Viral Video: ಪುಟ್ಟ ಪೋರನ ಬ್ಯಾಟಿಂಗ್ ನೋಡಿ ಅಮಿತಾ ಬಚ್ಚನ್ ಶಾಕ್​​​, ಧೋನಿ, ವಿರಾಟ್ ಕೊಹ್ಲಿಗೆ ಹೋಲಿಸಿದ ನೆಟ್ಟಿಗರು

ಮಗುವಿನ ಬ್ಯಾಟಿಂಗ್ ಕೌಶಲ್ಯವು ನಟ ಅಮಿತಾಬ್ ಬಚ್ಚನ್ ಅವರನ್ನು ದಿಗ್ಭ್ರಮೆಗೊಳಿಸಿದೆ. ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಗುವಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಆ ಮಗುವನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರೆಲ್ ಆಗಿದೆ.

Viral Video: ಪುಟ್ಟ ಪೋರನ ಬ್ಯಾಟಿಂಗ್ ನೋಡಿ ಅಮಿತಾ ಬಚ್ಚನ್ ಶಾಕ್​​​, ಧೋನಿ, ವಿರಾಟ್ ಕೊಹ್ಲಿಗೆ ಹೋಲಿಸಿದ ನೆಟ್ಟಿಗರು
ಅಮಿತಾಭ್
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:May 23, 2023 | 3:43 PM

ಕ್ರಿಕೆಟ್ ಇಷ್ಟ ಪಡದವರು ಯಾರಿದ್ದಾರೆ? ಏನು ಗೊತ್ತಿಲ್ಲ ಎಂದರೂ ಕೆಲವು ಕ್ರಿಕೆಟ್ ಆಟಗಾರರ ಹೆಸರನ್ನಾದರೂ ಕೇಳಿರುತ್ತಾರೆ. ಜೊತೆಗೆ ಅವರ ಬಗ್ಗೆ ಯಾರಾದರೂ ಮಾತನಾಡುವುದನ್ನಾದರೂ ಕೇಳಿರುತ್ತಾರೆ. ಅದಲ್ಲದೆ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತದ ಜನರಲ್ಲಿ ಕ್ರಿಕೆಟ್ ಬಗ್ಗೆ ಉತ್ಸಾಹ ಹುಟ್ಟುಹಾಕಿದೆ. ಅನೇಕ ವ್ಯಕ್ತಿಗಳು ಈ ರೋಮಾಂಚಕ ಪಂದ್ಯಗಳ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರೆ, ಇತರರು ವೈಯಕ್ತಿಕ ವಿಡಿಯೋಗಳ ಮೂಲಕ ತಮ್ಮ ಕ್ರಿಕೆಟ್ ಕೌಶಲ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ. ಖ್ಯಾತ ನಟ ಅಮಿತಾ ಬಚ್ಚನ್ ಕೂಡ ಕ್ರಿಕೆಟ್​​ಗೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವು ಒಂದು ಚಿಕ್ಕ ಮಗು ಬಹಳ ಉತ್ಸಾಹದಿಂದ ತನ್ನ ಸಣ್ಣ ಬ್ಯಾಟ್ ಹಿಡಿದು ಮುಂದೆ ಬರುವ ಚೆಂಡುಗಳನ್ನು ಬೀಸಿ ಹೊಡೆಯುವ ದೃಶ್ಯವನ್ನು ಸೆರೆಹಿಡಿಯಲಾಗಿದ್ದು, ಇದನ್ನು ನೋಡಿದವರು ಆ ಮಗುವಿನ ಬಗ್ಗೆ, ಅವನಲ್ಲಿರುವ ಉತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋವನ್ನು “ಭಾರತೀಯ ಕ್ರಿಕೆಟ್​​ನ ಭವಿಷ್ಯವು ತುಂಬಾ ಸುರಕ್ಷಿತ ಕೈಯಲ್ಲಿದೆ” ಎಂದು ಅಮಿತಾಬ್ ಬಚ್ಚನ್ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡ ಪೋಸ್ಟ್​​​ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮಗುವು ಒಂದರ ನಂತರ ಒಂದರಂತೆ ಚೆಂಡುಗಳನ್ನು ಸಕತ್ ಆಗಿ ಹೊಡೆಯುವುದನ್ನು ತೋರಿಸುತ್ತದೆ. ಈ ಮಗುವಿನ ಕೌಶಲ್ಯಗಳಿಂದ ಅನೇಕ ಜನರು ಪ್ರಭಾವಿತರಾಗಿರುವುದಂತೂ ಸತ್ಯ. ಆ ಮಗುವಿನ ಮುಖದಲ್ಲಿರುವ ಮುಗ್ದತೆ, ಯಾವುದೇ ರೀತಿಯ ಎಸೆತವಿರಲಿ ನಾನು ಅದನ್ನು ಚೆನ್ನಾಗಿ ಹ್ಯಾಂಡಲ್ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ, ಕ್ರಿಕೆಟ್​​​ನಲ್ಲಿರುವ ಉತ್ಸಾಹ ವಿಡಿಯೋ ನೋಡುಗರರನ್ನು ಮಂತ್ರ ಮುಗ್ಧರಾಗಿಸುತ್ತದೆ.

ಇದನ್ನೂ ಓದಿ: Viral News: ಸತತ 3 ದಶಕಗಳ ಕಾಲ ಕೋಮಾದಲ್ಲಿದ್ದ ಪತ್ನಿಗಾಗಿ ನಿಷ್ಠೆಯಿಂದ ಕಾಯುತ್ತಿದ್ದ ಪತಿ ಈಗ ಒಬ್ಬಂಟಿ

ಈ ವೀಡಿಯೊವನ್ನು ಕೆಲವೇ ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ, ಇದನ್ನು 4.6 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಶೇರ್ ಹಲವಾರು ಲೈಕ್ಸ್ ಮತ್ತು ಕಾಮೆಂಟ್​​​ಗಳನ್ನು ಸಹ ಗಳಿಸಿದೆ. ಅನೇಕರು ಮಗುವನ್ನು ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಗೆ ಹೋಲಿಸಿದ್ದಾರೆ. ಅವರಲ್ಲೊಬ್ಬ “ಫ್ಯೂಚರ್ ಧೋನಿ ಆವೃತ್ತಿ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ “ಮುಂಬರುವ ವಿರಾಟ್ ಕೊಹ್ಲಿ” ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇನ್ನೋರ್ವ ವ್ಯಕ್ತಿ “ಬ್ಯಾಟಿಂಗ್ನಲ್ಲಿ ಟೈಮಿಂಗ್ ಎಲ್ಲವೂ ಆಗಿದ್ದರೆ, ಈ ಪುಟ್ಟ ವ್ಯಕ್ತಿ ಸಮಯದ ಮೊದಲು ಮತ್ತು ಅದರಾಚೆಗೆ ಇದ್ದಾನೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ವಾಹ್, ತುಂಬಾ ಒಳ್ಳೆಯ ಕ್ರಿಕೆಟಿಗರು, ಸುಂದರವಾದ ಶಾರ್ಟ್ಸ್” ಎಂದು ಮತ್ತೋರ್ವ ವ್ಯಕ್ತಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:35 pm, Thu, 18 May 23

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್