Viral: ನಾನು ಶುಕ್ರ ದೇವತೆ; ಸಂಪೂರ್ಣ ನಗ್ನಳಾಗಿ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಸೃಷ್ಟಿಸಿದ ಮಹಿಳೆ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಬೆಚ್ಚಿ ಬೀಳಿಸುವಂತಿರುತ್ತವೆ. ಅಂತಹದ್ದೊಂದು ಶಾಕಿಂಗ್‌ ವಿಡಿಯೋ ಇದೀಗ ವೈರಲ್‌ ಆಗಿದ್ದು, ಓರ್ವ ಮಹಿಳೆ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಬೆತ್ತಲಾಗಿ ರಾದ್ಧಾಂತ ಸೃಷ್ಟಿಸಿದ್ದಾಳೆ. ನಾನು ಶುಕ್ರ ದೇವತೆ ಎಂದು ಚೀರಾಡುತ್ತಾ ನೀರೆರಚಿ, ನಿಂದಿಸುತ್ತಾ ಆಕೆ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾಳೆ.

Viral: ನಾನು ಶುಕ್ರ ದೇವತೆ; ಸಂಪೂರ್ಣ ನಗ್ನಳಾಗಿ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಸೃಷ್ಟಿಸಿದ ಮಹಿಳೆ
ಸಾಂದರ್ಭಿಕ ಚಿತ್ರ
Edited By:

Updated on: Mar 28, 2025 | 3:46 PM

ಅಮೆರಿಕ : ಸಾರ್ವಜನಿಕ ಸ್ಥಳಗಳಲ್ಲಿ (Public Space) ಒಂದಷ್ಟು ಜನ ಅವಾಂತರಗಳನ್ನು ಸೃಷ್ಟಿಸುವ ಮೂಲಕ ಇತರರಿಗೂ ತೊಂದರೆಯನ್ನು ಉಂಟುಮಾಡುವಂತಹ ಘಟನೆಗಳಿಗೆ ಸಂಬಂಧಿಸಿದ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದೇ ಆಘಾತಕಾರಿ ಘಟನೆ ನಡೆದಿದ್ದು, ಓರ್ವ ಮಹಿಳೆ ಪೂರ್ಣ ನಗ್ನಳಾಗಿ (naked) ವಿಮಾನ ನಿಲ್ದಾಣದಲ್ಲಿ (Airport) ರಾದ್ಧಾಂತ ಸೃಷ್ಟಿಸಿದ್ದಾಳೆ. ಹೌದು ಬೆತ್ತಲಾಗಿ ನಾನು ಶುಕ್ರ ದೇವತೆ (Goddess Venus) ಎಂದು ಚೀರಾಡುತ್ತಾ, ಎಲ್ಲರ ಮೇಲೆ ನೀರೆರಚುತ್ತಾ ಅಸಭ್ಯ ವರ್ತನೆಯನ್ನು ತೋರಿದ್ದಾಳೆ. ಅಷ್ಟೇ ಅಲ್ಲದೆ ಆಕೆಯನ್ನು ನಿಯಂತ್ರಿಸಲು ಬಂದ ಭದ್ರತಾ ಸಿಬ್ಬಂದಿಗಳ ಮೇಲೆ ಆಕೆ ಹಲ್ಲೆ ನಡೆಸಿದ್ದು, ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಮೆರಿಕದ ಟೆಕ್ಸಾಸ್‌ನಲ್ಲಿರುವ ಡಲ್ಲಾಸ್ ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬಟ್ಟೆ ಬಿಚ್ಚಿ ಬೆತ್ತಲಾದ ಮಹಿಳೆ ಹಿಂಸಾತ್ಮಕವಾಗಿ ವರ್ತಿಸಿದ್ದಾಳೆ. ಹೌದು ಆಕೆ ನಾನು ಶುಕ್ರ ದೇವತೆ ಎಂದು ಚೀರಾಡುತ್ತಾ ಭದ್ರತಾ ಸಿಬ್ಬಂದಿಗಳಿಗೆ ಪೆನ್ಸಿಲ್‌ನಿಂದ ಇರಿದು, ರೆಸ್ಟೋರೆಂಟ್‌ ಸಿಬ್ಬಂದಿಗೆ ಕಚ್ಚಿ ರಾದ್ಧಾಂತ ಸೃಷ್ಟಿಸಿದ್ದಾಳೆ.

ಇದನ್ನೂ ಓದಿ
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಮಾರ್ಚ್ 14 ರಂದು ಈ ಘಟನೆ ನಡೆದಿದ್ದು, ಸಮಂತಾ ಪಾಲ್ಮಾ ಎಂದು ಗುರುತಿಸಲ್ಪಟ್ಟ ಮಹಿಳೆ ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿಗಳಿಗೆ ಪೆನ್ಸಿಲ್‌ನಿಂದ ಇರಿದು, ರೆಸ್ಟೋರೆಂಟ್ ಮ್ಯಾನೇಜರ್‌ಗೆ ಕಚ್ಚಿದ್ದಾಳೆ. ವಿಮಾನ ನಿಲ್ದಾಣದ ಉಪಾಹಾರ ಗೃಹದ ಮ್ಯಾನೇಜರ್ ಆಕೆಯನ್ನು ಹಿಡಿಯಲು ಪ್ರಯತ್ನಿಸಿದ ಸಂದರ್ಭದಲ್ಲಿ, ಮಹಿಳೆ ತಾನು ಶುಕ್ರ ದೇವತೆ ಎಂದು ಚೀರಾಡುತ್ತಾ ಕಚ್ಚಿದ್ದಾಳೆ. ನಂತರ ಆಕೆ ವಿಮಾನ ನಿಲ್ದಾಣದಲ್ಲಿನ ಮಾನಿಟರ್ ಒಡೆದುಹಾಕಿ ಅವಾಂತರ ಸೃಷ್ಟಿಸಿದ್ದಾಳೆ. ನಂತರ ಭದ್ರತಾ ಅಧಿಕಾರಿಗಳು ಅವಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್‌ ವಿಚಾರಣೆಯ ಸಮಯದಲ್ಲಿ, ಪಾಲ್ಮಾ ಮಾನಸಿಕವಾಗಿ ಕುಸಿದಿದ್ದ ನಾನು ಆ ದಿನ ಔಷಧಿಗಳನ್ನು ತೆಗೆದುಕೊಂಡಿಲ್ಲ ಹಾಗಾಗಿ ಆ ರೀತಿ ವರ್ತಿಸಿರುವುದಾಗಿ ಎಂದು ಹೇಳಿಕೊಂಡಿದ್ದಾಳೆ.

Kanwaljit Arora ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಓರ್ವ ಮಹಿಳೆ ಬೆತ್ತಾಲಾಗಿ ನಾನು ಶುಕ್ರ ದೇವತೆಯೆಂದು ಜೋರಾಗಿ ಚೀರಿ ಹೇಳುತ್ತಾ, ನೀರೆರಚುತ್ತಾ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪ್ರೇಯಸಿಯನ್ನು ಭೇಟಿಯಾಗಲು ಬಂದವನಿಗೆ ಮದುವೆ ಮಾಡಿಸಿದ ಕುಟುಂಬಸ್ಥರು

ಮಾರ್ಚ್‌ 27 ರಂದು ಶೇರ್‌ ಮಾಡಲಾದ ಈ ವಿಡಿಯೋ 16 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಹಿಳಾ ಭದ್ರತಾ ಸಿಬ್ಬಂದಿಗಳು ಇಲ್ಲವೇʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇತ್ತೀಚಿನ ದಿನಗಳಲ್ಲಿ ಮಾನಸಿಕ ಅನಾರೋಗ್ಯವು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ತುಂಬಾ ಗಂಭೀರವಾದ ವಿಚಾರವಾಗಿದೆ, ಅಮೆರಿಕದಲ್ಲಿ 25% ನಷ್ಟು ಮಹಿಳೆಯರು ಹೀಗೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:17 pm, Fri, 28 March 25