Burj-Al Arab: ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್ ಎಲ್ಲಿದೆ ಗೊತ್ತಾ? ಇದರ ಒಂದು ರಾತ್ರಿಯ ಬೆಲೆ ಕೇಳಿದರೆ ಶಾಕ್ ಆಗುವುದಂತೂ ಖಂಡಿತಾ!
ಪ್ರಪಂಚದಾದ್ಯಂತದ ಅತಿ ಎತ್ತರದ ಹಾಗೂ ಕೃತಕ ದ್ವೀಪಗಳನ್ನು ಒಳಗೊಂಡ ಹೋಟೆಲ್ ಇದಾಗಿದ್ದು, ಐಷಾರಾಮಿ ಸೌಕರ್ಯಗಳಿಗೆ ಹೆಸರುವಾಸಿಯಾಗಿದೆ. ಇದರ ಒಂದು ರಾತ್ರಿ ತಂಗುವ ಬೆಲೆ ಕೇಳಿದರೆ ಶಾಕ್ ಆಗುವುದಂತೂ ಖಂಡಿತಾ.
ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್(10-star hotel) ದುಬೈನಲ್ಲಿದೆ. ಈ ಹೋಟೆಲನ್ನು ಸುಮಾರು 8,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಹೋಟೆಲ್ ಕೃತಕ ದ್ವೀಪದಲ್ಲಿ ನೆಲೆಗೊಂಡಿರುವುದರಿಂದ ಸಾಕಷ್ಟು ಜನರು ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಕೋಟಿ ಕೋಟಿ ದುಡ್ಡು ಸುರಿದು ಇಲ್ಲಿನ ಭೇಟಿ ನೀಡುತ್ತಾರೆ. ಇದಲ್ಲದೇ ಇಲ್ಲಿನ ಐಷಾರಾಮಿ ಸೌಕರ್ಯದಿಂದಾಗಿ 10-ಸ್ಟಾರ್ಗಳನ್ನು ಇದು ಪಡೆದುಕೊಂಡಿದೆ. ಈ ಮೂಲಕ ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್ ಆಗಿ ಹೊರ ಹೊಮ್ಮಿದೆ.
ಬುರ್ಜ್-ಅಲ್ ಅರಬ್:
ಬುರ್ಜ್ ಅಲ್ ಅರಬ್ – ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್, ಅದು ದುಬೈನಲ್ಲಿದೆ. ಪ್ರಪಂಚದಾದ್ಯಂತದ ಅತಿ ಎತ್ತರದ ಹಾಗೂ ಕೃತಕ ದ್ವೀಪಗಳನ್ನು ಒಳಗೊಂಡ ಹೋಟೆಲ್ ಇದಾಗಿದ್ದು, ಐಷಾರಾಮಿ ಸೌಕರ್ಯಗಳಿಗೆ ಹೆಸರುವಾಸಿಯಾಗಿದೆ. ನೀವು ಒಂದು ರಾತ್ರಿ ತಂಗಲು ಸುಮಾರು 10 ಲಕ್ಷ ರೂ. ಪಾವತಿಸಬೇಕು.
ಇದನ್ನೂ ಓದಿ: ಕಾಗದದ ಚೀಲದಂತೆ ಕಾಣುವ ಈ ಬ್ಯಾಗಿನ ಬೆಲೆ 3 ಲಕ್ಷ ರೂ.; ಯಾಕಿಷ್ಟು ದುಬಾರಿ?
ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್:
ಅತಿಥಿಯಾಗಿ, ನೀವು ಹೆಲಿಕಾಪ್ಟರ್ ಮೂಲಕ ಅಥವಾ ರೋಲ್ಸ್ ರಾಯ್ಸ್‌ನಲ್ಲಿ ಹೋಟೆಲ್ ಆವರಣವನ್ನು ಪ್ರವೇಶಿಸಬಹುದು. ಕೊಠಡಿಗಳ ಒಳಗಿನ ಇತರ ಸೌಕರ್ಯಗಳು ವೈಫೈ, ರಿಯಾಕ್ಟರ್ ಸ್ಪೀಕರ್‌ಗಳು, HD ಟೆಲಿವಿಷನ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದ್ದು, ಎಲ್ಲವನ್ನೂ ಐಷಾರಾಮಿ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ