ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡೋದು ಹೊಸ ಟ್ರೆಂಡ್ ಆಗಿದೆ. ರೀಲ್ಸ್ ಹೆಸರಲ್ಲಿ ಯುವ ಸಮುದಾಯ ಮಾಡ್ತಿರೋ ಹುಚ್ಚಾಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಈಗಾಗಲೇ ಈ ರೀಲ್ಸ್ ಹುಚ್ಚಾಟಕ್ಕೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಬ್ಬ ರೀಲ್ಸ್ ಸಾಹಸಕ್ಕೆ ಬಿದ್ದು ಸ್ಕೂಟರ್ ನೊಂದಿಗೆ ಸಮುದ್ರಕ್ಕೆ ಇಳಿದಿದ್ದಾನೆ. ಹೌದು, ಯುವಕನೊಬ್ಬನು ದೊಡ್ಡ ಗಾತ್ರದ ಅಲೆಗಳು ಬರುತ್ತಿದ್ದರೂ ಸ್ಕೂಟರ್ ಜೊತೆಗೆ ನೀರಿಗೆ ಇಳಿಸಿದ್ದು, ಈ ವಿಡಿಯೋ ನೋಡಿದರೆ ಮೈ ಜುಮ್ಮ್ ಎನ್ನುತ್ತದೆ.
The Figen ಎನ್ನುವ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಗೂಗಲ್ ಮ್ಯಾಪ್ ನಂಬಿ ಹೋದರೆ ಹೀಗೆ ಆಗೋದು ಎಂದು ಬರೆದುಕೊಳ್ಳಲಾಗಿದೆ. ಆದರೆ ಈ ವೀಡಿಯೋವನ್ನು ಯಾವಾಗ ಹಾಗೂ ಎಲ್ಲಿ ಚಿತ್ರೀಕರಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೆ ವೈರಲ್ ಆಗಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ಯುವಕನು ಹೆಲ್ಮೆಟ್ ಹಾಕಿದ್ದು, ತನ್ನ ಸ್ಕೂಟರ್ ಅನ್ನು ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ.
ಇದನ್ನೂ ಓದಿ: ಹೋಟೆಲ್‌ಗಳಲ್ಲಿ ನಂ.13ರ ರೂಮ್ ಇರೋದಿಲ್ಲ ಯಾಕೆ? ಇದರ ಹಿಂದಿರುವ ಕಾರಣ ಏನ್ ಗೊತ್ತಾ?
When you pay attention to Google Maps.
— Figen (@TheFigen_) July 1, 2024
ಯುವಕ ಸಮುದ್ರದತ್ತ ಚಲಿಸುತ್ತಿದ್ದಾಗ ಮುಂಭಾಗದಿಂದ ದೈತ್ಯಾಕಾರದ ಅಲೆಗಳು ಬರುತ್ತಿದೆ. ಆದರೆ ಈತನು ಮಾತ್ರ ಯಾವುದಕ್ಕೂ ಭಯ ಪಡದೇ ಸ್ಕೂಟರನ್ನು ಮುಂದಕ್ಕೆ ಓಡಿಸುತ್ತಿದ್ದಾನೆ. ಕೊನೆಗೆ ದೊಡ್ಡದಾದ ಅಲೆ ಬಂದಿದ್ದು, ಸ್ಕೂಟರ್ ಅನ್ನು ಮತ್ತೆ ದಡದತ್ತ ತಿರುಗಿಸಿದ್ದಾನೆ. ಈ ವಿಡಿಯೋವು ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ಈತನ ವಿರುದ್ಧ ಗರಂ ಆಗುವ ಮೂಲಕ ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅದಲ್ಲದೇ ಈ ರೀತಿಯ ಸಾಹಸಕ್ಕೆ ಯಾರೂ ಕೈ ಹಾಕಬೇಡಿ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ