Iran : ”ಇರಾನಿನಲ್ಲಿ ಮಹಿಳೆಯರು ಹಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಈಕೆ ಎಸ್ಫಹಾನ್ನಲ್ಲಿರುವ (Esphahan) ಐತಿಹಾಸಿಕ ಮಸೀದಿಯೊಂದರಲ್ಲಿ ಧೈರ್ಯದಿಂದ ಹಾಡುತ್ತಿದ್ದಾರೆ. ಸೆಕ್ಯೂರಿಟಿ ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಅವನಿಗೆ ಸುಮ್ಮನಿರುವಂತೆ ಸೂಚಿಸಿ ತನ್ನದೇ ಗಂಭೀರ ಲಹರಿಯಲ್ಲಿ ತೇಲಿದ್ದಾಳೆ. ಇರಾನಿನ ಇಂಥ ಕೆಚ್ಚೆದೆಯ ಮಹಿಳೆಯರು ಒಂದಿಲ್ಲಾ ಒಂದು ದಿನ ಮಹಿಳಾ ವಿರೋಧಿ ಆಡಳಿತವನ್ನು ಖಂಡಿತ ಉರುಳಿಸುತ್ತಾರೆ” ಎಂದು ಇರಾನಿನ ಪತ್ರಕರ್ತೆ ಮಾಸಿಹ್ ಅಲಿನೆಜಡ್ (Masih Alinejad) ಟ್ವೀಟ್ ಮಾಡಿದ್ದಾರೆ.
For women, singing is forbidden in Iran. This woman is bravely singing in one of Esfahan’s most historical mosques. When the security agent tried to stop her, she resisted and continued. Brave Iranian women like her will some day bring down this most anti-woman regime. pic.twitter.com/NvSgQqIFND
ಇದನ್ನೂ ಓದಿ— Masih Alinejad ?️ (@AlinejadMasih) July 6, 2023
ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು, ಅನೇಕರು ಈ ಮಹಿಳೆಯ ಧೈರ್ಯವನ್ನು ಮೆಚ್ಚುತ್ತಿದ್ದಾರೆ. ”ಆಕೆಯ ನಮ್ರತೆ ಮತ್ತು ಅಧಿಕಾರಯುತ ನಡೆ ಆ ಸೆಕ್ಯುರಿಟಿಯವನು ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯುವಂತೆ ಮಾಡಿತು, ಇದು ಅದ್ಭುತ’ ಎಂದಿದ್ದಾರೆ ಒಬ್ಬರು. ಆದರೆ ಈ ವಿಡಿಯೋದ ವಸ್ತುಸ್ಥಿತಿಯನ್ನೇ ಗ್ರಹಿಸದ ಒಬ್ಬರು, ‘ಆಕೆ ಮಸೀದಿಯಲ್ಲಿ ಬೂಟುಗಳನ್ನು ಏಕೆ ಧರಿಸಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ! ಈಕೆಯದು ಜಾದೂಕಂಠ, ಈಕೆಯ ಧೈರ್ಯಕ್ಕೆ ನನ್ನ ಸಲಾಮ್ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ”ಬಡವನು ತನ್ನ ಛತ್ರಿಯನ್ನು ತಾನೇ ಹಿಡಿದುಕೊಂಡು ರಾಜನಂತೆ ನಡೆಯಬೇಕು”
ನಮ್ಮ ಧರ್ಮಗಳು ಸಾರಿದ ಬೋಧನೆಯನ್ನು ಮರುಪರಿಶೀಲಿಸಬೇಕು. ಇದರಲ್ಲಿ ತೊಡಗಿಕೊಂಡರೆ ಕೆಲವೊಂದಿಷ್ಟು ಕಹಿ ಘಟನೆಗಳು ನಡೆಯುತ್ತವೆ, ಅಷ್ಟೇ ಏಕೆ ಯುದ್ಧಗಳೂ. ಆದರೆ ಅಂತಿಮ ಫಲಿತಾಂಶ ಉತ್ತಮವಾಗಿರುತ್ತದೆ. ನಮ್ಮ ಆಧುನಿಕ ಮಾರ್ಗವು ಇದನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ನನಗೆ ಇದರಲ್ಲಿ ಸಂಪೂರ್ಣ ನಂಬಿಕೆ ಇದೆ. ಇದಕ್ಕೆ ಸಾವಿರ ವರ್ಷಗಳೇ ಬೇಕಾಗಬಹುದು. ಆದರೂ ನಾವು ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಾರೆಯಾಗಿ ಇರಾನ್ ಸರ್ಕಾರವು ಮಹಿಳೆಯರ ಮೇಲೆ ಹೇರಿದ ನಿಷೇಧಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಅನೇಕ ನೆಟ್ಟಿಗರು ಒತ್ತಾಯಿಸಿದ್ದಾರೆ.
ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:16 pm, Fri, 7 July 23