ತೂಕ ಇಳಿಸಿಕೊಂಡು ಸ್ಲಿಮ್ ಆಗಿ ಸಿನಿಮಾ ನಟಿಯರಂತೆ ಸುಂದರವಾಗಿ ಕಾಣಬೇಕೆಂಬುದು ಪತೀ ಯುವತಿಯರ ಕನಸು. ಈ ಕನಸು ಈಡೇರಿಸಲು ಯುವತಿಯರು ಸಾಕಷ್ಟು ಕಸರತ್ತು ಮಾಡುವುದುಂಟು. ಕೆಲವೊಬ್ಬರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಲಕ್ಷ ಲಕ್ಷ ಹಣ ಸುರಿದು ಸರ್ಜರಿಯನ್ನೂ ಮಾಡುತ್ತಾರೆ. ಇದೀಗ ಇಲ್ಲೊಬ್ಬಳು ಯುವತಿ ತೂಕ ಇಳಿಸಿಕೊಳ್ಳುವ ಕ್ರೇಜ್ಗೆ ಬಿದ್ದು ತನ್ನ ದೇಹವನ್ನು ಅಸ್ಥಿಪಂಜರದಂತಾಗಿಸಿದ್ದಾಳೆ.
ಚೀನಾದ ಗುವಾಂಗ್‌ಡಾಂಗ್‌ನಲ್ಲಿ ವಾಸಿಸುವ ಈ ಯುವತಿಯ ಹೆಸರು ಟಿಂಗ್ಜಿ(Tingzhi). ಈಕೆ ಈಗ ಕೇವಲ 25 ಕಿಲೋ ತೂಕವಿದ್ದಾಳೆ. ಸೋಶಿಯಲ್ ಮೀಡಿಯಾಗಲ್ಲಿ ಸಖತ್ ಆಕ್ಟೀವ್ ಆಗಿರುವ ಈ ಯುವತಿ ಇನ್ಸ್ಟಾಗ್ರಾಮ್ನಲ್ಲಿ 42 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾಳೆ. ಈಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳು ಸದ್ಯ ಎಲ್ಲೆಡೆ ಭಾರೀ ವೈರಲ್ ಆಗಿವೆ.
ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಗೆ ಮತ್ತೊಬ್ಬ ಗಾಯಕನ ಆಗಮನ; ಒಂದೇ ಹಾಡಿಗೆ 25ಕೋಟಿ ರೂ. ಸಂಭಾವನೆ
ಇಂಗ್ಲಿಷ್ ವೆಬ್‌ಸೈಟ್ ಆಡಿಟಿ ಸೆಂಟ್ರಲ್‌ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಈ ಯುವತಿ ತೆಳ್ಳಗಾಗುವ ಕ್ರೇಜ್‌ನಿಂದ ತನ್ನ ತೂಕವನ್ನು ಕಳೆದುಕೊಂಡಿದ್ದಾಳೆ. ಇಷ್ಟಕ್ಕೂ ಯುವತಿ ಈಗ ಕೇವಲ 25 ಕೆ.ಜಿ. ಆದರೆ ಈಗ ಯುವತಿ ನಡೆಯುವಾಗ ಎಲ್ಲಿಯಾದರೂ ಬಿದ್ದು ಮೂಳೆ ಮುರಿದು ಬೀಳುತ್ತದೋ ಭಾಸವಾಗುತ್ತಿದೆ. ಈಕೆಯ ವೀಡಿಯೋಗಳನ್ನು ನೋಡಿದ ನೆಟಿಜನ್‌ಗಳು ಆಕೆಗೆ ತೂಕ ಹೆಚ್ಚಿಸಿಕೊಳ್ಳಲು ಸಲಹೆ ನೀಡುತ್ತಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ