ಕುಡಿತದ ಚಟಕ್ಕೆ ದಾಸನಾದ ಗಂಡ ತನ್ನ ಹೆಂಡತಿಗೆ ದಿನನಿತ್ಯ ಕಿರುಕುಳ ನೀಡುವ, ಕುಡುಕ ಪತಿಯ ಪ್ರತಿನಿತ್ಯದ ಕಾಟದಿಂದ ಬೇಸತ್ತು ಹೆಂಡತಿ ತವರು ಮನೆ ಸೇರುವಂತಹ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸುವಂತಹ ಸುದ್ದಿಗಳ ಬಗ್ಗೆ ನೀವು ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಹೆಂಡತಿಯ ಕುಡಿತದ ಚಟದಿಂದ ಗಂಡನೊಬ್ಬ ಹೈರಾಣಾಗಿದ್ದಾನೆ. ಆಕೆ ಡ್ರಿಂಕ್ಸ್ ಮಾಡುವುದಲ್ಲದೆ ನನಗೂ ಕುಡಿಯುವಂತೆ ಒತ್ತಾಯಿಸುತ್ತಾಳೆ ಎಂದು ಗಂಭೀರ ಆರೋಪ ಮಾಡಿರುವ ಪತಿರಾಯ ಇದೀಗ ಪತ್ನಿಗೆ ಡಿವೋರ್ಸ್ ನೀಡಲು ಮುಂದಾಗಿದ್ದಾನೆ.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಯು ವಿಪರೀತವಾಗಿ ಕುಡಿಯುತ್ತಾಳೆ ಜೊತೆಗೆ ನನಗೂ ಡ್ರಿಂಕ್ಸ್ ಮಾಡುವಂತೆ ಒತ್ತಾಯಿಸುತ್ತಾಳೆ ಎಂದು ಆರೋಪಿಸಿದ್ದಾನೆ. ಹೌದು ಪತ್ನಿಯ ಈ ಕುಡಿತದ ಚಟದಿಂದ ಬೇಸತ್ತ ಪತಿರಾಯ ಆಕೆಯನ್ನು ತವರು ಮನೆಗೆ ಬಿಟ್ಟು ಬಂದಿದ್ದಾನೆ. ಇದೀಗ ಈ ಪರಿಸ್ಥಿತಿ ವಿಚ್ಛೇದನ ಹಂತಕ್ಕೆ ತಲುಪಿದೆ. ಇದರಿಂದ ಕುಪಿತಗೊಂಡ ಪತ್ನಿ ಪೊಲೀಸ್ ಠಾಣೆಗೆ ಆಗಮಿಸಿ ಪತಿಯ ವಿರುದ್ಧ ದೂರನ್ನು ನೀಡಿದ್ದಾಳೆ. ನಂತರ ಪೊಲೀಸರು ಜಗಳವನ್ನು ಬಗೆಹರಿಸಲು ಈ ಇಬ್ಬರನ್ನೂ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಟಾಯ್ಲೆಟ್ ಹೆಡೆ ಎತ್ತಿ ಕುಳಿತ ಹಾವು; ವಿಡಿಯೋ ವೈರಲ್
ಸಲಹಾ ಕೇಂದ್ರದಲ್ಲಿಯೂ ಗಂಡ ಹೆಂಡತಿಯರ ನಡುವೆ ವಾಗ್ವಾದ ನಡೆದಿದ್ದು, ಆಕೆ ಪ್ರತಿನಿತ್ಯ ಮೂರರಿಂದ ನಾಲ್ಕು ಪೆಗ್ ಕುಡಿತಾಳೆ, ಜೊತೆಗೆ ಕುಡಿಯುವಂತೆ ನನಗೂ ಪೀಡಿಸುತ್ತಾಳೆ. ಇದರಿಂದ ಬೇಸತ್ತು ನಾನು ಆಕೆಯನ್ನು ತವರು ಮನೆಗೆ ಬಿಟ್ಟು ಬಂದೆ ಎಂದು ಪತಿ ಆರೋಪಿಸಿದ್ದಾನೆ. ಪತಿಯ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿರುವ ಹೆಂಡತಿ, ಆತ ನನ್ನನ್ನು ಹೊಡೆದು ಮನೆಯಿಂದ ಹೊರ ದಬ್ಬಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಸದ್ಯ ದಂಪತಿಗಳ ನಡುವೆ ರಾಜಿ ಸಂಧಾನ ನಡೆಸಲು ಪ್ರಯತ್ನ ನಡೆಯುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Thu, 11 July 24