
ಅಮೆರಿಕ, ಆಗಸ್ಟ್ 01: ಒತ್ತಡ (stress) ಈ ಪದ ಕೇಳಿದ್ರೆ ಸಾಕು, ಎಲ್ಲರೂ ಎಷ್ಟು ಆರಾಮಾಗಿದ್ದಾರೆ, ನನ್ನ ಮಾತ್ರ ಈ ಸ್ಟ್ರೆಸ್ ಯಾಕೆ ಹೀಗೆ ಅಂದುಕೊಳ್ಳುವವರೇ ಹೆಚ್ಚು. ಆದರೆ ಈ ರೀತಿ ಮಾನಸಿಕ ಒತ್ತಡದಿಂದ ಮುಕ್ತರಾಗಲು ಒಬ್ಬರೊಬ್ಬರು ಒಂದೊಂದು ದಾರಿ ಕಂಡುಕೊಳ್ಳುತ್ತಾರೆ. ಕೆಲವರು ತಮ್ಮ ಆತ್ಮೀಯರ ಜೊತೆಗೆ ಮಾತನಾಡಿ ಒತ್ತಡದಿಂದ ಹೊರಬರಲು ಪ್ರಯತ್ನಿಸುತ್ತಾರೆ. ಆದರೆ ಅಮೆರಿಕದ (America) ಜನರು ತಮ್ಮ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳುವ ವಿಧಾನವೇ ಭಿನ್ನ. ಪ್ರಶಾಂತವಾದ ವಾತಾವರಣದ ನಡುವೆ ಎಲ್ಲರೂ ಸೇರಿ, ಜೋರಾಗಿ ಕಿರುಚುವ ಮೂಲಕ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳುತ್ತಾರಂತೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
@FoxNews ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಅಮೆರಿಕದ ಚಿಕಾಗೋದ ಜನರು ಪ್ರತಿ ಭಾನುವಾರ ಸಂಜೆಯ ವೇಳೆ ಮಿಚಿಗನ್ ಸರೋವರದಲ್ಲಿ ಸೇರಿಕೊಂಡು, ಜೊತೆಯಾಗಿ ಕಿರುಚುವ ಮೂಲಕ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಒಂದು ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಅಮೆರಿಕದ ಚಿಕಾಗೋದ ಜನರು ಮಿಚಿಗನ್ ಸರೋವರದ ಬಳಿ ಸೇರಿರುವುದನ್ನು ಕಾಣಬಹುದು. ಸಾಲಾಗಿ ನಿಂತುಕೊಂಡು ಜೋರಾಗಿ ಕಿರುಚುವ ಮೂಲಕ ತಮ್ಮ ಸ್ಟ್ರೆಸ್‌ನ್ನು ಹೊರಹಾಕುತ್ತಿರುವುದನ್ನು ನೀವಿಲ್ಲಿ ನೋಡಬಹುದು.
‘THE SCREAM CLUB’: Chicagoans are discovering a unique way to relieve stress by gathering on Sunday evenings to scream into Lake Michigan. pic.twitter.com/RUCgsNJtZC
— Fox News (@FoxNews) July 31, 2025
ಇದನ್ನೂ ಓದಿ: Video: ವಿದೇಶದಲ್ಲಿ ಲಕ್ಷ ಲಕ್ಷ ದುಡಿಯುತ್ತಿದ್ದ ದಂಪತಿ ನೆಮ್ಮದಿಗಾಗಿ ಸಿಂಗಾಪುರ ತೊರೆದು ಭಾರತಕ್ಕೆ ಬಂದ್ರು
ಜುಲೈ 31 ರಂದು ಶೇರ್ ಮಾಡಲಾದ ಈ ವಿಡಿಯೋ 10.6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು ಯಾರಾದರೂ ಅವರನ್ನು ಆ ನೀರಿಗೆ ತಳ್ಳಲು ಸಾಧ್ಯವೇ ಎಂದು ಕೇಳಿದ್ದಾರೆ. ಇನ್ನೊಬ್ಬರು, 70 ದಶಕದಲ್ಲಿ ಜನರು ಇದನ್ನು ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಮತ್ತೊಬ್ಬರು, ಒತ್ತಡ ಕಡಿಮೆ ಮಾಡಲು ಇದು ಉತ್ತಮ ಮಾರ್ಗ, ಕೆಲವೊಮ್ಮೆ ನಾನು ಕೂಡ ಹೀಗೆ ಮಾಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Fri, 1 August 25