
ಬದುಕು (life) ಎಲ್ಲರದ್ದು ಒಂದೇ ರೀತಿ ಇರಲ್ಲ, ಬೇಕಾಬಿಟ್ಟಿ ದುಡ್ಡು ಖರ್ಚು ಮಾಡುವವರ ನಡುವೆ ಮೂರು ಹೊತ್ತಿನ ತುತ್ತಿಗಾಗಿ ಕಷ್ಟ ಪಟ್ಟು ದುಡಿಯುವ ವ್ಯಕ್ತಿಗಳನ್ನು ಕಂಡಾಗ ಕಣ್ಣಂಚಲಿ ನೀರು ಬರುತ್ತದೆ. ತಾನು ತನ್ನ ಊರಿಗೆ ಹೋಗಬೇಕು, ಆದರೆ ಬಸ್ ಟಿಕೆಟ್ ಮಾಡಿಸಲು ದುಡ್ಡಿಲ್ಲಎನ್ನುವ ವ್ಯಕ್ತಿಯ ಪಾಲಿಗೆ ಯುವಕನೊಬ್ಬ (young man) ದೇವರಾಗಿ ಬಂದಿದ್ದಾನೆ. ಬಸ್ ಟಿಕೆಟ್ ಮಾಡಿಸಿ ಬಸ್ಸು ಹತ್ತಿಸಿ ಅಪರಿಚಿತ ವ್ಯಕ್ತಿಯನ್ನು ಊರು ಸೇರಿಸಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ವ್ಯಕ್ತಿಯ ಒಳ್ಳೆತನವನ್ನು ಮೆಚ್ಚಿದ್ದಾರೆ.
ನವೀದ್ ಸ್ಟೋರಿ(naveedstory) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಯುವಕನ ಬಳಿ ಸಹಾಯಕ್ಕಾಗಿ ಅಂಗಲಾಚಿರುವುದನ್ನು ಕಾಣಬಹುದು. ಈ ಯುವಕನ ಬಳಿ ನನಗೆ ದುಡ್ಡು ಬೇಡ, ಬಸ್ಸು ಟಿಕೆಟ್ ಮಾಡಿಸಿ ಕೊಡಿ ನಾನು ಊರಿಗೆ ಹೋಗ್ತೇನೆ ಎಂದು ಕೇಳುತ್ತಿರುವುದನ್ನು ನೋಡಬಹುದು. ಈ ವ್ಯಕ್ತಿಗೆ ಸಹಾಯ ಮಾಡಲು ಮುಂದಾದ ಯುವಕನು ಹೋಟೆಲಿಗೆ ಕರೆದು ಕೊಂಡು ಹೋಗಿ ಹೊಟ್ಟೆ ತುಂಬಾ ತಿನ್ನಿಸಿ ಟಿಕೆಟ್ ಮಾಡಿಸಿ ಬಸ್ ಹತ್ತಿಸಿರುವುದನ್ನು ನೋಡಬಹುದು. ಬಸ್ ಹತ್ತಿದ ಬಳಿಕ ವ್ಯಕ್ತಿಯೂ ಕೈ ಮುಗಿದು ಯುವಕನಿಗೆ ಕೃತಜ್ಞತೆ ಸಲ್ಲಿಸಿರುವುದನ್ನು ಕಾಣಬಹುದು.
ಇದನ್ನೂ ಓದಿ: ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಛಲ, ಅಜ್ಜಿಯ ಕೈರುಚಿಗೆ ಗ್ರಾಹಕರು ಫಿದಾ
ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಿಮ್ಮನ್ನು ದೇವರು ಚೆನ್ನಾಗಿರಟ್ಟಿರಲಿ ಎಂದಿದ್ದಾರೆ. ಇನ್ನೊಬ್ಬರು, ಇಂತಹ ವ್ಯಕ್ತಿಗಳಿಗೆ ಸಪೋರ್ಟ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಮನಸ್ಸಿಗೆ ಸದಾ ಒಳ್ಳೆಯದಾಗ್ಲಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:31 am, Mon, 8 December 25