AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪ್ರೀ ವೆಡ್ಡಿಂಗ್ ಶೂಟ್ ತಂದ ಆಪತ್ತು; ಹಿಮರಾಶಿಯ ನಡುವೆ  ಫೋಟೋಶೂಟ್, ಪಜೀತಿಗೆ ಸಿಲುಕಿದ ನಟಿ 

ಇತ್ತೀಚಿನ ದಿನಗಳಲ್ಲಿ ಜೋಡಿ ಹಕ್ಕಿಗಳು ಮ್ಯಾಚಿಂಗ್ ಮ್ಯಾಚಿಂಗ್ ವರ್ಣರಂಜಿತ ಉಡುಗೆ ತೊಟ್ಟು ಬೀಚ್ ನಲ್ಲಿಯೋ, ಅಥವಾ ತಮ್ಮ ನೆಚ್ಚಿನ ತಾಣಗಳಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ಟ್ರೆಂಡ್ ಹೆಚ್ಚಾಗಿದೆ. ಅದೇ ರೀತಿ ಇಲ್ಲೊಬ್ಬರು ಸೀರಿಯಲ್ ನಟಿ ತಮ್ಮ ಕನಸಿನ ತಾಣ ಸ್ಪಿತಿ ಕಣಿವೆಯಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಲು ಹೋಗಿ, ಪಜೀತಿಗೆ ಸಿಲುಕಿದ್ದಾರೆ.  ಪ್ರಾಣವನ್ನೇ ಪಣಕ್ಕಿಟ್ಟು ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿದ ಕಥೆಯನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Video: ಪ್ರೀ ವೆಡ್ಡಿಂಗ್ ಶೂಟ್ ತಂದ ಆಪತ್ತು; ಹಿಮರಾಶಿಯ ನಡುವೆ  ಫೋಟೋಶೂಟ್, ಪಜೀತಿಗೆ ಸಿಲುಕಿದ ನಟಿ 
ಮಾಲಾಶ್ರೀ ಅಂಚನ್​
| Edited By: |

Updated on: Mar 22, 2024 | 2:47 PM

Share

ಮದುವೆಗೂ ಮುನ್ನ ಫೋಟೋಶೂಟ್ ಮಾಡಿಸೋದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ನವ ಜೋಡಿಗಳು ಭಿನ್ನ ವಿಭಿನ್ನ ಥೀಮ್ ಗಳಲ್ಲಿ ಮ್ಯಾಚಿಂಗ್ ಮ್ಯಾಚಿಂಗ್ ವರ್ಣರಂಜಿತ ಉಡುಗೆ ತೊಟ್ಟು ಬೀಚ್ ನಲ್ಲಿಯೋ ಅಥವಾ ಪಾರ್ಕ್ ನಲ್ಲಿಯೋ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇನ್ನೂ ಕೆಲವು ಜೋಡಿಗಳು ತಮ್ಮ ಕನಸಿನ ತಾಣಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳುತ್ತಾರೆ. ಹೀಗೆ  ಫೋಟೋಶೂಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಂತಹ  ಸುದ್ದಿಗಳನ್ನು ಸಹ ನೀವು ಕೇಳಿರುತ್ತೀರಿ ಅಲ್ವಾ.  ಅದೇ ರೀತಿ ಇಲ್ಲೊಬ್ಬರು ನಟಿ ಕೂಡಾ ತಮ್ಮ ಕನಸಿನ ತಾಣವಾದ ಸ್ಪಿತಿ ಕಣಿವೆಯಲ್ಲಿ ಕೊರೆಯುವ ಚಳಿಯ ಮಧ್ಯೆ ಪ್ರೀ-ವೆಡ್ಡಿಂಗ್ ಶೂಟ್ ಮಾಡಲು ಹೋಗಿ ಪಜೀತಿಗೆ ಸಿಲುಕಿದ್ದಾರೆ. ಪ್ರಾಣವನ್ನೇ ಪಣಕ್ಕಿಟ್ಟು ಫೋಟೋಶೂಟ್ ಮಾಡಿಸಿದ ಕಥೆಯನ್ನು ನಟಿ  ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮೈನಸ್ 22 ಡಿಗ್ರಿ ತಾಪಮಾನದಲ್ಲಿ ಫೋಟೋಶೂಟ್:

ಕಿರುತೆರೆ ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್  ಆರ್ಯ ವೋರಾ  ಇತ್ತೀಚಿಗಷ್ಟೇ ತನ್ನ ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.   ಅಷ್ಟೇ ಅಲ್ಲದೆ ಮದುವೆಗೂ ಮುನ್ನ ತಮ್ಮ  ನೆಚ್ಚಿನ ತಾಣ ಸ್ಪಿತಿ ಕಣಿವೆಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಕೂಡಾ ಮಾಡಿಸಿಕೊಂಡಿದ್ದು, ಇಲ್ಲಿನ ವಿಪರೀತ ಚಳಿಗೆ  ಪ್ರಾಣವನ್ನೇ ಪಣಕ್ಕಿಟ್ಟು ಫೋಟೋಶೂಟ್ ಮಾಡಿಸಬೇಕಾಯಿತು ಎಂದು ನಟಿ ಹೇಳಿದ್ದಾರೆ.

ಹೌದು ಸ್ಪಿತಿ ಕಣಿವೆಯಲ್ಲಿ  ಮೈನಸ್ 22 ಡಿಗ್ರಿ ಸೆಲ್ಸಿಯಸ್ಸ್ ತಾಪಮಾನವಿದ್ದ ಕಾರಣ ಫೋಟೋಶೂಟ್ ವೇಳೆ ನಟಿಯ ದೇಹದ ಉಷ್ಣಾಂಶ ಸಂಪೂರ್ಣ  ಕಡಿಮೆಯಾಗಿ, ಹೈಪೋಥರ್ಮಿಯಾದಿಂದಾಗಿ ಅಸ್ವಸ್ಥಗೊಂಡ ಘಟನೆ  ನಡೆದಿದೆ. ಅದರಿಂದ ಬದುಕುಳಿದಿದ್ದೇ ಪವಾಡ ಎಂದು ಅವರು ಹೇಳಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ:

ಆರ್ಯ ವೋರಾ  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೊರೆಯುವ ಚಳಿಯ ನಡುವೆಯೂ ಸ್ಪಿತಿ ಕಣಿವೆಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿರುವ  ದೃಶ್ಯವನ್ನು ಕಾಣಬಹುದು. ಹವಾಮಾನಕ್ಕೆ ಅನುಗುಣವಾಗಿ  ಬೆಚ್ಚಗಿನ ಬಟ್ಟೆ ಧರಿಸದ ಕಾರಣ ಚಳಿಗೆ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟು,  ದೇಹದ ಉಷ್ಣಾಂಶ ಸಂಪೂರ್ಣ ಕಡಿಮೆಯಾಗಿ ಆರ್ಯ ಆರೋಗ್ಯ ಹದಗೆಡಲು ಆರಂಭಿಸುತ್ತೆ. ನಂತರ  ಅವರಗೆ ಬೆಚ್ಚಗಿನ ಕಂಬಳಿಯನ್ನು ಹೊದಿಸಿ ಆಮ್ಲಜನಕವನ್ನು ಸಹ ನೀಡಲಾಗಿದೆ.

ಇದನ್ನೂಓದ: ಬೇಕರಿಗೆ ಕನ್ನ ಹಾಕುವ ಮುನ್ನ ಕಳ್ಳನ ಸಖತ್ ಯೋಗ

ಒಂದು ವಾರದ  ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಒಂದು ಫೋಟೊ ಶೂಟ್ಗಾಗಿ ಪ್ರಾಣವನ್ನೇ ಪಣಕ್ಕಿಡುವುದು ಎಷ್ಟು ಸರಿʼ ಎಂದು ಕೇಳಿದ್ದಾರೆ. ಇನ್ನೂ ಅನೇಕರು ಇಷ್ಟು ರಿಸ್ಕ್ ತೆಗೆದುಕೊಂಡು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸೋ ಅವಶ್ಯಕತೆಯಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ