Video: ಬೈಕ್ ಚೈನ್ಗೆ ಸಿಲುಕಿದ ದುಪಟ್ಟಾ, ಯುವತಿಯ ರಕ್ಷಣೆಗೆ ಧಾವಿಸಿದ ವ್ಯಕ್ತಿ
ಮಹಿಳೆಯರು ವಿಶೇಷವಾಗಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗ ಬಹಳ ಜಾಗರೂಕರಾಗಿರಬೇಕು. ಏಕೆಂದ್ರೆ ಕೆಲವೊಂದು ಬಾರಿ ದುಪಟ್ಟಾ ಅಥವಾ ಸೀರೆ ಸೆರಗು ಬೈಕ್ ಚೈನ್ ಅಥವಾ ಚಕ್ರಕ್ಕೆ ಸಿಲುಕಿ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆಡಿದ್ದು, ಬೈಕ್ ಚೈನ್ ಗೆ ದುಪಟ್ಟಾ ಸಿಲುಕಿದ ಪರಿಣಾಮ ಕುತ್ತಿಗೆ ಬಿಗಿಯಾಗಿ ಯುವತಿಯೊಬ್ಬಳು ಉಸಿರಾಡಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ತಕ್ಷಣ ವ್ಯಕ್ತಿಯೊಬ್ಬರು ಸಮಯ ಪ್ರಜ್ಞೆ ಮೆರೆದು ಆಕೆಯ ಪ್ರಾಣ ಕಾಪಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹಿಂದೂ ಮುಸ್ಲಿಂ ಎಂಬ ಸಂಘರ್ಷದ ನಡುವೆಯೂ ಕಷ್ಟ ಕಾಲದಲ್ಲಿ ಮುಸ್ಲಿಮರ ಸಹಾಯಕ್ಕೆ ಹಿಂದೂಗಳು ಧಾವಿಸುವ ಹಾಗೂ ಹಿಂದೂಗಳ ಕಷ್ಟಕ್ಕೆ ಮುಸ್ಲಿಮರು ಧಾವಿಸಿ ಮಾನವೀಯತೆ ಮೆರೆದ ಸುದ್ದಿಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ಬುಲೆಟ್ ಬೈಕ್ ಅಲ್ಲಿ ಪ್ರಯಾಣಿಸುತ್ತಿರುವ ವೇಳೆ ಆಕೆಯ ದುಪಟ್ಟಾ ಬೈಕ್ ಚೈನ್ ಗೆ ಸಿಲುಕಿದ ಪರಿಣಾಮ ಕುತ್ತಿಗೆ ಬಿಗಿಯಾಗಿ ಉಸಿರಾಡಲೂ ಆಗದೆ ಒದ್ದಾಡಿದ್ದಾಳೆ. ಆ ತಕ್ಷಣ ಮುಸ್ಲಿಂ ವ್ಯಕ್ತಿಯೊಬ್ಬರು ಆಕೆಯ ಸಹಾಯಕ್ಕೆ ಧಾವಿಸಿ ತನ್ನ ಸಮಯ ಪ್ರಜ್ಞೆಯಿಂದ ಯುವತಿಯ ಪ್ರಾಣ ರಕ್ಷಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕೆಲವೊಮ್ಮೆ ದುಪಟ್ಟಾ ಅಥವಾ ಸೀರೆ ಸೆರಗು ಬೈಕ್ ಚೈನ್ ಅಥವಾ ಚಕ್ರಕ್ಕೆ ಸಿಲುಕಿ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ಸಂಭವಿಸಿದ್ದು, ಬೈಕ್ ಚೈನ್ ಗೆ ದುಪಟ್ಟಾ ಸಿಲುಕಿದ ಪರಿಣಾಮ ಕುತ್ತಿಗೆ ಬಿಗಿಯಾಗಿ ಯುವತಿಯೊಬ್ಬಳು ಉಸಿರಾಡಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮುಸ್ಲಿಂ ವ್ಯಕ್ತಿಯೊಬ್ಬರು ಸಹಾಯಕ್ಕೆ ಧಾವಿಸಿ ಆಕೆಯ ಪ್ರಾಣ ರಕ್ಷಿಸಿದ್ದಾರೆ.
A hindu female biker dupatta got stuck in bike’s Chain, she was literally dying.
Out of nowhere, a Muslim man came to her rescue and saved her life.
This is india we grew up in, BJP IT cell won’t share this video
— Dr Nimo Yadav Commentary (@niiravmodi) August 21, 2024
ಈ ಕುರಿತ ಪೋಸ್ಟ್ ಒಂದನ್ನು Dr Nimo Yadav Commentary ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವೀಡಿಯೋದಲ್ಲಿ ಹಿಂದೂ ಯುವತಿಯೊಬ್ಬಳು ಬೈಕ್ ರೈಡ್ ಮಾಡುತ್ತಾ ಬರುತ್ತಿರುವ ವೇಳೆ ಆಕೆಯ ದುಪಟ್ಟಾ ಬೈಕ್ ಚೈನ್ ಗೆ ಸಿಕ್ಕಿಹಾಕಿಕೊಳ್ಳುವ ದೃಶ್ಯವನ್ನು ಕಾಣಬಹುದು. ಹೀಗೆ ದುಪಟ್ಟಾ ಸಿಕ್ಕಿಹಾಕಿಕೊಂಡ ಪರಿಣಾಮ ಆಕೆಯ ಕುತ್ತಿಗೆ ಬಿಗಿಯಾಗಿದ್ದು, ಉಸಿರಾಡಲು ಸಾಧ್ಯವಾಗದೆ ಯಾತನೆ ಅನುಭವಿಸಿದ್ದಾಳೆ. ತಕ್ಷಣ ಅಲ್ಲಿಗೆ ಬಂದ ಮುಸ್ಲಿಂ ವ್ಯಕ್ತಿ ತಮ್ಮ ಸಮಯ ಪ್ರಜ್ಞೆಯಿಂದ ಚೈನ್ ಅಲ್ಲಿ ಸಿಲುಕಿದ ದುಪಟ್ಟಾ ತೆಗೆದು ಯುವತಿಯ ಪ್ರಾಣ ರಕ್ಷಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಅತ್ಯುತ್ತಮ ವಿಸ್ಕಿ ಪ್ರಶಸ್ತಿಯನ್ನು ಗೆದ್ದ ಭಾರತದ ‘ಇಂದ್ರಿ’ ಸಿಂಗಲ್ ಮಾಲ್ಟ್ ವಿಸ್ಕಿ
ಆಗಸ್ಟ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಮಾನವೀಯತೆ ಎಲ್ಲಕ್ಕಿಂತ ಮುಖ್ಯ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಆ ವ್ಯಕ್ತಿಯ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ