ಮಕ್ಕಳಿಗೆ ತಾಯಿನೇ ಎಲ್ಲಾ. ಈ ತಾಯಿ ನನ್ನೊಂದಿಗೆ ಇನ್ನು ಮುಂದೆ ಇರಲ್ಲ ಅನ್ನೋ ನೋವಿದೆಯಲ್ಲಾ, ಅದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ತಾಯಿ ಇಲ್ಲದ ಕ್ಷಣವನ್ನು ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ತಾಯಿಯನ್ನು ಕಳೆದುಕೊಂಡ ಬಳಿಕ ಯಾರೇ ಬಂದರೂ, ಎಷ್ಟೇ ಕೊಟ್ಟರೂ, ಏನೇ ಮಾಡಿದರೂ ಈ ಅಮ್ಮನ ಸ್ಥಾನವನ್ನು ತುಂಬುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಇದೀಗ ಅದೇ ರೀತಿ ತಾಯಿಯನ್ನು ಕಳೆದುಕೊಂಡು ಅಮ್ಮಾ ಬಾರಮ್ಮ ಎಂದು ರೋಧಿಸುತ್ತಿರುವ ಪುಟ್ಟ ಕಂದಮ್ಮನ ವಿಡಿಯೋವೊಂದು ವೈರಲ್ ಆಗಿದ್ದು, ಹೆತ್ತಮ್ಮನ ಹೆತ್ತಮ್ಮನ ಸಮಾಧಿ ಮುಂದೆ ಕುಳಿತು ಅಮ್ಮಾ….. ಓ ಅಮ್ಮಾ…. ಎಂದು ಆ ಪುಟಾಣಿ ಆಕ್ರಂದಿಸುವ ದೃಶ್ಯ ಕರುಳು ಹಿಂಡುವಂತಿದೆ.
ಈ ಕುರಿತ ಪೋಸ್ಟ್ ಒಂದನ್ನು ಯಶೋಧಾ ಪೂಜಾರಿ (yashodha_poojary_journalist) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಪುಟ್ಟ ಕಂದಮ್ಮ ತನ್ನ ತಾಯಿಯ ಸಮಾಧಿ ಮುಂದೆ ಕುಳಿತು ರೋಧಿಸುತ್ತಿರುವ ದೃಶ್ಯವನ್ನು ಕಾಣಬಹುದು. ತನ್ನ ತಾಯಿಯ ಮರಣದ ನಂತರ, ಈ ಚಿಕ್ಕ ಹುಡುಗ ಅಮ್ಮನ ಸಮಾಧಿಯ ಬಳಿ ಹೋಗಿ, ಪಕ್ಕದಲ್ಲಿಯೇ ಕುಳಿತು ಅಮ್ಮಾ….. ಓ ಅಮ್ಮಾ….. ಎಂದು ನಿರಂತರವಾಗಿ ಕರೆಯುತ್ತಾ ಸಮಾಧಿಯಿಂದ ಎದ್ದು ಬರುವಂತೆ ರೋಧಿಸಿದ್ದಾನೆ. ಈ ದೃಶ್ಯ ಎಂತಹ ಕಲ್ಲು ಹೃದಯವನ್ನು ಕೂಡಾ ಕರಗಿಸುವಂತಿದೆ.
ಇದನ್ನೂ ಓದಿ: ಬೈಕ್ ಚೈನ್ಗೆ ಸಿಲುಕಿದ ದುಪಟ್ಟಾ, ಯುವತಿಯ ರಕ್ಷಣೆಗೆ ಧಾವಿಸಿದ ವ್ಯಕ್ತಿ
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ನಾಲ್ಕುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 1 ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಈ ಮನಕಲಕುವ ದೃಶ್ಯವನ್ನು ಕಂಡು ನೋಡುಗರು ಮರುಕ ವ್ಯಕ್ತಪಡಿಸಿದ್ದಾರೆ.