
ಹಿಂದೂ ಧರ್ಮದಲ್ಲಿ ಆದಿ ಶಕ್ತಿಯನ್ನು ಸ್ತ್ರೀತತ್ವದ ದೇವತೆಯಾಗಿ ಪೂಜಿಸಲಾಗುತ್ತದೆ. ನವರಾತ್ರಿಯ (Navaratri) ಸಂದರ್ಭ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದೇವಿಯೂ ಶಕ್ತಿ ಸ್ವರೂಪಿಯಾಗಿದ್ದು, ಸೃಷ್ಟಿ, ಸ್ಥಿತಿ ಹಾಗೂ ಲಯಕ್ಕೆ ಕಾರಣವಾದ ಶಕ್ತಿಯ ಪ್ರತೀಕವಾಗಿದ್ದಾಳೆ. ದೇವಿಯ ಶಕ್ತಿಯನ್ನು ಚಿತ್ರಿಸುವ ಐಗಿರಿ ನಂದಿನಿ ಹಾಡನ್ನು ಸುಂದರವಾಗಿ ಚಿತ್ರಿಸಲಾಗಿದ್ದು, ಈ ಸುಂದರ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಪೂಜಾ ಬಿಸ್ವಾಸ್ (@SPOOJA-97) ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಪ್ರತಿ ಹೆಜ್ಜೆಯಲ್ಲೂ ಶಕ್ತಿ, ಪ್ರತಿ ನಡೆಯಲ್ಲೂ ಭಕ್ತಿ. ಐಗಿರಿ ನಂದಿನಿ ಹಾಡು ದುರ್ಗಾ ಮಾತೆಯ ಶಕ್ತಿ, ಶಕ್ತಿ ಹಾಗೂ ದೈವಿಕ ಪ್ರಭಾವಲಯವನ್ನು ಸುಂದರವಾಗಿ ಚಿತ್ರಿಸುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಐಗಿರಿ ಹಾಡನ್ನು ಸುಂದರವಾಗಿ ಚಿತ್ರಿಸಲಾಗಿರುವುದನ್ನು ನೋಡಬಹುದು. ಹೌದು, ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ್ದು ಪ್ರತಿ ಹೆಜ್ಜೆಯಲ್ಲೂ ಶಕ್ತಿ ಹಾಗೂ ಪ್ರತಿ ಹಾಡಿನಲ್ಲೂ ಶಕ್ತಿಯೂ ಇದೆ.
Shakti in every step, devotion in every move! ❤️🔥
“Angir Nandini”, beautifully portraying the strength, energy, and divine aura of Maa Durga. pic.twitter.com/sxzHqVO7Df
— þððjå ßï§wå§ (@SP_OO_JA_97) September 26, 2025
ಇದನ್ನೂ ಓದಿ:Video: ದೇಶ ಸೇವೆಗೆ ಹೊರಟ ಮಗನ ಮುಂದೆ ಅಮ್ಮನ ಕಣ್ಣೀರು, ಕರುಳು ಚುರ್ ಎನ್ನುವ ದೃಶ್ಯ
ಈ ವಿಡಿಯೋ ಹತ್ತೊಂಬತ್ತು ಸಾವಿರಕ್ಕೂ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಪ್ರತಿ ಹೆಜ್ಜೆಯೂ ದುರ್ಗಾದೇವಿಯ ಶಕ್ತಿಯನ್ನು ಪ್ರತಿಧ್ವನಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಐಗಿರಿ ನಂದಿನಿ ಶಕ್ತಿ ಹಾಗೂ ಅನುಗ್ರಹದ ದರ್ಶನ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಜೈ ಮಾತಾ ದುರ್ಗಾ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 am, Sat, 27 September 25