Viral Video: ಈ ತರ ವಿಮಾನ ಲ್ಯಾಂಡಿಂಗ್ ನೀವು ಎಂದೂ ನೋಡಿರಲ್ಲಾ; ವಿಡಿಯೋ ವೈರಲ್​​

|

Updated on: Jan 30, 2024 | 12:33 PM

ಈ ವೀಡಿಯೊದಲ್ಲಿ ವಿಮಾನವು ಜನರ ಕೈಗೆ ಎಟಕುವಂತೆ ಹಾರಾಡುವುದು ಕಾಣಬಹುದು. ಅಷ್ಟು ಹತ್ತಿರದಿಂದ ಇಳಿಯುವುದನ್ನು ನೋಡುವುದೇ ಒಂದು ಅದ್ಭುತ.ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ವಿಡಿಯೋ ಹಂಚಿಕೊಂಡ ಎರಡನೇ ದಿನದಲ್ಲಿ ಮಿಲಿಯನ್​​​ ವೀಕ್ಷಣೆ ಪಡೆದುಕೊಂಡಿದೆ.

Viral Video: ಈ ತರ ವಿಮಾನ ಲ್ಯಾಂಡಿಂಗ್ ನೀವು ಎಂದೂ ನೋಡಿರಲ್ಲಾ; ವಿಡಿಯೋ ವೈರಲ್​​
Airplane landing
Image Credit source: Twitter
Follow us on

ಫ್ಲೈಟ್‌ ಲ್ಯಾಂಡಿಂಗ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ವೀಡಿಯೊದಲ್ಲಿ ವಿಮಾನವು ಜನರ ಕೈಗೆ ಎಟಕುವ ಎತ್ತರದಲ್ಲಿ ಬಂದು ಲ್ಯಾಂಡಿಂಗ್​​​ ಆಗಿರುವುದನ್ನು ಕಾಣಬಹುದು. ಅಷ್ಟು ಹತ್ತಿರದಿಂದ ಇಳಿಯುವುದನ್ನು ನೋಡುವುದೇ ಒಂದು ಅದ್ಭುತ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ವಿಡಿಯೋ ಹಂಚಿಕೊಂಡ ಎರಡನೇ ದಿನದಲ್ಲಿ ಮಿಲಿಯನ್​​​ ವೀಕ್ಷಣೆ ಪಡೆದುಕೊಂಡಿದೆ.

ಈ ಅಚ್ಚರಿಯ ವೀಡಿಯೊವನ್ನು @ThebestFigen ಹೆಸರಿನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜನವರಿ 28ರಂದು ಈ ವಿಡಿಯೋವನ್ನು ಪೋಸ್ಟ್​​ ಮಾಡಲಾಗಿದ್ದು, ಕೇವಲ ಎರಡು ದಿನಗಳಲ್ಲಿ 18 ಮಿಲಿಯನ್​​ಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 92 ಸಾವಿರಕ್ಕೂ ಅಧಿಕ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀರಾಮ ದೇವಾಲಯದ ಎದುರಿನ ಶಿವಲಿಂಗದ ಮೇಲೆ ನಾಗರಹಾವು ಪ್ರತ್ಯಕ್ಷ; ವಿಡಿಯೋ ಇಲ್ಲಿದೆ 

ಅದೇ ಸಮಯದಲ್ಲಿ, ವೀಡಿಯೊವನ್ನು ನೋಡಿದ ನಂತರ, ಜನರು ವಿವಿಧ ರೀತಿಯ ಕಾಮೆಂಟ್ಗಳನ್ನು ಸಹ ಮಾಡಿದ್ದಾರೆ. ‘ಈ ದೃಶ್ಯವು ಸೇಂಟ್ ಮಾರ್ಟನ್‌ನ ಮಹೋ ಬೀಚ್‌ನಿಂದ ಬಂದಿದೆ’ ಎಂದು ನೆಟ್ಟಿಗರೊಬ್ಬರು ಹೇಳುತ್ತಿದ್ದರೆ, ‘ಈ ವಿಡಿಯೋ ನಕಲಿ’ ಎಂದು ಮತ್ತೊಬ್ಬರು ಹೇಳಿದ್ದಾರೆ. ವಿಮಾನದ ಈ ಲ್ಯಾಂಡಿಂಗ್ ನಿಜವ್ ಎಂದು ಸಾಕಷ್ಟು ಜನರು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:30 pm, Tue, 30 January 24