये लड़का घर से दूर मजदूरी करने आया था। काम करते-करते जब उसे भूख लगी तो वह बैठकर खाना खाने लगा। तभी जब मालिक को अपनी तरफ आते देखा तो डरकर अपना खाना छुपा लिया।
मालिक ने जब खाना दिखाने को कहा, तो सामने सिर्फ प्याज और सुखी रोटी थी।
मर्द की… pic.twitter.com/0WaECpVzwO
— ʀᴜᴅʜʀᴀ ʏᴀᴅᴀᴠ🇮🇳 (@Rudhrayadav001) September 1, 2026
ಇದನ್ನೂ ಓದಿ: ಮನೆಗೆ ಬಂತು ಸ್ಮಾರ್ಟ್ ಟಿವಿ; ಡೆಲಿವರಿ ಬಾಯ್ ಕೆಲಸ ಮಾಡಿ ಅಮ್ಮನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮಗ
ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಜೀವನ ತುಂಬಾನೇ ಕಷ್ಟಕರ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡಿ ಕಣ್ಣು ತುಂಬಿ ಬಂತು ಎಂದು ಹೇಳಿದ್ದಾರೆ. ಮತ್ತೊಬ್ಬರು, ಜೀವನ ಅಂದ್ರೆ ಏನು ಎನ್ನುವುದು ಈ ವಿಡಿಯೋ ತೋರಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ