Viral Video : ಮುಂಬೈನ ಬೀದಿಯಲ್ಲಿ ಈ ಯುವಕ ಗಿಟಾರ್ ನುಡಿಸಿಕೊಂಡು ಕೇಸರಿಯಾ ಹಾಡುತ್ತಿದ್ದಾಗ ಪೊಲೀಸರು ನಿಂತು ಆಲಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ಮರೀನ್ ಡ್ರೈವ್ನಲ್ಲಿ ಚಿತ್ರೀಕರಿಸಲಾಗಿದೆ. ಸಂಗೀತದ ಶಕ್ತಿ ಅದ್ಭುತ ಎನ್ನುವುದು ಇದಕ್ಕೇ. ಯಾರು ಎಲ್ಲೇ ಇದ್ದರೂ ಅವರನ್ನು ಒಂದು ಕ್ಷಣವಾದರೂ ತನ್ನತ್ತ ಸೆಳೆದೇ ಸೆಳೆಯುತ್ತದೆ. ಡಿಸೆಂಬರ್ 19ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಅಂದಿನಿಂದ ಇಂದಿನವರೆಗೂ ಲಕ್ಷಾಂತರ ಜನರ ಮನಸೂರೆಗೊಂಡಿದೆ.
ಸಂಗೀತಕ್ಕೆ ಶಾಂತಗೊಳಿಸುವ ಶಕ್ತಿ ಇದೆ. ಇಡೀ ದಿನ ಸಂಗೀತ ಕೇಳುತ್ತಿದ್ದರೂ ಬೇಸರವೆನ್ನಿಸುವುದಿಲ್ಲ ಎಂದಿದ್ದಾರೆ ನೆಟ್ಟಿಗರೊಬ್ಬರು. ಸಂಗೀತಕ್ಕೆ ಯಾವುದೇ ಗಡಿಗಳ ಹಂಗಿಲ್ಲ ಎನ್ನುವುದು ಇದಕ್ಕೇ. ಅತ್ಯಂತ ಹೃದಯಸ್ಪರ್ಶಿಯಾಗಿದೆ ಈ ವಿಡಿಯೋ ಎಂದಿದ್ದಾರೆ ಇನ್ನೊಬ್ಬರು. ಎಲ್ಲರನ್ನೂ ಎಲ್ಲವನ್ನೂ ಇದು ಬೆಸೆಯುತ್ತದೆ ಎಂದಿದ್ದಾರೆ ಮತ್ತೊಬ್ಬರು.
ಹಾಡುವವರು ತಮ್ಮ ಪಾಡಿಗೆ ಹಾಡುತ್ತಲೇ ಇರುತ್ತಾರೆ. ಕೇಳುವವರು ಅವರಿದ್ದಲ್ಲಿಗೆ ಬಂದು ಕೇಳುತ್ತಿರುತ್ತಾರೆ. ಅಲ್ಲಿ ವರ್ಗಬೇಧವಿಲ್ಲ, ಭಾಷೆಯ ಹಂಗಿಲ್ಲ, ಜಾತಿಯ ಗೆರೆಗಳಿಲ್ಲ. ಸಂಗೀತ ಅಥವಾ ಕಲೆ ಎಂದಿಗೂ ವಿಶ್ವಮಾನ್ಯ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ