
ಅಮೇರಿಕಾ : ಮೇ 25: ದಿನಸಿ, ತರಕಾರಿ ಕೊಳ್ಳಲು ಅಂಗಡಿ ಮಾರುಕಟ್ಟೆಗೆ ತೆರಳುವಾಗ ಬಟ್ಟೆಯ ಚೀಲ (cloth bag) ಒಯ್ಯುವುದು ಸಹಜ. ಇಲ್ಲದಿದ್ದರೆ ನೀವೇನಾದ್ರು ದೊಡ್ಡ ಪ್ರಮಾಣದಲ್ಲಿ ದಿನಸಿಗಳನ್ನು ಖರೀದಿಸಿದ್ರೆ ಅಂಗಡಿಯವರೇ ಬಟ್ಟೆಯ ಬ್ಯಾಗ್ ನಿಮಗೆ ನೀಡುತ್ತಾರೆ. ಕೆಲವರ ಮನೆಯಲ್ಲಿ ರಾಶಿ ರಾಶಿ ಬಟ್ಟೆ ಚೀಲಗಳಿರುತ್ತವೆ. ಹೀಗಾಗಿ ಈ ಬಟ್ಟೆ ಚೀಲ ಖರೀದಿಸಲು ಭಾರತೀಯರು ಹೆಚ್ಚು ಹಣವನ್ನಂತೂ ಖರ್ಚು ಮಾಡುವುದೇ ಇಲ್ಲ. ಭಾರತೀಯರು ಬಳಸುವ ಈ ಬಟ್ಟೆ ಚೀಲವು ವಿದೇಶದಲ್ಲಿ ಬಹಳ ದುಬಾರಿಯಾಗಿದೆಯಂತೆ. ಅಮೆರಿಕಾ (America) ದ ಅಂಗಡಿಯಾದ ನಾರ್ಡ್‌ಸ್ಟ್ರೋಮ್ (Nordstrom) ನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
@pitdeshi ಹೆಸರಿನ ಖಾತೆಯಲ್ಲಿ ಬ್ಯಾಗ್ ನ ಸ್ಕ್ರೀನ್ ಶಾರ್ಟ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಭಾರತೀಯ ಬಟ್ಟೆ ಚೀಲವು ವಿದೇಶದಲ್ಲಿ ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ನಮ್ಮ ದೇಶದಲ್ಲಿ ಉಚಿತವಾಗಿ ಲಭ್ಯವಿರುವ ಬಟ್ಟೆ ಬ್ಯಾಗನ್ನು ಅಮೇರಿಕಾದಲ್ಲಿ 4100 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ :ಊಟ ಮಾಡ್ಕೊಂಡು ಬರ್ತೇವೆ, ವಧುವಿನ ಕೈಗೆ ಮಗು ಕೊಟ್ಟು ಹೋದ ಕಿಲಾಡಿ ಜೋಡಿ
LOL – This is the take-home bag of a snack shop in my hometown in India.
for sale for $48 at Nordstrom pic.twitter.com/GNm9CJlfmZ
— Sheel Mohnot (@pitdesi) May 21, 2025
ಈ ಪೋಸ್ಟ್ ವೊಂದು ಎರಡು ಲಕ್ಷ ಎಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದು ಕೊಂಡಿದ್ದು, ಇದರ ದುಬಾರಿ ಬೆಲೆ ಭಾರತೀಯ ಗ್ರಾಹಕರಲ್ಲಿ ಚರ್ಚೆಗೆ ಕಾರಣವಾಗಿದ್ದು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ಭಾರತದಲ್ಲಿ ಇದರ ಬೆಲೆ ನೂರು ರೂಪಾಯಿಗಿಂತಲೂ ಕಡಿಮೆಯಾಗಿದೆ. ಅತ್ಯಂತ ಕಡಿಮೆ ಬೆಲೆಗೆ ಇದಕ್ಕಿಂತ ದೊಡ್ಡ ಬ್ಯಾಗ್ ಕೂಡ ಸಿಗುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಅಮೇರಿಕಾದವರೇ, ಇಂತಹ ವಿಷಯದಲ್ಲಿ ನೀವು ತುಂಬಾನೆ ಹಿಂದೆ ಉಳ್ದಿದಿದ್ದೀರಿ ಎಂದು ವ್ಯಂಗ್ಯವಾಗಿಯೇ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಕೋಲ್ಕತ್ತದ ಅಂಗಡಿಯಲ್ಲಿ ನಾನು ಕೇವಲ 10 ರೂಪಾಯಿ ಈ ಬ್ಯಾಗ್ ಕೊಂಡುಕೊಂಡೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ