Viral: ವಿಶ್ವದ ಅತ್ಯುತ್ತಮ ವಿಸ್ಕಿ ಪ್ರಶಸ್ತಿಯನ್ನು ಗೆದ್ದ ಭಾರತದ ‘ಇಂದ್ರಿ’ ಸಿಂಗಲ್ ಮಾಲ್ಟ್ ವಿಸ್ಕಿ

ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯು ಯು.ಎಸ್.ಎ ಸ್ಪಿರಿಟ್ಸ್ ರೇಟಿಂಗ್ಸ್‌ನಲ್ಲಿ 'ವರ್ಷದ ಅತ್ಯುತ್ತಮ ವಿಸ್ಕಿ' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿಶ್ವದ ಹಲವಾರು ಪ್ರತಿಷ್ಠಿತ ಬ್ರಾಂಡ್ ಗಳಿಗೆ ಟಕ್ಕರ್ ಕೊಟ್ಟು ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ಮಗದೊಮ್ಮೆ ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Viral: ವಿಶ್ವದ ಅತ್ಯುತ್ತಮ ವಿಸ್ಕಿ ಪ್ರಶಸ್ತಿಯನ್ನು ಗೆದ್ದ ಭಾರತದ 'ಇಂದ್ರಿ' ಸಿಂಗಲ್ ಮಾಲ್ಟ್ ವಿಸ್ಕಿ
ವೈರಲ್ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 22, 2024 | 5:22 PM

ಮೇಡ್ ಇನ್ ಇಂಡಿಯಾ ವಿಸ್ಕಿಯಾದ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಹರಿಯಾಣ ಮೂಲದ ಪಿಕ್ಕಾಡಿಲಿ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ ನ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ಯು. ಎಸ್.ಎ ಸ್ಪಿರಿಟ್ಸ್ ರೇಟಿಂಗ್ಸ್‌ನಲ್ಲಿ ‘ವರ್ಷದ ಅತ್ಯುತ್ತಮ ವಿಸ್ಕಿ’ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.

USA ಸ್ಪಿರಿಟ್ ರೇಟಿಂಗ್ ಅವಾರ್ಡ್ಸ್ 2024 ರಲ್ಲಿ ವಿಶ್ವದ ಪ್ರತಿಷ್ಠಿತ ಬ್ರಾಂಡ್ ಗಳಿಗೆ ಟಕ್ಕರ್ ಕೊಟ್ಟು ಇಂದ್ರಿ ಸಿಂಗಲ್ ಮಾಲ್ಟ್ ಇಂಡಿಯನ್ ವಿಸ್ಕಿ ಐದು ಪದಕಗಳೊಂದಿಗೆ ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಪ್ರಶಸ್ತಿ ಪಡೆದು ಐತಿಹಾಸಿಕ ವಿಜಯವನ್ನು ಸಾಧಿಸಿದೆ. ವಿಸ್ಕಿಗಳನ್ನು ಅವುಗಳ ಗುಣಮಟ್ಟ, ಮೌಲ್ಯ ಮತ್ತು ಪ್ಯಾಕೇಜಿಂಗ್‌ ಆಧಾರದ ಮೇಲೆ ಪ್ರಶಸ್ತಿಗಳನ್ನು ನೀಡಲಾಗಿದ್ದು ಅದರಲ್ಲಿ ಇಂದ್ರಿ ವಿಸ್ಕಿ ಮೊದಲ ಸ್ಥಾನವನ್ನು ಗಳಿಸಿದೆ. ಅಲ್ಲದೆ ಈ ವರ್ಷದ ಆರಂಭದಲ್ಲಿ ಟೋಕಿಯೊ ವಿಸ್ಕಿ ಮತ್ತು ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ಇಂದ್ರಿ ಚಿನ್ನದ ಪದಕವನ್ನು ಮತ್ತು ಜರ್ಮನಿಯಲ್ಲಿ ಮೈನಿಂಗರ್ ಇಂಟರ್ನ್ಯಾಷನಲ್ ಸ್ಪಿರಿಟ್ ಪ್ರಶಸ್ತಿಯನ್ನು ಸಹ ಗೆದ್ದಿದೆ.

ಈ ವಿಸ್ಕಿಯ ಬೆಲೆ ಎಷ್ಟು?

ಭಾರತದಲ್ಲಿ, ವಿವಿಧ ರಾಜ್ಯಗಳಲ್ಲಿ ವಿವಿಧ ಬೆಲೆಗಳಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಇಂದ್ರಿ ಸಿಂಗಲ್ ಮಾಲ್ಟ್ ಇಂಡಿಯನ್ ವಿಸ್ಕಿಯನ್ನು ಖರೀದಿಸಿದರೆ 3100 ರೂ. ಮತ್ತು ಮಹಾರಾಷ್ಟ್ರದಲ್ಲಿ ಖರೀದಿಸಿದರೆ ನಿಮಗೆ ಸುಮಾರು 5100 ರೂ. ಬೀಳಬಹುದು. ಪ್ರಸ್ತುತ ಈ ಮದ್ಯವು ಭಾರತದ 19 ರಾಜ್ಯಗಳು ಮತ್ತು ವಿಶ್ವದ 17 ದೇಶಗಳಲ್ಲಿ ಲಭ್ಯವಿದೆ. ಹೊರ ದೇಶದಲ್ಲಿ ಇದರ ಬೆಲೆ ಇದರ ಸುಮಾರು 85 ರಿಂದ 95 ಡಾಲರ್ ಅಂದ್ರೆ ಸುಮಾರು ರೂ 7000 ರಿಂದ ರೂ 8000 ರೂ.

ಇದನ್ನೂ ಓದಿ: ಒಬ್ಬ ಶಿಕ್ಷಕನನ್ನು ವಿದ್ಯಾರ್ಥಿಗಳು ಈ ಸ್ಥಿತಿಯಲ್ಲಿ ನಿಲ್ಲಿಸಬಾರದು, ಏನಾಗಿದೆ ಈ ಯುವಕರಿಗೆ?

ಈ ವಿಸ್ಕಿಯ ವಿಶೇಷತೆ ಏನೆಂದರೆ 2021 ರಲ್ಲಿ ಪ್ರಾರಂಭವಾದ ಈ ವಿಸ್ಕಿ ಅಲ್ಪಾವಧಿಯಲ್ಲೇ 14 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ