Video: ಏನಮ್ಮ ನಿನ್ ಅವತಾರ; ಕುಂಭಮೇಳದ ಮೊನಾಲಿಸಾ ಡೀಪ್ ಫೇಕ್ ವಿಡಿಯೋ ಕಂಡು ಶಾಕ್ ಆದ ಜನ
ಮಹಾ ಕುಂಭಮೇಳದ ಸಮಯದಲ್ಲಿ ಸಖತ್ ಸುದ್ದಿಯಲ್ಲಿದ್ದ ವೈರಲ್ ಹುಡುಗಿ ಮೊನಾಲಿಸಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಆಕೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಂತಹ ಡೀಪ್ ಫೇಕ್ ವಿಡಿಯೋವೊಂದು ವೈರಲ್ ಆಗಿದ್ದು, ಇದನ್ನು ನಿಜ ಅನ್ಕೊಂಡ ಜನ ಇದೇನಿದು ಈಕೆಯ ಅವತಾರ ಇಷ್ಟೊಂದು ಬದಲಾಗಿದೆ, ದುಡ್ಡು ಬಂದ್ರೆ ಎಲ್ಲವೂ ಬದಲಾಗುತ್ತೆ ಅಂತ ಮಾತನಾಡಿಕೊಂಡಿದ್ದಾರೆ.

ಡೀಪ್ ಫೇಕ್ (Deepfake) ವಿಡಿಯೋಗಳು ಸೆಲೆಬ್ರಿಟಿಗಳನ್ನು ಬಿಟ್ಟು ಬಿಡದೆ ಕಾಡುತ್ತಿವೆ. ಕೆಲ ಖದೀಮರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಯಾರದ್ದೋ ದೇಹಕ್ಕೆ ನಟ ನಟಿಯರ ಮುಖವನ್ನು ಸೇರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿರುತ್ತಾರೆ. ಇದೀಗ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾಳ (Mona Lisa) ಡಿಪ್ ಫೇಕ್ ವಿಡಿಯೋ ಮಾಡಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಕುಂಭಮೇಳದ ವೈರಲ್ ಹುಡುಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಡಿಪ್ ಫೇಕ್ ವಿಡಿಯೋವನ್ನೇ ನಿಜ ಅಂದ್ಕೊಂಡ ಜನ, ಇದೇನಿದು ಈಕೆಯ ಅವತಾರ ಇಷ್ಟೊಂದು ಬದಲಾಗಿದೆ, ದುಡ್ಡು ಬಂದ್ರೆ ಎಲ್ಲವೂ ಬದಲಾಗುತ್ತೆ ಅಲ್ವಾ ಅಂತ ಕೋಪಗೊಂಡಿದ್ದಾರೆ.
ವೈರಲ್ ಆಯ್ತು ಮೊನಾಲಿಸಾ ಡೀಪ್ ಫೇಕ್ ವಿಡಿಯೋ:
ಮಹಾ ಕುಂಭಮೇಳದ ಸಮಯದಲ್ಲಿ ಸಖತ್ ಸುದ್ದಿಯಲ್ಲಿದ್ದ ಮೊನಾಲಿಸಾ ಬೋಂಸ್ಲೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಹೌದು ಇತ್ತೀಚಿಗೆ ಆಕೆ ಜನಪ್ರಿಯ ಬಾಲಿವುಡ್ ಹಾಡಿಗೆ ಬೋಲ್ಡ್ ಆಗಿ ನೃತ್ಯ ಮಾಡುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನಿಜ ಅನ್ಕೊಂಡ ಜನ ಹಣ ಎಲ್ಲವನ್ನೂ ಬದಲಾಯಿಸಿಬಿಡುತ್ತದೆ ಎಂದು ಟೀಕೆ ಮಾಡಿದ್ದಾರೆ. ಆದ್ರೆ ಇದೊಂದು ಡೀಪ್ ಫೇಕ್ ವಿಡಿಯೋ ಆಗಿದ್ದು, ಯಾರೋ ಕಿಡಿಗೇಡಿಗಳು ಯಾರದ್ದೋ ದೇಹಕ್ಕೆ ಮೊನಾಲಿಸಾ ಮುಖವನ್ನು ಸೇರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಈ ಕುರಿತ ವಿಡಿಯೋವನ್ನು ಸುನಂದಾ ರಾಯ್ (Sunanda Roy) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಡಿದ್ದು, “ಈಕೆ ಮಹಾ ಕುಂಭಮೇಳದ ಮೊನಾಲಿಸಾ… ಹಣ ಎಲ್ಲವನ್ನೂ ಬದಲಾಯಿಸುತ್ತೆ ಅಲ್ವಾ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
OMG!! She is Monalisa from Mahakumbh mela 🤯
Money can change everything 💀pic.twitter.com/p2vSP2miu7
— Sunanda Roy 👑 (@SaffronSunanda) September 25, 2025
ವೈರಲ್ ಆಗುತ್ತಿರುವ ಡೀಪ್ ಫೇಕ್ ವಿಡಿಯೋದಲ್ಲಿ ಮೊನಾಲಿಸಾ ಬಾಲಿವುಡ್ ಹಾಡಿಗೆ ಬೋಲ್ಡ್ ಆಗಿ ನೃತ್ಯ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿ ಬೋನೆಟ್ಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಜಿಗಿದ ಯುವಕ, ವಿಡಿಯೋ ವೈರಲ್
ಸೆಪ್ಟೆಂಬರ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜ ಅಲ್ಲ ಡೀಪ್ ಫೇಕ್ ವಿಡಿಯೋʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಆಕೆಯ ನಿಜ ಅವತಾರವಲ್ಲ, ಯಾರೋ ಎಡಿಟ್ ಮಾಡಿ ಹಾಕಿದ್ದುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ತಂತ್ರಜ್ಞಾನದಿಂದ ಇನ್ನೂ ಏನೆಲ್ಲಾ ಆಗೋದಕ್ಕಿದೆಯೋʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








