
ಈಗಿನ ಕಾಲದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೊತೆಯಾಗಿ ಸಾಗುವ ಸತಿಪತಿಗಳು (Husband and wife) ಕಾಣಸಿಗುವುದೇ ವಿರಳ. ಸಣ್ಣ ಪುಟ್ಟ ವಿಷ್ಯಕ್ಕೂ ಮನಸ್ತಾಪ, ಜಗಳದಲ್ಲೇ ದಿನ ಕಳೆಯುವ ದಂಪತಿಗಳ ನಡುವೆ ಈ ವೃದ್ಧ ದಂಪತಿಗಳು ನಡುವಿನ ಪ್ರೀತಿ ನಿಜಕ್ಕೂ ವಿಭಿನ್ನ. ತನ್ನನ್ನು ಸದಾ ಖುಷಿಪಡಿಸುವ ಸಂಗಾತಿ ಸಿಕ್ಕರೆ ಅದಕ್ಕಿಂತ ಬೇರೆ ಏನು ಬೇಕು ಹೇಳಿ. ಈ ವಿಡಿಯೋ ನೋಡಿದ್ರೆ ನಿಮಗೂ ಹೀಗೆ ಅನಿಸುತ್ತೆ. ರೈಲಿನ ಪ್ರಯಾಣದ ವೇಳೆ ವೃದ್ಧ ಪತಿಯೊಬ್ಬರು ತಮ್ಮ ಪತ್ನಿಗೆ ಕಾಲ್ಗೆಜ್ಜೆ ಹಾಕುತ್ತಿದ್ದು ವೃದ್ಧೆ (old women) ಮೊಗದಲ್ಲಿ ಸಂತೋಷವು ಎದ್ದು ಕಾಣುತ್ತಿದೆ. ಈ ಭಾವನಾತ್ಮಕ ವಿಡಿಯೋ ಸದ್ಯ ವೈರಲ್ ಆಗಿದ್ದು, ಬಳಕೆದಾರರು ಇವರು ನಿಜವಾದ ಆದರ್ಶ ದಂಪತಿಗಳು ಎಂದಿದ್ದಾರೆ.
jishma unnikrishnan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವೃದ್ಧ ದಂಪತಿಯ ನಡುವಿನ ಶುದ್ಧ ಪ್ರೀತಿಯನ್ನು ಕಾಣಬಹುದು. ತಮಿಳುನಾಡಿನ ಕೋಯಮತ್ತೂರು ಮೂಲದ ಮಹಿಳೆ ಜಿಷ್ಮಾ ಉಣ್ಣಿಕೃಷ್ಣನ್ ಎಂಬುವವರು ತಮ್ಮ ರೈಲ್ವೆ ಪ್ರಯಾಣದ ವೇಳೆಯಲ್ಲಿ ವೃದ್ಧ ದಂಪತಿಯ ನಡುವಿನ ಶುದ್ಧ ಪ್ರೀತಿಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಈ ವಿಡಿಯೋಗೆ ನಾನು ಸಾಮಾನ್ಯ ರೈಲು ಪ್ರಯಾಣ ಮಾಡುತ್ತಿದ್ದೇನೆ ಎಂದು ಭಾವಿಸಿದ್ದೆ. ಆದರೆ ಈ ಒಂದು ಕ್ಷಣದಲ್ಲಿ ಜೀವಮಾನದ ಪ್ರೀತಿಗೆ ಸಾಕ್ಷಿಯಾದೆ” ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ವೃದ್ಧ ಪತಿಯು ತಮ್ಮ ಪತ್ನಿಗೆ ಕಾಲ್ಗೆಜ್ಜೆ ಹಾಕುತ್ತಿದ್ದಾರೆ. ಇತ್ತ ಪತಿಯು ತನ್ನ ಕಾಲಿಗೆ ಪ್ರೀತಿಯಿಂದ ಕಾಲ್ಗೆಜ್ಜೆ ತೊಡಿಸುತ್ತಿದ್ದರೆ ತನ್ನ ಕಾಲುಗಳನ್ನು ಚಾಚಿಕೊಂಡು ಕುಳಿತಿದ್ದು ವೃದ್ಧೆಯ ಮುಖದಲ್ಲಿ ಸಂತೋಷವು ಎದ್ದು ಕಾಣುತ್ತಿದೆ.
ಇದನ್ನೂ ಓದಿ: Video: ತಾಯಿಗಿಂತ ದೇವರಿಲ್ಲ; ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಮಹಾತಾಯಿ
ಈ ವಿಡಿಯೋ 1.7 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದಂಪತಿಯಿಂದ ಪ್ರೀತಿ ಮತ್ತು ಬಾಂಧವ್ಯವನ್ನು ನೋಡಿ ಇಂದಿನ ದಂಪತಿಗಳು ಕಲಿಯಬೇಕು ಎಂದಿದ್ದಾರೆ. ಇನ್ನೊಬ್ಬರು ವಯಸ್ಸು ಏರಬಹುದು,ಆದರೆ ಪ್ರೀತಿ ಮಾತ್ರ ಶಾಶ್ವತವಾಗಿರುತ್ತೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಇಂತಹ ಜೋಡಿಗಳನ್ನು ನೋಡುವುದಕ್ಕೆ ಖುಷಿಯಾಗುತ್ತದೆ, ನಿಮ್ಮ ಪ್ರೀತಿಗೆ ಹೀಗೆಯೇ ಇರಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ