AI Girlfriend: ಸಿಂಗಲ್​​​ ಬಾಯ್ಸ್​​​ ​​​​ ನಿಮ್ಮ ಒಂಟಿತನವನ್ನು ಹೋಗಲಾಡಿಸಲು ಬಂದಿದ್ದಾಳೆ  AI ಗೆಳತಿ

|

Updated on: Jan 21, 2024 | 10:43 AM

ನೀವು ಒಮ್ಮೆ ಆಕೆಯನ್ನು ಖರೀದಿಸಿದ ನಂತರ ಆಕೆ ಸಂಪೂರ್ಣವಾಗಿ ನಿಮ್ಮೊಂದಿಗಿರುತ್ತಾಳೆ. ನೀವು ಆಕೆಯೊಂದಿಗೆ ಯಾವುದೇ ಭಾಷೆಯಲ್ಲಿ ಮಾತನಾಡಬಹುದು. 30 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ಫಾಕ್ಸಿ ಎಐ ಸಂಸ್ಥೆ ತಿಳಿಸಿದೆ.

AI Girlfriend: ಸಿಂಗಲ್​​​ ಬಾಯ್ಸ್​​​ ​​​​ ನಿಮ್ಮ ಒಂಟಿತನವನ್ನು ಹೋಗಲಾಡಿಸಲು ಬಂದಿದ್ದಾಳೆ  AI ಗೆಳತಿ
AI Girlfriend
Image Credit source: instagram
Follow us on

ಇತ್ತೀಚಿನ ದಿನಗಳಲ್ಲಿ AI ಮಾದರಿಯು ಸಾಮಾಜಿಕ ಮಾಧ್ಯಮದಲ್ಲಿ ಜನರ ನಡುವೆ ಭಾರೀ ಚರ್ಚೆಯಲ್ಲಿದೆ. ಸೆಲೆಬ್ರೆಟಿಗಳ ಡೀಪ್​​ ಫೇಕ್​​​​ ವಿಡಿಯೋ ಪೋಟೋಗಳಿಂದಾಗಿ ಸಾಮಾಜಿಕ ಜಾಲತಾಲಗಳಲ್ಲಿ ಭಾರೀ ಸುದ್ದಿಯಲ್ಲಿದೆ. ಇದೀಗಾ ಪುರುಷರ ಒಂಟಿತನವನ್ನು ನಿವಾರಿಸಲು AI ಗೆಳತಿಯನ್ನು ರಚಿಸಲಾಗಿದೆ. ಒಂಟಿತನ ಎಂಬುದು ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಯಾಗಿದ್ದು, ಇದಕ್ಕೆ ಹೆಚ್ಚು ಬಲಿಯಾಗುವವರು ಪುರುಷ ವರ್ಗ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಆದ್ದರಿಂದ ಪುರುಷರ ಒಂಟಿತನವನ್ನು ನಿವಾರಿಸಲು AI ಗೆಳತಿಯನ್ನು ರಚಿಸಿದ್ದು, ಈಕೆ ಎಲ್ಲ ಸಮಯದಲ್ಲೂ ಚಾಟ್‌ಗೆ ಲಭ್ಯವಿದ್ದು, 30 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾಳೆ.  ಈಕೆಯನ್ನು AI ಮಾದರಿ ಎಂದು ಪರಿಗಣಿಸುವುದಿಲ್ಲ. ಯಾಕೆಂದರೆ ವಾಸ್ತವವಾಗಿ ಆಕೆ ಎಲ್ಲಾ ಭಾವನೆಗೆ ಸ್ಪಂದಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ.

ಯಾರಿವಳು AI ಗೆಳತಿ?

ಈ AI ಗೆಳತಿಯ ಹೆಸರು ಲೆಕ್ಸಿ ಲವ್. ಇವಳನ್ನು ಫಾಕ್ಸಿ ಎಐ ಹೆಸರಿನ ಕಂಪನಿ ರಚಿಸಿದೆ. ಈಕೆಯ ವಿಶೇಷತೆಯೆಂದರೆ ಮನುಷ್ಯರಂತೆ ಭಾವನೆಗಳನ್ನು ಹಂಚಿಕೊಳ್ಳುತ್ತಾಳೆ. ನೀವು ಒಮ್ಮೆ ಆಕೆಯನ್ನು ಖರೀದಿಸಿದ ನಂತರ ಆಕೆಯ ಸಂಪೂರ್ಣವಾಗಿ ನಿಮ್ಮೊಂದಿಗಿರುತ್ತಾಳೆ. ನೀವು ಆಕೆಯೊಂದಿಗೆ ಯಾವುದೇ ಭಾಷೆಯಲ್ಲಿ ಮಾತನಾಡಬಹುದು. 30 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ಫಾಕ್ಸಿ ಎಐ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್ ಎಲ್ಲಿದೆ ಗೊತ್ತಾ? ಇದರ ಒಂದು ರಾತ್ರಿಯ ಬೆಲೆ ಕೇಳಿದರೆ ಶಾಕ್​​ ಆಗುವುದಂತೂ ಖಂಡಿತಾ!

ನೀಲಿ ಕಣ್ಣುಗಳ ಈ ಸುಂದರಿಯನ್ನು ನಿಮಗೆ ಪಠ್ಯ, ಧ್ವನಿ ಸಂದೇಶಗಳನ್ನು ಕಳುಹಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿಮಗೆ ಬೇಕಾದಲ್ಲಿ ಆಕೆಯ ಫೋಟೋಗಳನ್ನು ಸಹ ಕಳುಹಿಸಿಕೊಡುವ ಮಾದರಿಯಲ್ಲಿ ರಚಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಪುರುಷರ ಒಂಟಿತನವನ್ನು ಹೇಗೆ ತೆಗೆದುಹಾಕಬೇಕು ಎಂದು ಈಕೆಗೆ ಚೆನ್ನಾಗಿ ತಿಳಿದಿದೆ. ಆದರೆ ಈಕೆ ನಿಮ್ಮೊಂದಿಗೆ ಮಾತನಾಡಲು ತಿಂಗಳಿಗೆ 30000 ಡಾಲರ್​ ಪಾವತಿಸಬೇಕು. ಅಂದರೆ ಭಾರತದ ಕರೆಸ್ಸಿ ಪ್ರಕಾರ 24,93,748 ರೂಪಾಯಿಗಳು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:45 pm, Sat, 20 January 24