ಕೇವಲ ಒಂದು ವರ್ಷದ ಹಿಂದೆ ಸಯ್ಯದ್ ಅಹ್ಮದ್ ಶಾ ಸಾದತ್ ಅಫ್ಘಾನಿಸ್ತಾನದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದರು. ಸಂವಹನ ಮತ್ತು ಐಟಿ ಸಚಿವರಾಗಿದ್ದರು. ಬಳಿಕ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ 2020ರಲ್ಲಿ ತಮ್ಮ ದೇಶವನ್ನು ತೊರೆದು ಜರ್ಮಿನಿಗೆ ಹೋಗಿ ನೆಲೆಸಿದರು. ವರದಿಗಳ ಪ್ರಕಾರ ಸಾದತ್ ಅವರು ಇದೀಗ ಜರ್ಮನಿಯಲ್ಲಿ ಆಹಾರ ವಿತರಿಸುವ ಕೆಲಸಗಾರರಾಗಿ ಕೆಲಸ ನಿರ್ವಿಸುತ್ತಿದ್ದಾರೆ. ಜರ್ಮನಿಯ ಲೀಪ್ಜಿಗ್ ನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾದತ್ ಅವರು 2018ರಲ್ಲಿ ಅಫ್ಘಾನ್ ಸರ್ಕಾರದಲ್ಲಿ ಸಂವಹನ ಸಚಿವರಾಗಿದ್ದರು. ತಾಲಿಬಾನ್ ಸ್ವಾಧೀನಕ್ಕೂ ಮುಂಚೆಯೇ 2020ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಶ್ರಫ್ ಘನಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ದೇಶವನ್ನು ತೊರೆದು ಜರ್ಮಿನಿಯಲ್ಲಿ ನೆಲೆಸಿದರು. ಬಳಿಕ ಹಣದ ಕೊರತೆಯಿಂದಾಗಿ ಜೀವನೋಪಾಯಕ್ಕಾಗಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡಬೇಕಾಯಿತು. ಅವರು ಈಗ ಸೈಕಲ್ನಲ್ಲಿ ನಗರದಾದ್ಯಂತ ಓಡಾಡುತ್ತಾರೆ ಜತೆಗೆ ಆಹಾರವನ್ನು ಗ್ರಾಹಕರಿಗೆ ವಿತರಿಸುತ್ತಾರೆ.
Afghan minister now delivering pizza in #Germany
▪️#Afghanistan‘s former communications minister Sayed Ahmad Shah Saadat is now a driver for the Lieferando delivery service in Leipzig. pic.twitter.com/4SpQPHGrZm
— EHA News (@eha_news) August 22, 2021
Syed Ahmed Sadat, the former Afghan Minister of Communications and Technology, has taken up the profession of delivering food orders on a bicycle in Leipzig, Germany, where he arrived at the end of 2020 after resigning from his position. https://t.co/CtaFvRSTBa
— MyWorld (@kingofSomaliaa) August 24, 2021
ವರದಿಗಳ ಪ್ರಕಾರ ಮಾಜಿ ಅಪ್ಘನ್ ಸಚಿವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಸಂವಹನ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಈ ಹಿಂದೆ 13 ದೇಶಗಳ 20ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಪ್ರಸ್ತುತದಲ್ಲಿ ನಾನು ಸರಳವಾದ ಜೀವನವನ್ನು ನಡೆಸುತ್ತಿದ್ದೇನೆ. ನನ್ನ ಜೀವನ ಜರ್ಮನಿಯಲ್ಲಿ ಸುರಕ್ಷಿತವಾಗಿದೆ. ಲೀಪ್ಜಿಗ್ನಲ್ಲಿ ನನ್ನ ಕುಟುಂಬದೊಂದಿಗೆ ಇರುವುದು ನನಗೆ ಸಂತೋಷ ತಂದಿದೆ. ಜೀವನಕ್ಕಾಗಿ ಹಣವನ್ನು ಹೆಚ್ಚು ಉಳಿಸಲು ಮತ್ತು ಜರ್ಮನ್ ಕೋರ್ಸ್ ಮತ್ತು ಮುಂದೆ ಹೆಚ್ಚು ಅಧ್ಯಯನ ಮಾಡಲು ಬಯಸುತ್ತೇನೆ ಎಂದು ಸಾದತ್ ಹೇಳಿದ್ದಾರೆ.
ಇನ್ನೂ ಅನೇಕ ಉದ್ಯೋಗಗಳಿಗೆ ಅರ್ಜಿ ಹಾಕಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲಿಯವರೆಗೆ ಬಂದಿಲ್ಲ. ಜರ್ಮನ್ನ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುವುದು ನನ್ನ ಕನಸು ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಲು ಸಾದತ್ ನಿರಾಕರಿಸಿದ್ದಾರೆ. ಆದರೆ, ಅಶ್ರಫ್ ಘನಿ ಸರ್ಕಾರ ಇಷ್ಟು ಬೇಗ ಬೀಳುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸಿದ ವಿಶ್ವಬ್ಯಾಂಕ್; ತಾಲಿಬಾನಿಗಳಿಗೆ ಆರ್ಥಿಕ ದಿಗ್ಬಂಧನ
ಅಫ್ಘಾನಿಸ್ತಾನದಿಂದ ನಿನ್ನೆ ಬಂದ 16 ಜನರಿಗೆ ಕೊರೊನಾ ಸೋಂಕು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೂ ಆತಂಕ
Published On - 3:26 pm, Wed, 25 August 21