Viral Video: ಟಾಯ್ಲೆಟ್ ಬೇಸಿಸ್‌ನಲ್ಲಿ ಹೆಡೆ ಎತ್ತಿ ಕುಳಿತ ಹಾವು; ವಿಡಿಯೋ ವೈರಲ್
ಮನೆಗಳಿಗೆ ಹಾವು ನುಗ್ಗುವ ಸಂಗತಿಗಳನ್ನು ಆಗೊಮ್ಮೆ ಈಗೊಮ್ಮೆ ಕೇಳುತ್ತಲೇ ಇರುತ್ತವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದೆ. ಹೌದು ಇಲ್ಲೊಂದು ಹಾವು ಟಾಯ್ಲೆಟ್ ಬೇಸಿನ್‌ನಲ್ಲಿ ಹೆಡೆ ಎತ್ತಿ ಕುಳಿತಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಒಂದು ಕ್ಷಣ ಬೆಚ್ಚಿ ಬೀಳಿಸುವಂತಿದ್ದರೂ ಮರು ಕ್ಷಣ ನಗುವುಕ್ಕಿಸುವಂತಿದೆ.
ಹಾವುಗಳು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಹೊಸದೆನಲ್ಲ. ಹೀಗೆ ಬೆಚ್ಚನೆಯ ಸ್ಥಳವನ್ನರಸುತ್ತಾ ಬರುವ ಹಾವುಗಳು ಮನೆಯಲ್ಲಿ ನಿಲ್ಲಿಸಿದ ಸ್ಕೂಟರ್, ಪಾದರಕ್ಷೆ ಅಥವಾ ಶೂ ಒಳಗೆ ಅವಿತು ಕೂರುತ್ತವೆ. ಇಂತಹ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತವೆ. ಇದೀಗ ಅಂತಹದೇ ವಿಡಿಯೋವೊಂದು ವೈರಲ್ ಅಗಿದ್ದು, ದೈತ್ಯ ಗಾತ್ರದ ಹಾವೊಂದು ಟಾಯ್ಲೆಟ್ ಬೇಸಿನ್‌ನಲ್ಲಿಯೇ ಹೆಡೆ ಎತ್ತಿ ಕುಳಿತಿದೆ. ಈ ದೃಶ್ಯವನ್ನು ಕಂಡು ಅಬ್ಬಬ್ಬಾ ಇನ್ನು ಮುಂದೆ ಶೌಚಾಲಯಕ್ಕೆ ಹೋಗುವಾಗ ಜೋಪಾನವಾಗಿರ್ಬೇಕು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಅಶೋಕ್ ಕುಮಾರ್ (ashokshera94) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ದೈತ್ಯ ಹಾವೊಂದು ಟಾಯ್ಲೆಟ್ ಬೇಸಿನ್‌ನಲ್ಲಿ ಹೆಡೆ ಎತ್ತಿ ಕುಳಿತಿರುವ ಭಯಾನಕ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡು ಬಾಲ್ಯದಲ್ಲಿ ಶೌಚಾಲಯಕ್ಕೆ ಹೋಗುವಾಗ ಬೇಸಿನ್‌ನಿಂದ ಹಾವು ಬಂದ್ರೆ ಏನು ಮಾಡೋದು ಅಂತ ಭಯ ಪಡ್ತಿದ್ವಿ, ಈಗ ಈ ಭಯ ನಿಜವಾಗಿಬಿಟ್ಟಿದೆ. ಇನ್ನು ಮುಂದೆ ಟಾಯ್ಲೆಟ್‌ಗೆ ಹೋಗುವಾಗ ಜೋಪಾನವಾಗಿರ್ಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ: ಪ್ರೀತಿಗೆ ವಿರೋಧ; ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಂದ 15 ರ ಬಾಲಕ
ವೈರಲ್ ವಿಡಿಯೋ
View this post on Instagram
ಜೂನ್ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 18.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಯ್ಯೋ ಇನ್ನೊಂದು ಹೊಸ ಭಯ ಹುಟ್ಟಿಕೊಂಡಿತುʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಈ ದೃಶ್ಯ ತುಂಬಾ ಭಯಾನಕವಾಗಿದೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ