12 ವರ್ಷಗಳ ನಂತರ ತನ್ನ ಮನೆಗೆ ಬಂದ ಯುವಕ; ವಿಡಿಯೋ ವೈರಲ್

Reunion : ‘10 ವರ್ಷದವನಿದ್ದಾಗ ನನ್ನ ಅಮ್ಮ, ಅಜ್ಜಿ ಮತ್ತು ಸಂಬಂಧಿಕರನ್ನೆಲ್ಲ ನೋಡಿದ್ದಷ್ಟೇ. ಮತ್ತೀಗ ನಾನು ಅವರನ್ನು ಭೇಟಿಯಾಗಲು ಬರುವ ವಿಷಯವನ್ನು ಅವರಿಗೆ ಬೇಕೆಂದೇ ತಿಳಿಸಿರಲಿಲ್ಲ.’

12 ವರ್ಷಗಳ ನಂತರ ತನ್ನ ಮನೆಗೆ ಬಂದ ಯುವಕ; ವಿಡಿಯೋ ವೈರಲ್
ಹನ್ನೆರಡು ವರ್ಷಗಳ ನಂತರ ತನ್ನ ಮನೆಗೆ ಬಂದಾಗ
Edited By: ಶ್ರೀದೇವಿ ಕಳಸದ

Updated on: Dec 09, 2022 | 1:56 PM

Viral Video : ಮನೆಮಂದಿಯನ್ನೆಲ್ಲ ಬಿಟ್ಟು ಊರು, ರಾಜ್ಯ, ದೇಶ ಹೀಗೆ ಎಲ್ಲೆಂದರಲ್ಲಿ ವಲಸೆ ಹೋಗುವುದು ಅನಿವಾರ್ಯ. ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ ಏನೆಲ್ಲ ಕಳೆದುಕೊಳ್ಳಬೇಕು, ಏನೆಲ್ಲ ಸುತ್ತಬೇಕು ಏನೆಲ್ಲ ಪಡೆದುಕೊಳ್ಳಲೂಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. 12 ವರ್ಷಗಳ ನಂತರ ಈ ಯುವಕ ತನ್ನ ಮನೆಗೆ ಬಂದಿದ್ದಾನೆ. ಹೇಳದೇ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಇಡೀ ಬಿಲ್ಡಿಂಗ್​ನ ಮಂದಿಯೆಲ್ಲ ಈ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.

@varun_harpale ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವರುಣ ತನ್ನಸಂಬಂಧಿಕರನ್ನೆಲ್ಲ ನೋಡಿದ್ದು ಹತ್ತು ವರ್ಷದವರಿದ್ದಾಗ. ಆನಂತರ ಇದೀಗಲೇ ಅವರು ಎಲ್ಲರನ್ನೂ ಭೇಟಿಯಾಗುತ್ತಿರುವುದು. ‘ವಲಸೆಯ ವಿಷಯವಾಗಿ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ಹಾಗಾಗಿ ಭಾರತಕ್ಕೆ ಪ್ರಯಾಣಿಸಲು ನನಗೆ ಅವಕಾಶ ಸಿಕ್ಕಿರಲಿಲ್ಲ. ಅಂತೂ 12 ವರ್ಷಗಳ ನಂತರ ನನ್ನ ಕುಟುಂಬವನ್ನು ಭೇಟಿಯಾದೆ. ನನ್ನ ಭೇಟಿಯ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸದೆ ಎಲ್ಲರಿಗೂ ಸರ್​​ಪ್ರೈಝ್​ ನೀಡಲು ನಿರ್ಧರಿಸಿದೆ’ ಎಂಬ ನೋಟ್​ ಬರೆದು ವಿಡಿಯೋ ಅಪ್​ಲೋಡ್ ಮಾಡಿದ್ಧಾರೆ ವರುಣ್.

ವರುಣ ಆರಂಭದಲ್ಲಿ ತನ್ನ ಚಿಕ್ಕಮ್ಮ, ಸಹೋದರಿಯರನ್ನು ಭೇಟಿಯಾಗುತ್ತಾರೆ. ನಂತರ ತನ್ನ ಅಮ್ಮ, ಅಜ್ಜಿಯನ್ನು ಭೇಟಿಯಾಗುತ್ತಾರೆ. ಪ್ರತಿಯೊಬ್ಬರೂ ಹರ್ಷದಿಂದ ಕಣ್ಣೀರಾಗುತ್ತಾರೆ, ಭಾವುಕರಾಗುತ್ತಾರೆ. ಈ ವಿಡಿಯೋ ಅನ್ನು ಈಗಾಗಲೇ 81,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಲಕ್ಷಾಂತರ ಜನರು ನೋಡಿದ್ದಾರೆ.

ಇದನ್ನೂ ನೋಡಿ : ಮೈಸೂರಿನಲ್ಲಿ ರೂ. 4ಕ್ಕೆ 100 ಕೆ.ಜಿ ಈರುಳ್ಳಿ; ಯಶಸ್ವಿ ವ್ಯಾಪಾರ ಮುಗಿಸಿದ ಜರ್ಮನಿಯ ಜೆನ್ನಿಫರ್

ನೆಟ್ಟಿಗರು ಪ್ರತಿಯೊಬ್ಬ ಕುಟುಂಬ ಸದಸ್ಯರ ಮುಖಭಾವವನ್ನು ಗಮನಿಸಿ ಪ್ರತಿಕ್ರಿಯಿಸಿದ್ದಾರೆ. ಅಜ್ಜಿಯ ಮುಖದ ಮೇಲೆ ಎಷ್ಟೊಂದು ಸಂತೋಷವಿದೆ ಗಮನಿಸಿ ಎಂದಿದ್ದಾರೆ ಕೆಲವರು. ಈ ವಿಡಿಯೋ ಪರಿಶುದ್ಧ ಪ್ರೀತಿಗೆ ಉದಾಹರಣೆ ಎಂದಿದ್ದಾರೆ ಹಲವರು. ಎಲ್ಲರ ಕಣ್ಣುಗಳೇ ಸಾಕು ಅವರಲ್ಲಿ ಈ ಸಂದರ್ಭದಿಂದ ಪ್ರೀತಿ ಹೇಗೆ ಸ್ಫುರಣಗೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎಂದಿದ್ದಾರೆ ಒಬ್ಬರು. ಈ ಸುಂದರ ಕ್ಷಣಗಳನ್ನು ಆ ದೇವರು ಸದಾ ಹೀಗೇ ಹಿಡಿದಿಟ್ಟಿರಲಿ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us