Viral: ಎಂಗೇಜ್ಮೆಂಟ್ ಬಳಿಕ ಪ್ರಿಯಕರನಿಗೆ ಬೇರೊಬ್ಬಳ ಸಹವಾಸ; ಬ್ರೇಕಪ್ ಮಾಡ್ಕೊಂಡು ವಿಚಿತ್ರವಾಗಿ ಸೇಡು ತೀರಿಸಿಕೊಂಡ ಯುವತಿ

ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ಪ್ರೇಮಿ ತನಗೇನಾದರೂ ಮೋಸ ಮಾಡಿದ ಅಂತ ಗೊತ್ತಾದ್ರೆ ಒಂದ ಬ್ರೇಕಪ್ ಮಾಡಿಕೊಳ್ತಾರೆ ಇಲ್ಲಾಂದ್ರೆ ಅವರಿಗೆ ತಕ್ಕ ಪಕ್ಕ ಕಲಿಸ್ತಾರೆ. ಹೌದು ಎಂಗೇಜ್ಮೆಂಟ್ ಮಾಡಿಕೊಂಡ ವ್ಯಕ್ತಿಯೊಬ್ಬ ಬೇರೊಬ್ಬಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಈ ವಿಚಾರ ತಿಳಿದ ಯುವತಿಯೂ ಬ್ರೇಕಪ್ ಮಾಡಿಕೊಂಡು ಆತನ ತಂಗಿಯನ್ನೇ ಬಳಸಿಕೊಂಡು ಆ ವ್ಯಕ್ತಿ ಜೀವನಪರ್ಯಂತ ನೆನಪಿಟ್ಟುಕೊಳ್ಳುವಂತಹ ಪಾಠ ಕಲಿಸಿದ್ದಾಳೆ. ಈ ಕುರಿತಾದ ಸ್ಟೋರಿ ಸದ್ಯ ವೈರಲ್ ಆಗುತ್ತಿದೆ.

Viral: ಎಂಗೇಜ್ಮೆಂಟ್ ಬಳಿಕ ಪ್ರಿಯಕರನಿಗೆ ಬೇರೊಬ್ಬಳ ಸಹವಾಸ; ಬ್ರೇಕಪ್ ಮಾಡ್ಕೊಂಡು ವಿಚಿತ್ರವಾಗಿ ಸೇಡು ತೀರಿಸಿಕೊಂಡ ಯುವತಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 23, 2025 | 4:10 PM

ಇಂದಿನ ಕಾಲದಲ್ಲಿ ಪ್ರಾಮಾಣಿಕವಾದ ಪ್ರೀತಿ (love) ಕಾಣಸಿಗುವುದೇ ಕಡಿಮೆ. ಸಿಕ್ಕರೆ ಅವರಿಗಿಂತ ಅದೃಷ್ಟವಂತರು ಯಾರಿಲ್ಲ ಎಂದೇಳಬಹುದು. ಆದರೆ ಇನ್ನು ಕೆಲವರು ಸಣ್ಣಪುಟ್ಟ ಕಾರಣಗಳಿಗೆ ಬ್ರೇಕಪ್‌ ಮಾಡಿಕೊಂಡರೆ, ಇನ್ನೂ ಕೆಲವರು ಸಂಗಾತಿಗೆ ಮೋಸ ಮಾಡಿ ಇನ್ನೊಬ್ಬರ ಜೊತೆ ಸಂಬಂಧ (affair) ಇಟ್ಟುಕೊಂಡಿರುತ್ತಾರೆ. ಇಂತಹ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಇಲ್ಲೊಬ್ಬ ಯುವತಿಯದ್ದು ಇದೇ ಕಥೆ. ಯುವತಿಗೆ ತಾನು ಇಷ್ಟ ಪಟ್ಟ ವ್ಯಕ್ತಿಯ ಜೊತೆಗೆ ಎಂಗೇಜ್ಮೆಂಟ್ ಆಗಿದೆ. ಮದುವೆಗೆ ಇನ್ನೇನು ಸ್ವಲ್ಪ ಸಮಯ ಇರಬೇಕು ಆಗಲೇ ತನ್ನ ಅಸಲಿ ಮುಖ ತೋರಿಸಿದ್ದಾನೆ.  ಮದುವೆಗೆ ಆರು ತಿಂಗಳಿರುವಾಗಲೇ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಬೆಳೆಸಿದ್ದಾನೆ. ಈ ವಿಚಾರ ಯುವತಿಗೆ ತಿಳಿಯುತ್ತಿದ್ದಂತೆ ಆತನ ವಿರುದ್ಧ ಗರಂ ಆಗಿದ್ದು ಬ್ರೇಕಪ್‌ ಮಾಡಿಕೊಂಡಿದ್ದಾಳೆ. ಕೊನೆಗೆ ಈ ಯುವತಿ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಕೈಕೊಟ್ಟ ಪ್ರೇಮಿಗೆ ಬುದ್ಧಿ ಕಲಿಸಿದ ಯುವತಿ

ಯುವತಿಯೂ ಇಟ್ಸ್ ಎ ಗರ್ಲ್ ಥಿಂಗ್ ಪಾಡ್‌ಕ್ಯಾಸ್ಟ್‌ನಲ್ಲಿ ತನ್ನ ಜೀವನದ ಕಥೆಯನ್ನು ಬಹಿರಂಗ ಪಡಿಸಿದ್ದಾಳೆ. ಎಂಗೇಜ್ಮೆಂಟ್ ಆದ ಬಳಿಕ ಆ ವ್ಯಕ್ತಿಯೂ ಬೇರೊಬ್ಬಳ ಜೊತೆಗೆ ಸಂಬಂಧ ಬೆಳೆಸಿಕೊಂಡಿದ್ದಾನೆ. ಆಕೆಯೊಂದಿಗೆ ರಾತ್ರಿಗಳನ್ನು ಕಳೆದಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಆತನ ಮೇಲೆ ಇಟ್ಟಿದ್ದ ನಂಬಿಕೆಯೇ ಹಾಳಾಯಿತು. ಹೀಗಾಗಿ ಮದುವೆ ಕ್ಯಾನ್ಸಲ್ ಆಯ್ತು, ಆದರೆ ಆತನ ಬಗ್ಗೆ ದ್ವೇಷದ ಭಾವನೆ ಮೂಡಿತು, ಕೊನೆಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ತನ್ನ ಬೇಳೆ ಬೇಯಿಸಿಕೊಳ್ಳಲು ಮಾಜಿ ಪ್ರಿಯಕರನ ಸಹೋದರಿಯನ್ನೇ ಬಳಸಿಕೊಂಡಿದ್ದಾಗಿ ಹೇಳಿದ್ದಾಳೆ ಈ ಯುವತಿ.

ಹೌದು ಅಪರಿಚಿತ ನಂಬರ್‌ನಿಂದ ಕರೆ ಬಂದರೆ ಆಕೆಗೆ ನೆನಪಾಗುತ್ತಿದ್ದದ್ದು ಕೈ ಕೊಟ್ಟ ಮಾಜಿ ಪ್ರಿಯಕರ. ಕಿರಿಕಿರಿ ಉಂಟು ಮಾಡುವ ಜನರಿಗೆ ಆತನ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾಳೆ. ಈಕೆಯ ಈ ಪ್ಲ್ಯಾನ್ ಬಗ್ಗೆ ಆತನಿಗೆ ತಿಳಿದೇ ಇರಲಿಲ್ಲ. ಹೀಗಾಗಿ ಆ ವ್ಯಕ್ತಿಗೆ ಕರೆಗಳು ಮತ್ತು ಸಂದೇಶಗಳು ಬರುತ್ತಲೇ ಇತ್ತಂತೆ. ಒಂದಲ್ಲ ಎರಡಲ್ಲ ಎಂಟು ವರ್ಷಗಳ ಕಾಲ ಈ ರೀತಿಯೇ ಕರೆಯಲು ಬಂದಿದೆ.

ಇದನ್ನೂ ಓದಿ
ಫಿಲ್ಟರ್ ಕಾಫಿಯಿಂದ ಮದುವೆ ಪ್ರಸ್ತಾಪದವರೆಗೆ; ಈ ಯುವಕನ ಲವ್‌ ಸ್ಟೋರಿ ನೋಡಿ
92ನೇ ವಯಸ್ಸಿನಲ್ಲಿ 37ನೇ ವಯಸ್ಸಿನ ಪತ್ನಿಯಿಂದ ಗಂಡ ಮಗು ಪಡೆದ ವೈದ್ಯ
ಹೆಂಡ್ತಿ ಬಾಯ್ ಫ್ರೆಂಡ್ ಜೊತೆಯಲ್ಲಿರುವಾಗಲೇ ಪ್ರತ್ಯಕ್ಷನಾದ ಗಂಡ
ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು

ಇದನ್ನೂ ಓದಿ:ಫಿಲ್ಟರ್ ಕಾಫಿಯಿಂದ ಮದುವೆ ಪ್ರಸ್ತಾಪದವರೆಗೆ; ಇದು ಬೆಂಗಳೂರಿನ ಜಿಟಿಜಿಟಿ ಮಳೆಯಲ್ಲಿ ಚಿಗುರಿದ ಪ್ರೀತಿ

ಕೊನೆಗೆ ಎಂಟು ವರ್ಷಗಳಲ್ಲಿ  ಕಿರಿಕಿರಿ ತಾಳಲಾರದೇ ವ್ಯಕ್ತಿ ಎರಡು ಬಾರಿ ತನ್ನ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದಾನೆ. ಆದರೆ ತನ್ನ ಸಹೋದರ ಮೊಬೈಲ್ ನಂಬರ್ ಚೇಂಜ್ ಮಾಡಿದಾಗಲೂ ಆ ನಂಬರ್‌ನ್ನು ಸಹೋದರಿಯೂ ಈ ಯುವತಿಗೆ ನೀಡುತ್ತಿದ್ದು, ಇದೇ  ಯುವತಿಯ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದೆ. ಈ ಯುವತಿಯ ಸೇಡಿನ ಕಥೆಯೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಈ ಯುವತಿಯ ಬುದ್ಧಿವಂತಿಕೆ, ಚಾಣಕ್ಷತನವನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:09 pm, Thu, 23 October 25