Wedding : ಸಮಾಜ ಕುಟುಂಬಕ್ಕಿಂತ ಮನಸಿನ ಮಾತು ಕೇಳುವ ಮನೋಭಾವ ಇಂದಿನ ಯುವಪೀಳಿಗೆಯದು ತಮ್ಮ ತಮ್ಮ ಆಸಕ್ತಿಗಳ ಮೂಲಕ ಬದುಕನ್ನು ರಸಮಯವಾಗಿಸಿಕೊಳ್ಳುವ ಜಾಣ್ಮೆ ತಾಳ್ಮೆ ಅವರಿಗಿದೆ. ಆ ಕಾರಣಕ್ಕಾಗಿಯೇ ಅವರು ಸಿದ್ಧ ಮಾದರಿಗಳನ್ನು ಹಂತಹಂತದಲ್ಲಿ ಒಡೆಯುತ್ತ ಹೆಚ್ಚೆಚ್ಚು ಸಾಹಸದೆಡೆ ತೆರೆದುಕೊಳ್ಳುತ್ತಿದ್ದಾರೆ. ತಮಗೂ ತಮ್ಮನ್ನು ಸುತ್ತುವರಿದ ಆಪ್ತರಿಗೂ ಖುಷಿ ಎನ್ನಿಸುವ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಮದುವೆ. ಎತ್ತರದ ಪರ್ವತದ ಮೇಲಿಂದ ಸ್ಕೈಡೈವ್ (Skydive) ಮಾಡುವ ಮೂಲಕ ಈ ಜೋಡಿ ತಮ್ಮ ಮದುವೆಯನ್ನು ನೋಡುಗರ ನೆನಪಿನಲ್ಲಿ ಉಳಿಯುವಂತೆ ಮತ್ತು ವಿಶೇಷವೆನ್ನಿಸುವಂತೆ ಆಚರಿಸಿಕೊಂಡಿದೆ.
ಮದುವೆ ಎಂದಾಗ ಅದೊಂದು ಶೃಂಗಾರಮಯ ವಾತಾವರಣದಿಂದ ಕೂಡಿದ ಸಮಾರಂಭ. ಆದರೆ ಈ ವಿಡಿಯೋದಲ್ಲಿ ನೀವು ನೋಡಿದ್ದು ಸಾಹಸಮಯ ಮತ್ತು ಸೃಜನಶೀಲ ವಾತಾವರಣದಲ್ಲಿ ನಡೆದ ಮದುವೆ. ಎತ್ತರದ ಬೆಟ್ಟದ ಮೇಲೆ ಮದುವೆಗೆ ಬಂದ ಅತಿಥಿಗಳು ನಿಂತಿದ್ದಾರೆ. ಮದುಮಕ್ಕಳು ಇಬ್ಬರು ಅತಿಥಿಗಳೊಂದಿಗೆ ಅಲ್ಲಿಂದ ಸ್ಕೈಡೈವ್ ಮಾಡುತ್ತಾರೆ.
ಇದನ್ನೂ ಓದಿ : Viral Video: ಜಪಾನ್; ನಾಗರಿಕ ಜಿಂಕೆಸಾರಂಗಗಳ ಅಪರೂಪದ ವಿಡಿಯೋ
ಧೈರ್ಯಶಾಲಿ ಜೋಡಿಯ ಹೆಸರು ಪ್ರಿಸಿಲ್ಲಾ ಆಂಟ್ ಮತ್ತು ಫಿಲಿಪ್ಪೋ ಲೆಕ್ವೆರ್ಸ್. ಇವರಿಬ್ಬರ ಈ ಸಾಹಸಮಯ ಮದುವೆಯ ವಿಡಿಯೋ ಅನ್ನು ಐದು ದಿನಗಳ ಹಿಂದೆ ಇನ್ಸ್ಟಾನಲ್ಲಿ ಪೋಸ್ಟ್ ಮಾಡಲಾಗಿದೆ. ಜಾಲತಾಣಿಗರು ಈ ವಿಡಿಯೋ ಅನ್ನು ಅಚ್ಚರಿಯಿಂದ ನೋಡಿ ಪ್ರತಿಕ್ರಿಯಿಸುತ್ತಿದ್ದಾರೆ. ಇವರ ಧೈರ್ಯ ಮತ್ತು ಸಾಹಸಕ್ಕೆ ನಿಜಕ್ಕೂ ಸಲಾಂ ಎನ್ನುತ್ತಿದ್ದಾರೆ. ಅತಿಥಿಗಳಿಗೂ ಇದು ನೆನಪಿನಲ್ಲಿ ಉಳಿಯುವಂಥ ಸಮಾರಂಭ ಎಂದಿದ್ದಾರೆ.
ಇದನ್ನೂ ಓದಿ : Viral Video: ವೈಪರ್ ವಿಥ್ ಸ್ಟಿಕರ್; ಈ ಕಾರ್ನಿಂದ ಅದೆಷ್ಟು ಅಪಘಾತಗಳಾಗಿವೆಯೋ
ನಿಜಕ್ಕೂ ನಾನಿದನ್ನು ಬಹಳ ಪ್ರೀತಿಸುತ್ತಿದ್ದೇನೆ. ನಾ ಕೂಡ ನನ್ನ ಮದುವೆಯನ್ನು ಹೀಗೆಯೇ ಮಾಡಿಕೊಳ್ಳಲು ಬಯಸುತ್ತೇನೆ ಆದರೆ ಏನು ಮಾಡುವುದು ನನಗೆ ನಿಮ್ಮಷ್ಟು ಧೈರ್ಯ ಇಲ್ಲ ಎಂದಿದ್ದಾರೆ ಒಬ್ಬರು. ನವಜೋಡಿಗೆ ಅಭಿನಂದನೆ, ನಿಮ್ಮ ಜೀವನ ಸಾಕಷ್ಟು ಸಾಹಸಮಯದಿಂದ ಕೂಡಿರುತ್ತದೆ ಎಂದಿದ್ದಾರೆ ಮತ್ತೊಬ್ಬರು. ಈ ವಿಡಿಯೋ ನೋಡಿಯೇ ನನಗೆ ಭಯವಾಯಿತು ಎಂದಿದ್ದಾರೆ ಇನ್ನೊಬ್ಬರು.
ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:38 am, Sat, 29 July 23